For Quick Alerts
ALLOW NOTIFICATIONS  
For Daily Alerts
 

ನಾನು ವಿಶ್ವದ ನಂಬರ್ 1 ಬ್ಯಾಟರ್: ವಿರಾಟ್ ಕೊಹ್ಲಿಗಿಂತ ಶ್ರೇಷ್ಠ ಎಂದ ಪಾಕಿಸ್ತಾನದ ಕ್ರಿಕೆಟಿಗ!

Pakistani batter Khurram Manzoor Claims That He Was No.1 Batter And Better Than Virat Kohli

ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಬ್ಯಾಟರ್. ಹಲವು ದಾಖಲೆಗಳನ್ನು ಬರೆದಿರುವ ಈ ಆಟಗಾರ ತನ್ನನ್ನು ತಾನು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳದೇ ಇದ್ದರೂ, ಕೆಲವು ಕ್ರಿಕೆಟಿಗರ ಅಭಿಮಾನಿಗಳು ಮಾತ್ರ ಕೊಹ್ಲಿ ಜೊತೆ ಇತರೆ ಬ್ಯಾಟರ್ ಗಳನ್ನು ಹೋಲಿಕೆ ಮಾಡುತ್ತಾರೆ.

ಆದರೆ, ಪಾಕಿಸ್ತಾನದ ಕ್ರಿಕೆಟರ್ ಒಬ್ಬ ಮಾತ್ರ ನಾನು ವಿರಾಟ್ ಕೊಹ್ಲಿಗಿಂತ ಶ್ರೇಷ್ಠ ಬ್ಯಾಟರ್ ಎಂದು ಹೇಳಿಕೊಂಡಿದ್ದಾರೆ. ಖುರ್ರಂ ಮಂಜೂರ್ ಎನ್ನುವ ಕ್ರಿಕೆಟಿಗ ಏಕದಿನ ಕ್ರಿಕೆಟ್‌ನಲ್ಲಿ ನಾನು ಅತ್ಯುತ್ತಮ ದಾಖಲೆ ಹೊಂದಿದ್ದೇನೆ, ವಿರಾಟ್ ಕೊಹ್ಲಿಗಿಂತ ನಾನು ಉತ್ತಮ ಅಂಕಿಅಂಶ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನಾದಿರ್ ಅಲಿ ಎನ್ನುವವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಮಂಜೂರ್, ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡಲು ಬಯಸುವಿದಿಲ್ಲ ಎಂದು ಹೇಳಿದರು. ಆದರೂ, ತಾನು ಏಕದಿನ ಕ್ರಿಕೆಟ್‌ನಲ್ಲಿ ನಂಬರ್ 1 ನನ್ನ ನಂತರ ವಿರಾಟ್ ಕೊಹ್ಲಿ ನಿಲ್ಲುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ರಾಷ್ಟ್ರೀಯ ತಂಡ ಆಯ್ಕೆದಾರರು ನನ್ನನ್ನು ಸತತವಾಗಿ ಕಡೆಗಣಿಸಿದ್ದಾರೆ ಎಂದು ಮಂಜೂರ್ ಆರೋಪಿಸಿದ್ದಾರೆ.

 ಕೊಹ್ಲಿಗಿಂತ ಶ್ರೇಷ್ಟ ದಾಖಲೆ ಇದೆ ಎಂದ ಮಂಜೂರ್

ಕೊಹ್ಲಿಗಿಂತ ಶ್ರೇಷ್ಟ ದಾಖಲೆ ಇದೆ ಎಂದ ಮಂಜೂರ್

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಮ್ಮ ದಾಖಲೆಯನ್ನು ತೋರಿಸಿರುವ ಅವರು, "ವಿರಾಟ್ ಕೊಹ್ಲಿ ಜೊತೆ ಹೋಲಿಕೆ ಮಾಡುತ್ತಿಲ್ಲ. 50 ಓವರ್ ಗಳ ಕ್ರಿಕೆಟ್‌ನಲ್ಲಿ ಟಾಪ್ 10ರಲ್ಲಿ ಯಾರೇ ಇದ್ದರೂ ಕೂಡ ನಾನು ವಿಶ್ವದ ನಂಬರ್ 1. ಕೊಹ್ಲಿ ನನ್ನ ನಂತರ ಎರಡನೇ ಸ್ಥಾನದಲ್ಲಿ ಬರುತ್ತಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ನಾನು ಅತ್ಯುತ್ತಮ ದಾಖಲೆ ಹೊಂದಿದ್ದೇನೆ" ಎಂದು ಅವರು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಪ್ರತಿ ಆರು ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಗಳಿಸಿದ್ದಾರೆ. ಆದರೆ, ನಾನು ಪ್ರತಿ 5.68 ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ್ದೇನೆ. ಕಳೆದ 10 ವರ್ಷಗಳಲ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ನನ್ನ ರನ್ ಗಳಿಕೆ ಸರಾಸರಿ 53 ಆಗಿದೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿಶ್ವದಲ್ಲಿ 5ನೇ ಸ್ಥಾನಲ್ಲಿದೆ ಎಂದು ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ or ವಿರಾಟ್ ಕೊಹ್ಲಿ: ಭಾರತದ ಈ ದಿಗ್ಗಜರಲ್ಲಿ ಶುಭ್ಮನ್ ಗಿಲ್ ಆಯ್ಕೆ ಯಾರು?

 ಮಂಜೂರ್ ಗಳಿಸಿದ ರನ್‌ಗಳ ವಿವರ

ಮಂಜೂರ್ ಗಳಿಸಿದ ರನ್‌ಗಳ ವಿವರ

2009ರಲ್ಲಿ ಮಂಜೂರ್ ಶ್ರೀಲಂಕಾ ವಿರುದ್ಧ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದರು. 7 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ಅವರು 33.71 ಸರಾಸರಿಯಲ್ಲಿ 236 ರನ್ ಗಳಿಸಿದ್ದಾರೆ. 3 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆತ ಗಳಿಸಿರುವುದು ಕೇವಲ 10 ರನ್ ಮಾತ್ರ. 16 ಟೆಸ್ಟ್ ಪಂದ್ಯಗಳನ್ನಾಡಿರುವ ಮಂಜೂರ್, 30 ಇನ್ನಿಂಗ್ಸ್‌ಗಳಲ್ಲಿ 28.17 ಸರಾಸರಿಯಲ್ಲಿ 817 ರನ್ ಗಳಿಸಿದ್ದಾರೆ.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ 165 ಇನ್ನಿಂಗ್ಸ್‌ಗಳನ್ನಾಡಿರುವ ಮಂಜೂರ್, 53.52 ಸರಾಸರಿಯಲ್ಲಿ 7922 ರನ್ ಗಳಿಸಿದ್ದಾರೆ. 27 ಶತಕಗಳು ಮತ್ತು 39 ಅರ್ಧಶತಕಗಳನ್ನು ಬಾರಿಸಿದ್ದಾರೆ. ತಮ್ಮ ಕೊನೆಯ 48 ಇನ್ನಿಂಗ್ಸ್‌ಗಳಲ್ಲಿ 24 ಶತಕಗಳನ್ನು ಸಿಡಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

 ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ದೂರು

ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ದೂರು

ಇಷ್ಟೆಲ್ಲಾ ಉತ್ತಮ ದಾಖಲೆಗಳನ್ನು ಹೊಂದಿದ್ದರೂ ಯಾವುದೇ ಕಾರಣವಿಲ್ಲದೆ ನನ್ನನ್ನು ರಾಷ್ಟ್ರೀಯ ತಂಡದಿಂದ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ರನ್ ಗಳಿಸುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ರನ್ ಗಳಿಸುವುದು ಒಂದೆಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದು. ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಕೊಹ್ಲಿ ಹೆಸರನ್ನು ಬಳಸಿಕೊಳ್ಳುವುದೇಕೆ ಎಂದು ಕಿಡಿ ಕಾರಿದ್ದಾರೆ. ಏನಾದರೂ, ಕೆಲವು ಆಟಗಾರರು ಉತ್ತಮ ಪ್ರದರ್ಶನ ನೀಡಿದರೂ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಅದೃಷ್ಟವೂ ಇರಬೇಕು ಎನ್ನುವುದಂತೂ ಸತ್ಯ.

Story first published: Wednesday, January 25, 2023, 15:04 [IST]
Other articles published on Jan 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+