ಪುಲ್ವಾಮಾ ದಾಳಿ: ಪಾಕ್ ಕ್ರಿಕೆಟ್ ಅಭಿಮಾನಿ ಆದಿಲ್ ಮನದ ಮಾತು ಕೇಳಿ!


ಇಸ್ಲಮಾಬಾದ್, ಫೆಬ್ರವರಿ 21: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ 2019ರ ವಿಶ್ವಕಪ್ ನಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ವಿರುದ್ಧ ಪಂದ್ಯವನ್ನಾಡಬಾರದು. ವಿಶ್ವಕಪ್‌ನಿಂದಲೇ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ನಿಷೇಧಿಸಬೇಕು ಎಂಬ ಮಾತುಗಳು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಕೇಳಿ ಬಂದಿದೆ. ಆದರೆ ಪಾಕ್ ಕ್ರಿಕೆಟ್ ಅಭಿಮಾನಿ ಆದಿಲ್ ತಾಜ್ ಮಾತುಗಳು ಮನಕ್ಕೆ ತಾಗುವಂತಿದೆ (ವಿಡಿಯೋ, ಚಿತ್ರ ಕೃಪೆ: ಎಎನ್‌ಐ).
ಪಾಕಿಸ್ತಾನದಲ್ಲಿರುವ ಕ್ರಿಕೆಟ್ ಅಭಿಮಾನಿ ಆದಿಲ್ ತಾಜ್ ಅವರ ಮಾತುಗಳು ಯಾಕೆ ಮನಸ್ಸಿಗೆ ತಾಗುತ್ತವೆ ಎನ್ನುವುದಕ್ಕೆ ಕಾರಣಗಳಿಗೆ. ಇವೆಲ್ಲದನ್ನೂ ವಿವರಿಸುವ ಮುನ್ನ 2018ರ ಭಾರತ-ಪಾಕಿಸ್ತಾನ ಏಷ್ಯಕಪ್ ಕ್ರಿಕೆಟ್ ಪಂದ್ಯದ ವೇಳೆ ಭಾರತದ ರಾಷ್ಟ್ರೀಯ ಗೀತೆಯನ್ನು ಮನಸಾರೆ ಹಾಡಿ ಅಪ್ಪಟ ಕ್ರೀಡಾಸ್ಫೂರ್ತಿ-ಪ್ರೀತಿ ಮೆರೆದಿದ್ದು ಇದೇ ಆದಿಲ್ ತಾಜ್ ಅನ್ನೋದನ್ನು ಮೊದಲು ಉಲ್ಲೇಖಿಸಬೇಕು.
ಅಫ್ರಿದಿ ಮನೆಯಲ್ಲಿ ಸಚಿನ್ ಚಿತ್ರ!
ಪಾಕ್ ಕ್ರಿಕೆಟರ್ ಶಾಹಿದ್ ಅಫ್ರಿದಿ ಮನೆಯಲ್ಲಿ ಈಗಲೂ ಸಚಿನ್ ತೆಂಡೂಲ್ಕರ್ ಚಿತ್ರವಿದೆ. ಅಫ್ರಿದಿ ನಿವೃತ್ತಿ ಹೊಂದಿದ್ದಾಗ ಅವರಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ತನ್ನ ತಂಡದ ಆಟಗಾರರ ಸಹಿಯಿದ್ದ ಉಡುಗೊರೆಯನ್ನು ಪ್ರೀತಿಪೂರ್ವಕವಾಗಿ ನೀಡಿದ್ದರು. ಇಂಥ ಕ್ರಿಕೆಟ್ ಪ್ರೀತಿ ನಮ್ಮನ್ನು ಸದಾ ಕಾಯಬೇಕು ಎಂದು ಆದಿಲ್ ಹೇಳಿದ್ದಾರಲ್ಲದೆ ಜೊತೆಗೊಂದಿಷ್ಟು ಪ್ರಮುಖ ವಿಚಾರಗಳನ್ನು ಹರವಿಕೊಂಡಿದ್ದಾರೆ (ಕೆಳಗಿನ ವಿಡಿಯೋ ನೋಡಿ).

ಅರ್ಥಪೂರ್ಣ ಮಾತುಗಳು
ಪುಲ್ವಾಮಾ ದಾಳಿ ಮತ್ತು ಪ್ರತೀಕಾರವಾಗಿ ಭಾರತ-ಪಾಕ್ ಕ್ರಿಕೆಟ್ ತಂಡಗಳ ಬಗೆಗಿನ ನಿಲುವಿನ ಕುರಿತಾಗಿ ಟ್ವಿಟರ್ ವಿಡಿಯೋದಲ್ಲಿ ಮಾತನಾಡಿರುವ ಆದಿಲ್, ಇತ್ತಂಡಗಳ ವಿಶ್ವಕಪ್ ಪಂದ್ಯ ನಡೆದರೆ ಚೆನ್ನ ಎಂದು ಹೇಳಿಕೊಂಡಿದ್ದಾರೆ. ಯಾಕೆ ನಡೆಯಬೇಕು ಎನ್ನುವುದಕ್ಕೆ ಆದಿಲ್ ಕೊಟ್ಟಿರೋ ಕಾರಣಗಳೂ ಅರ್ಥಪೂರ್ಣವಾಗಿವೆ.

ದಾಳಿ ಬಳಿಕವೂ ಅದೇ ಕ್ರಿಕೆಟ್ ಪ್ರೀತಿ
ಪುಲ್ವಾಮಾ ದಾಳಿ ನಡೆದ ಬಳಿಕವೂ ಪಾಕಿಸ್ತಾನ-ಭಾರತ ಕ್ರಿಕೆಟ್ ಅಭಿಮಾನಿಗಳು ಹಿಂದಿದ್ದ ಅದೇ ಕ್ರಿಕೆಟ್ ಪ್ರೀತಿಯನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಅಭಿಮಾನದ ವಿಚಾರಕ್ಕೆ ಬಂದರೆ ಇಲ್ಲಿ ಹಗೆಯ ಛಾಯೆ ಇಣುಕೋದಿಲ್ಲ, ಇಣುಕಿದರೆ ಅದೂ ಸರಿಯೂ ಅಲ್ಲ ಎಂಬರ್ಥದಲ್ಲಿ ತಾಜ್ ಮಾತನಾಡಿದ್ದಾರೆ.

ಆಡಕೂಡದು ಎಂದಿದ್ದ ಭಜ್ಜಿ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರು ಮೃತರಾದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್, ಈ ಬಾರಿ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಡಕೂಡದು ಎಂದಿದ್ದರು.

ಕ್ರಿಕೆಟ್ ಅಸ್ತ್ರ ಬಳಸಿದ ಬಿಸಿಸಿಐ
ಭಯೋತ್ಮಾದನೆ ವಿಚಾರದಲ್ಲಿ ವಿಶ್ವಕ್ಕೆ ತಲೆನೋವಾಗಿರುವ ಪಾಕ್ ಕಿವಿ ಹಿಂಡುವ ಬಗೆಯನ್ನು ಮನಗಂಡಿದ್ದ ಬಿಸಿಸಿಐ ಕ್ರಿಕೆಟ್ ಅನ್ನು ಅಸ್ತ್ರವಾಗಿ ಬಳಸಲು ಯೋಚಿಸಿತ್ತು. 2019ರ ವಿಶ್ವಕಪ್‌ನಲ್ಲಿ ಪಾಕ್ ನಿಷೇಧಿಸುವಂತೆ ಬಿಸಿಸಿಯು ಐಸಿಸಿಯನ್ನು ಕೋರಲು ಮುಂದಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications