ಸಚಿನ್ ತೆಂಡೂಲ್ಕರ್ or ವಿರಾಟ್ ಕೊಹ್ಲಿ: ಭಾರತದ ಈ ದಿಗ್ಗಜರಲ್ಲಿ ಶುಭ್ಮನ್ ಗಿಲ್ ಆಯ್ಕೆ ಯಾರು?

ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ, ಜನವರಿ 24ರಂದು ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 90 ರನ್‌ಗಳಿಂದ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿತು.

ಈ ಸರಣಿ ಗೆಲುವಿನೊಂದಿಗೆ ಆತಿಥೇಯ ಭಾರತ ಮೂರು ಪಂದ್ಯಗಳ ಸರಣಿಯನ್ನು ಗೆದ್ದು, ಕಳೆದ ವರ್ಷ ನ್ಯೂಜಿಲೆಂಡ್‌ನಲ್ಲಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿತು. ಅಲ್ಲದೇ, ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡವನ್ನು ಕೆಳಗಿಳಿಸಿ ಭಾರತ ನೂತನ ನಂ.1 ಏಕದಿನ ತಂಡವಾಯಿತು.

IND vs NZ: 3 ಪಂದ್ಯಗಳ ODI ಸರಣಿಯಲ್ಲಿ ಬಾಬರ್ ಅಜಂ ದಾಖಲೆ ಸರಿಗಟ್ಟಿದ ಶುಭ್ಮನ್ ಗಿಲ್IND vs NZ: 3 ಪಂದ್ಯಗಳ ODI ಸರಣಿಯಲ್ಲಿ ಬಾಬರ್ ಅಜಂ ದಾಖಲೆ ಸರಿಗಟ್ಟಿದ ಶುಭ್ಮನ್ ಗಿಲ್

ಸದ್ಯ ಭಾರತ ಕ್ರಿಕೆಟ್ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಫಾರ್ಮ್ ಅತ್ಯುತ್ತಮವಾಗಿದೆ. ಇದು ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ವರ್ಷದಲ್ಲಿ ತಂಡಕ್ಕೆ ಅನುಕೂಲವಾಗಿದೆ.

ಮಂಗಳವಾರ ಇಂದೋರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಮೋಘ 112 ರನ್ ಗಳಿಸಿದ ಬಲಗೈ ಬ್ಯಾಟರ್, ಇದುವರೆಗಿನ 21 ಪಂದ್ಯಗಳಲ್ಲಿ 4ನೇ ಏಕದಿನ ಶತಕವನ್ನು ಬಾರಿಸಿದರು.

ಬಾಬರ್ ಅಜಂ ದಾಖಲೆ ಸರಗಟ್ಟಿದ ಶುಭ್ಮನ್ ಗಿಲ್

ಬಾಬರ್ ಅಜಂ ದಾಖಲೆ ಸರಗಟ್ಟಿದ ಶುಭ್ಮನ್ ಗಿಲ್

ಪ್ರಸ್ತುತ 50 ಓವರ್‌ಗಳ ಸ್ವರೂಪದಲ್ಲಿ ಶುಭ್ಮನ್ ಗಿಲ್ 73.76ರ ಸರಾಸರಿ ಹೊಂದಿದ್ದಾರೆ. ಕಿವೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಗಿಲ್ 112 ರನ್‌ಗಳ ಗಳಿಸುತ್ತಿದ್ದಂತೆಯೇ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅತಿ ಹೆಚ್ಚು 360 ರನ್ ಗಳಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ದಾಖಲೆಯನ್ನು ಸರಿಗಟ್ಟಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ.

ಮಂಗಳವಾರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾದ ವಿಡಿಯೋ ಸಂದರ್ಶನದಲ್ಲಿ, ಭಾರತದ ದಿಗ್ಗಜ ಬ್ಯಾಟ್ಸ್‌ಮನ್‌ಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಕಠಿಣ ಪ್ರಶ್ನೆಯನ್ನು ಶುಭ್ಮನ್ ಗಿಲ್‌ಗೆ ಕೇಳಲಾಯಿತು.

ವಿರಾಟ್ ಕೊಹ್ಲಿ ಭಾಯ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ

ವಿರಾಟ್ ಕೊಹ್ಲಿ ಭಾಯ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ

23 ವರ್ಷದ ಯುವ ಆಟಗಾರ ಶುಭ್ಮನ್ ಗಿಲ್ ಉತ್ತರಿಸಿ, "ನಾನು ವಿರಾಟ್ ಕೊಹ್ಲಿ ಭಾಯ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಏಕೆಂದರೆ, ನನ್ನ ತಂದೆ ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿಯಾಗಿರುವುದರಿಂದ ನಾನು ಕ್ರಿಕೆಟ್ ಆಡಲು ಪ್ರಾರಂಭಿಸಲು ಸಚಿನ್ ಸರ್ ಕಾರಣ".

"ಸಚಿನ್ ತೆಂಡೂಲ್ಕರ್ ಸರ್ ನಿವೃತ್ತಿಯಾದಾಗ, ನಾನು ಕ್ರಿಕೆಟ್ ಆಟವನ್ನು ಅರ್ಥಮಾಡಿಕೊಳ್ಳಲು ತುಂಬಾ ಚಿಕ್ಕವನಾಗಿದ್ದೆ. ನಾನು ಕ್ರಿಕೆಟ್ ಸ್ವಲ್ಪ ಹೆಚ್ಚು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗ, ನಾನು ವಿರಾಟ್ ಭಾಯ್ ಅವರ ಆಟವನ್ನು ನೋಡಿದ್ದೇನೆ. ನಾನು ಬ್ಯಾಟರ್ ಆಗಿ ಅವರಿಂದ ಸಾಕಷ್ಟು ಕಲಿತಿದ್ದೇನೆ," ಎಂದು ಶುಭ್ಮನ್ ಗಿಲ್ ತಿಳಿಸಿದರು.

ರೋಹಿತ್ ಶರ್ಮಾ ಮೂರು ವರ್ಷಗಳ ನಂತರ ಮೊದಲ ಏಕದಿನ ಶತಕ

ರೋಹಿತ್ ಶರ್ಮಾ ಮೂರು ವರ್ಷಗಳ ನಂತರ ಮೊದಲ ಏಕದಿನ ಶತಕ

ಇನ್ನು ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದ ಕುರಿತು ಹೇಳುವುದಾದರೆ, ನಾಯಕ ರೋಹಿತ್ ಶರ್ಮಾ ಮೂರು ವರ್ಷಗಳ ನಂತರ ತಮ್ಮ ಮೊದಲ ಏಕದಿನ ಶತಕವನ್ನು ಬಾರಿಸಿದರು. 2020ರ ಜನವರಿಯ ನಂತರ ರೋಹಿತ್ ಶರ್ಮಾ 85 ಎಸೆತಗಳಲ್ಲಿ 101 ರನ್ ಗಳಿಸಿದರು.

ಇನ್ನು, ಶುಭ್ಮನ್ ಗಿಲ್ ತಮ್ಮ ಸ್ಫೋಟಕ ಆಟವನ್ನು ಮುಂದುವರೆಸಿ, ಈ ಸರಣಿಯಲ್ಲಿ ಎರಡನೇ ಶತಕವನ್ನು ದಾಖಲಿಸಿದರು. ಶುಭ್ಮನ್ ಗಿಲ್ 78 ಎಸೆತಗಳಲ್ಲಿ 112 ರನ್ ಗಳಿಸಿದರು. ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಜೋಡಿ ಆರಂಭಿಕ ವಿಕೆಟ್‌ಗೆ ನ್ಯೂಜಿಲೆಂಡ್ ವಿರುದ್ಧ ದಾಖಲೆಯ 212 ರನ್ ಪೇರಿಸಿದರು. ಅಂತಿಮವಾಗಿ ಭಾರತ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 385 ರನ್ ಕಲೆಹಾಕಿತು.

ಬೃಹತ್ ಗುರಿ ಬೆನ್ನತ್ತಿದ ಪ್ರವಾಸಿ ನ್ಯೂಜಿಲೆಂಡ್ ತಂಡ 41.2 ಓವರ್‌ಗಳಲ್ಲಿ 295 ರನ್‌ಗಳಿಗೆ ಸರ್ವಪತನ ಕಂಡಿತು. ಕಿವೀಸ್ ಪರ ಡೆವೊನ್ ಕಾನ್ವೇ 100 ಎಸೆತಗಳಲ್ಲಿ 138 ರನ್ ಬಾರಿಸಿದರೂ, ಗೆಲುವಿನ ಗುರಿ ತಲುಪಲು ಸಾಧ್ಯವಾಗಲಿಲ್ಲ. ಭಾರತದ ಪರ ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, January 25, 2023, 14:06 [IST]
Other articles published on Jan 25, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X