ದಕ್ಷಿಣ ಆಫ್ರಿಕಾ ವಿರುದ್ಧದ ಟಿ20, ಏಕದಿನ ಸರಣಿಗೆ ಪಾಕಿಸ್ತಾನ ಮಹಿಳಾ ತಂಡ ಪ್ರಕಟ
ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯೊಂದಿಗೆ ಆಟಕ್ಕೆ ಮರಳಲಿದ್ದು, ಅದರ ನಂತರ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
ಪಾಕಿಸ್ತಾನ ತಂಡವು ಫೆಬ್ರವರಿಯಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿತ್ತು. ಸುದೀರ್ಘ ಅಂತರದ ನಂತರ, ಪ್ರತಿಭಾನ್ವಿತ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪಾಕಿಸ್ತಾನ ಮಹಿಳಾ ತಂಡ ಹೇಗೆ ಆಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಮಹಿಳಾ ತಂಡವು ಟಿ20 ವಿಶ್ವಕಪ್‌ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು. ಫೈನಲ್‌ನಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡದ ವಿರುದ್ಧ 19 ರನ್‌ಗಳಿಂದ ಸೋತರು.
ಶುಕ್ರವಾರ, ಆಗಸ್ಟ್ 11ರಂದು ಪಾಕಿಸ್ತಾನದ ರಾಷ್ಟ್ರೀಯ ಮಹಿಳಾ ತಂಡದ ಮುಖ್ಯ ಆಯ್ಕೆಗಾರ ಸಲೀಂ ಜಾಫರ್ ಅವರು ಟಿ20 ಮತ್ತು ಏಕದಿನ ಪಂದ್ಯಗಳಿಗೆ 15 ಆಟಗಾರರ ತಂಡವನ್ನು ಪ್ರಕಟಿಸಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ 2023ರ ಏಷ್ಯನ್ ಗೇಮ್ಸ್‌ಗಾಗಿ ಪಾಕಿಸ್ತಾನ ತಂಡದಲ್ಲಿ ಸೇರ್ಪಡೆಗೊಂಡಿರುವ ಯುವ ಆಟಗಾರ್ತಿ ಶವಾಲ್ ಜುಲ್ಫಿಕರ್ ಅವರನ್ನು ಮೂರು ಟಿ20 ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ. ಅನುಭವಿ ಪಾಕಿಸ್ತಾನಿ ವೇಗಿ ಡಯಾನಾ ಬೇಗ್ ಬೆರಳಿನ ಗಾಯದಿಂದಾಗಿ ಆರು ತಿಂಗಳ ಕಾಲ ತಂಡದಿಂದ ಹೊರಗುಳಿದ ನಂತರ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.
ಟಿ20 ವಿಶ್ವಕಪ್ ಸೋಲಿನ ನಂತರ ನಾಯಕತ್ವ ತ್ಯಜಿಸಿದ ಬಿಸ್ಮಾ ಮರೂಫ್ ಅವರಿಂದ ಅಧಿಕಾರ ವಹಿಸಿಕೊಂಡ ನಂತರ, ಅನುಭವಿ ಆಲ್‌ರೌಂಡರ್ ನಿದಾ ದಾರ್ ಪಾಕಿಸ್ತಾನ ಮಹಿಳಾ ತಂಡವನ್ನು ಮುನ್ನಡೆಸಲಿದ್ದಾರೆ. ಸಲೀಂ ಮತ್ತು ನಾಯಕಿ ನಿದಾ ದಾರ್ ನಡುವಿನ ಮಾತುಕತೆ ಬಳಿಕ ತಂಡಗಳನ್ನು ಆಯ್ಕೆ ಮಾಡಲಾಗಿದೆ.
ಟಿ20 ತಂಡಕ್ಕೆ ಪುನರಾಗಮನ ಮಾಡಿದ ಸೈಯದಾ ಅರೂಬ್ ಶಾ, ನತಾಲಿಯಾ ಪರ್ವೈಜ್
2020ರಲ್ಲಿ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದ 19 ವರ್ಷದ ಆಲ್‌ರೌಂಡರ್ ಸೈಯದಾ ಅರೂಬ್ ಷಾ ಇದೀಗ ಟಿ20 ತಂಡಕ್ಕೆ ಮರಳಿದ್ದಾರೆ.
ಸುಮಾರು ಐದು ವರ್ಷಗಳ ಹಿಂದೆ ಪಾಕಿಸ್ತಾನ ತಂಡಕ್ಕಾಗಿ ಕೊನೆಯ ಪಂದ್ಯವನ್ನು ಆಡಿದ ನಂತರ, ನಟಾಲಿಯಾ ಪರ್ವೈಜ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಸೇರ್ಪಡೆ ಕುರಿತು ಮಾತನಾಡಿರುವ ಸಲೀಂ ಜಾಫರ್, ಇವರಿಬ್ಬರ ಇತ್ತೀಚಿನ ಪ್ರದರ್ಶನಗಳು ಮತ್ತು ಸುಧಾರಿತ ಫಿಟ್‌ನೆಸ್ ಮಟ್ಟವನ್ನು ಶ್ಲಾಘಿಸಿದರು.
"ಎಚ್ಚರಿಕೆಯ ಪರಿಗಣನೆಯ ನಂತರ, ನಾವು ಟಿ20 ಸ್ವರೂಪದಲ್ಲಿ ಸೈಯದಾ ಅರೂಬ್ ಶಾ ಮತ್ತು ನಟಾಲಿಯಾ ಪರ್ವೈಜ್ ಅವರನ್ನು ಮರಳಿ ಸೇರ್ಪಡೆಗೊಳಿಸಲು ನಿರ್ಧರಿಸಿದ್ದೇವೆ. ಇತ್ತೀಚಿನ ಪ್ರದರ್ಶನಗಳು ಮತ್ತು ಸುಧಾರಿತ ಫಿಟ್‌ನೆಸ್ ಗಮನಾರ್ಹವಾಗಿದೆ. ಅವರು ತಂಡಕ್ಕೆ ಹೊಸ ಆಯಾಮವನ್ನು ತರುತ್ತಾರೆ ಎಂದು ನಾವು ಭಾವಿಸುತ್ತೇವೆ," ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆಯಲ್ಲಿ ಸಲೀಂ ಜಾಫರ್ ತಿಳಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗಾಗಿ ಪಾಕಿಸ್ತಾನ ಮಹಿಳಾ ತಂಡ
ನಿದಾ ದಾರ್ (ನಾಯಕ), ಅಲಿಯಾ ರಿಯಾಜ್, ಬಿಸ್ಮಾ ಮರೂಫ್, ಡಯಾನಾ ಬೇಗ್, ಫಾತಿಮಾ ಸನಾ, ಮುನೀಬಾ ಅಲಿ, ನಜಿಹಾ ಅಲ್ವಿ (ವಿಕೆಟ್ ಕೀಪರ್), ನಶ್ರಾ ಸುಂಧು, ನಟಾಲಿಯಾ ಪರ್ವೈಜ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್, ಶವಾಲ್ ಜುಲ್ಫಿಕರ್, ಸಿದ್ರಾ ಅಮೀನ್, ಸೈಯದಾ ಅರೂಬ್ ಶಾ, ಉಮ್-ಎ-ಹನಿ.
ಮೀಸಲು ಆಟಗಾರ್ತಿಯರು - ಅನೂಶಾ ನಾಸಿರ್, ಒಮೈಮಾ ಸೊಹೈಲ್, ವಹೀದಾ ಅಖ್ತರ್
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗಾಗಿ ಪಾಕಿಸ್ತಾನ ಮಹಿಳಾ ತಂಡ
ನಿದಾ ದಾರ್ (ನಾಯಕ), ಅಲಿಯಾ ರಿಯಾಜ್, ಬಿಸ್ಮಾ ಮರೂಫ್, ಡಯಾನಾ ಬೇಗ್, ಫಾತಿಮಾ ಸನಾ, ಗುಲಾಮ್ ಫಾತಿಮಾ, ಮುನೀಬಾ ಅಲಿ, ನಶ್ರಾ ಸುಂಧು, ಒಮೈಮಾ ಸೊಹೈಲ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್, ಸಿದ್ರಾ ಅಮೀನ್, ಸಿದ್ರಾ ನವಾಜ್ (ವಿಕೆಟ್ ಕೀಪರ್), ಉಮ್-ಎ-ಹನಿ, ವಹೀದಾ ಅಖ್ತರ್.
ಮೀಸಲು ಆಟಗಾರ್ತಿಯರು - ನಜಿಹಾ ಅಲ್ವಿ, ನಟಾಲಿಯಾ ಪರ್ವೈಜ್, ತುಬಾ ಹಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications