
ರಾವಲ್ಪಿಂಡಿ: ನಾಯಕ ಬಾಬರ್ ಅಝಾಮ್ ಸ್ಫೋಟಕ ಅರ್ಧ ಶತಕದ ನೆರವಿನಿಂದ ಜಿಂಬಾಬ್ವೆ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ ಪಾಕಿಸ್ತಾನ ತಂಡ 6 ವಿಕೆಟ್ ಜಯ ಗಳಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಆತಿಥೇಯ ಪಾಕ್ 1-0ಯ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ, ಬ್ರೆಂಡನ್ ಟೇಲರ್ 20, ಸೀನ್ ವಿಲಿಯಮ್ಸ್ 25, ವೆಸ್ಲಿ ಮಾಧೆವೆರೆ 70 (48 ಎಸೆತ), ಎಲ್ಟನ್ ಚಿಗುಂಬುರಾ 21, ರಿಯಾನ್ ಬರ್ಲ್ 8 ರನ್ ಸೇರ್ಪಡೆಯೊಂದಿಗೆ 20 ಓವರ್‌ನಲ್ಲಿ 6 ವಿಕೆಟ್ ನಷ್ಟದೊಂದಿಗೆ 156 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಪಾಕಿಸ್ತಾನದಿಂದ ಫಖರ್ ಝಮಾನ್ 19, ಬಾಬರ್ ಅಝಾಮ್ 82 (55), ಮೊಹಮ್ಮದ್ ಹಫೀಝ್ 36, ಖುಷ್ದಿಲ್ ಶಾ 5 ರನ್ ಸೇರಿಸಿದರು. ತಂಡ 18.5ನೇ ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಿತು. ಬಾಬರ್ ಅಝಾಮ್ ಪಂದ್ಯಶ್ರೇಷ್ಠರೆನಿಸಿದರು.
ಜಿಂಬಾಬ್ವೆ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಹ್ಯಾರಿಸ್ ರೌಫ್ 2, ವಹಾಬ್ ರಿಯಾಝ್ 2, ಮೊಹಮ್ಮದ್ ಹಸ್ನೇನ್ 1, ಉಸ್ಮಾನ್ ಖಾದಿರ್ 1 ವಿಕೆಟ್ ಪಡೆದರೆ, ಪಾಕ್ ಇನ್ನಿಂಗ್ಸ್‌ನಲ್ಲಿ ಬ್ಲೆಸಿಂಗ್ ಮುಝರ್ಬಾನಿ 2, ತೆಂದೈ ಚತಾರಾ 1, ರಿಚರ್ಡ್ ಎನ್‌ಗವರ 1 ವಿಕೆಟ್ ಪಡೆದರು.