ಅಕ್ಟೋಬರ್ 5ರಂದು ಪ್ರಾರಂಭವಾಗಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಭಾರತಕ್ಕೆ ಪ್ರಯಾಣಿಸಲು ಪಾಕಿಸ್ತಾನ ಕ್ರಿಕೆಟಿಗರು ಇನ್ನೂ ತಮ್ಮ ವೀಸಾವನ್ನು ಸ್ವೀಕರಿಸಿಲ್ಲ ಎಂಬುದು ಸದ್ಯದ ಕುತೂಹಲಕಾರಿ ವಿಷಯವಾಗಿದೆ.
ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಆಗಸ್ಟ್ 27ರ ಮುಂಜಾನೆ ಪ್ರಯಾಣ ಬೆಳೆಸಬೇಕಿದೆ. ಆದರೆ ವೀಸಾ ವಿಳಂಬವು ಐಸಿಸಿ ದೊಡ್ಡ ಪಂದ್ಯಾವಳಿಗೆ ತಡವಾಗಿ ಆಗಮಿಸುವಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಲಿದೆ.
ಪಾಕಿಸ್ತಾನ ತಂಡ ಸೆಪ್ಟೆಂಬರ್ 29ರಂದು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಆಡಬೇಕಿದೆ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇಡೀ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಝಾಕಾ ಅಶ್ರಫ್ ನೇತೃತ್ವದ ಪಿಸಿಬಿ ಪರಿಸ್ಥಿತಿಯನ್ನು ಪರಿಹರಿಸುವ ಸಲುವಾಗಿ ಸದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ಕುತೂಹಲಕಾರಿ ಅಂಶವಾಗಿ, ಪಾಕಿಸ್ತಾನವು ವಿಶ್ವಕಪ್‌ನಲ್ಲಿ ಭಾಗವಹಿಸುವ ವೀಸಾವನ್ನು ಸ್ವೀಕರಿಸದ ಏಕೈಕ ತಂಡವಾಗಿದೆ. ಆದ್ದರಿಂದ, ಪಿಸಿಬಿ ಮಧ್ಯಪ್ರವೇಶಿಸುವಂತೆ ಐಸಿಸಿಯನ್ನು ಕೇಳಿಕೊಂಡಿದೆ ಮತ್ತು ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ರಾಷ್ಟ್ರಗಳಿಗೆ ವೀಸಾಗಳನ್ನು ನೀಡಲಾಗುತ್ತದೆಯೇ ಎಂಬುದನ್ನು ಸಾಬೀತುಪಡಿಸಲು ಬಿಸಿಸಿಐನಿಂದ ಲಿಖಿತ ಖಾತರಿಯನ್ನು ಸಹ ಕೋರಿದೆ.
"ಐಸಿಸಿ ವಿಸ್ವಕಪ್ ಪಂದ್ಯಾವಳಿಗೂ ಮುನ್ನ ಪಾಕಿಸ್ತಾನ ತಂಡ ವೀಸಾ ಅನಿಶ್ಚಿತತೆಯನ್ನು ಎದುರಿಸಬೇಕಾಗಿರುವುದು ನಿರಾಸೆಯ ಸಂಗತಿಯಾಗಿದೆ. ಕಳೆದ ಮೂರು ವರ್ಷಗಳಿಂದ ಅವರ (ಬಿಸಿಸಿಐ) ಜವಾಬ್ದಾರಿಗಳ ಬಗ್ಗೆ ನಾವು ನೆನಪಿಸುತ್ತಿದ್ದೇವೆ. ಸೆಪ್ಟೆಂಬರ್ 29ರಂದು ನಮ್ಮ ಮೊದಲ ಅಭ್ಯಾಸ ಪಂದ್ಯವನ್ನು ನಿಗದಿಪಡಿಸಲಾಗಿದ್ದು, ಇನ್ನೂ ವೀಸಾ ಸಿಕ್ಕಿಲ್ಲ," ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಫಾರ್ಮ್‌ಗೆ ಬಂದರೆ, ಪಾಕಿಸ್ತಾನ ವಿಶ್ವಕಪ್‌ಗೆ ಮುನ್ನ ದೊಡ್ಡ ಮಟ್ಟದಲ್ಲಿ ಸುಧಾರಿಸಬೇಕಿದೆ. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್‌ನಲ್ಲಿ ಬಾಬರ್ ಅಜಂ ಪಡೆ ಭಾರತದ ವಿರುದ್ಧ ದಾಖಲೆಯ ಅಂತರದ ಸೋಲು ಕಂಡಿತು ಮತ್ತು ಶ್ರೀಲಂಕಾ ವಿರುದ್ಧವೂ ಮುಗ್ಗರಿಸಿ ಪಂದ್ಯಾವಳಿಯಿಂದ ಹೊರಬಿತ್ತು. ಇದರಿಂದಾಗಿ ಸೂಪರ್ ಫೋರ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು.

ಇದೇ ವೇಳೆ, ಪಾಕಿಸ್ತಾನ ವಿಶ್ವಕಪ್ ತಂಡದಲ್ಲಿ ಗಾಯದಿಂದ ಬಳಲುತ್ತಿರುವ ನಸೀಮ್ ಶಾ ಅವರನ್ನು ಕಳೆದುಕೊಳ್ಳಲಿದ್ದರೆ, ಅವರ ಬದಲಾಗಿ ಅನುಭವಿ ಹಸನ್ ಅಲಿ ಸ್ಥಾನ ಪಡೆದಿದ್ದಾರೆ.
ಏಷ್ಯಾಕಪ್ ಸಮಯದಲ್ಲಿ ಯುವ ಬೌಲರ್ ನಸೀಮ್ ಶಾ ಭುಜಕ್ಕೆ ಗಾಯ ಮಾಡಿಕೊಂಡರು ಮತ್ತು ನಂತರ ಅವರು ತಂಡಕ್ಕೆ ಮರಳಲು ವಿಫಲರಾದರು. ನಸೀಮ್ ಶಾ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಅಸಾಧಾರಣರಾಗಿದ್ದರು. ಹೀಗಾಗಿ ಅವರು ಹೊರಗುಳಿದಿರುವುದು ಪಾಕಿಸ್ತಾನ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಮತ್ತೊಂದೆಡೆ, ಹಸನ್ ಅಲಿ ಅವರು ತಮ್ಮ ಅನುಭವವನ್ನು ತರಲಿದ್ದಾರೆ. ಈವರೆಗೆ 60 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ವೇಳೆ 91 ವಿಕೆಟ್‌ಗಳನ್ನು ಪಡೆದಿದ್ದಾರೆ.
ಬಾಬರ್ ಅಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ, ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂನಿಯರ್.
ಪ್ರಯಾಣ ಮೀಸಲು ಆಟಗಾರರು: ಅಬ್ರಾರ್ ಅಹ್ಮದ್, ಜಮಾನ್ ಖಾನ್, ಮೊಹಮ್ಮದ್ ಹ್ಯಾರಿಸ್