Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ ಸೆಮಿಫೈನಲ್ ಅರ್ಹತಾ ಸನ್ನಿವೇಶ; ಇಂಗ್ಲೆಂಡ್ ವಿರುದ್ಧ ಟಾಸ್ ಮೇಲೆ ನಿಂತಿದೆ ಪಾಕ್ ತಂಡದ ಭವಿಷ್ಯ!

ಗುರುವಾರ, ನವೆಂಬರ್ 9ರಂದು ಬೆಂಗಳೂರಿನಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ನಂತರ, ನ್ಯೂಜಿಲೆಂಡ್ ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಭರವಸೆಯಲ್ಲಿದ್ದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ಕನಸನ್ನು ಭಗ್ನಗೊಳಿಸಿತು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶ್ರೀಲಂಕಾ ನೀಡಿದ್ದ 172 ರನ್‌ಗಳ ಗುರಿಯನ್ನು ಕೇವಲ 23.2 ಓವರ್‌ಗಳಲ್ಲಿ ಬೆನ್ನಟ್ಟಿದ ನ್ಯೂಜಿಲೆಂಡ್ 5 ವಿಕೆಟ್‌ಗಳಿಂದ ಮಣಿಸಿ, ತಮ್ಮ ನೆಟ್ ರನ್ ರೇಟ್ ಅನ್ನು +0.743ಕ್ಕೆ ಹೆಚ್ಚಿಸಿಕೊಂಡಿತು.

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಂತರ, ಶ್ರೀಲಂಕಾ ತಂಡದ ಅಗ್ರ ಕ್ರಮಾಂಕವನ್ನು ಛಿದ್ರಗೊಳಿಸಲು ಟ್ರೆಂಟ್ ಬೌಲ್ಟ್ ಬೌಲಿಂಗ್ ವಿಭಾಗವನ್ನು ಮುಂಭಾಗದಿಂದ ಮುನ್ನಡೆಸಿದರು.

pakistans-last-hope-of-world-cup-semifinal

ಕುಸಾಲ್ ಪೆರೆರಾ ತಂಡದ ಪರ 51 ರನ್‌ಗಳ ಏಕೈಕ ಅರ್ಧಶತಕ ಬಾರಿಸಿದರು. ಆದರೆ ಇದು ಸಾಕಾಗಲಿಲ್ಲ. ಏಕೆಂದರೆ ಶ್ರೀಲಂಕಾ ಮೊದಲ 10 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯಲ್ಲಿ ಮಹೀಶ್ ತೀಕ್ಷಣ ಅಜೇಯ 43 ರನ್ ಗಳಿಸಿ 171 ರನ್ ಗಳಿಸಲು ನೆರವಾದರು.

ನಂತರ ನ್ಯೂಜಿಲೆಂಡ್ ತಂಡದ 5 ವಿಕೆಟ್‌ಗಳನ್ನು ಪಡೆದರೂ, ಆರಂಭಿಕರಾದ ಡೆವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ ಅವರ 86 ರನ್‌ಗಳ ಜೊತೆಯಾಟ ಶ್ರೀಲಂಕಾ ತಂಡವನ್ನು ಸೋಲಿನಂಚಿಗೆ ತಳ್ಳಿತು ಮತ್ತು ಡ್ಯಾರಿಲ್ ಮಿಚೆಲ್ ಅವರ 43 ರನ್‌ಗಳ ಸ್ಫೋಟಕ ಬ್ಯಾಟಿಂಗ್ ಇನ್ನೂ 26.4 ಓವರ್‌ಗಳು ಬಾಕಿ ಇರುವಂತೆಯೇ ಅಂತಿಮ ಗೆರೆಯನ್ನು ದಾಟಲು ಸಹಾಯ ಮಾಡಿತು.

ಇದೀಗ ನ್ಯೂಜಿಲೆಂಡ್ ಆಡಿದ 9 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 10 ಅಂಕಗಳನ್ನು ಗಳಿಸಿತು. ಇದು ಕೈಯಲ್ಲಿ ಇನ್ನೂ ಪಂದ್ಯವಿರುವ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ತಂಡಗಳಿಗಿಂತ 2 ಅಂಕ ಹೆಚ್ಚು.

ಇದೇ ವೇಳೆ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ತಂಡಕ್ಕೆ ಸತತ 8ನೇ ಜಯವಾಗಿದೆ. ಇನ್ನು ಏಕದಿನ ವಿಶ್ವಕಪ್‌ನಲ್ಲಿ ಸತತ 4ನೇ ಬಾರಿಗೆ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರು.

ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡ ಈಗಾಗಲೇ ವಿಶ್ವಕಪ್ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿವೆ. ಆದಾಗ್ಯೂ, ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್‌ಗೆ ಪ್ರವೇಶಿಸಲು ಪಾಕಿಸ್ತಾನ ತಂಡಕ್ಕೆ ಕನಿಷ್ಠ ಲೆಕ್ಕಾಚಾರದ ಅವಕಾಶವಿದೆ. ಆದರೆ ಅಫ್ಘಾನಿಸ್ತಾನಕ್ಕೆ ಅವಕಾಶಗಳು ಕಮರಿಹೋಗಿದೆ.

pakistans-last-hope-of-world-cup-semifinal

2023ರ ವಿಶ್ವಕಪ್ ಸೆಮಿಫೈನಲ್ ಅರ್ಹತಾ ಸನ್ನಿವೇಶ (ಒಂದು ಸ್ಥಾನದ ಪೈಪೋಟಿ)

ಶುಕ್ರವಾರ, ನವೆಂಬರ್ 10ರಂದು ಅಹಮದಾಬಾದ್‌ನಲ್ಲಿ ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ

ಶನಿವಾರ, ನವೆಂಬರ್ 11ರಂದು ಕೋಲ್ಕತ್ತಾದಲ್ಲಿ ಪಾಕಿಸ್ತಾನ vs ಇಂಗ್ಲೆಂಡ್

ಪಾಕಿಸ್ತಾನ ತಂಡದ ಸೆಮಿಫೈನಲ್ ಅರ್ಹತಾ ಸನ್ನಿವೇಶ ಹೇಗಿದೆ?

ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿ 300 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವನ್ನು 13 ರನ್‌ಗಳಿಗೆ ಸೀಮಿತಗೊಳಿಸಬೇಕಾಗುತ್ತದೆ. ಇನ್ನು 300ಕ್ಕೂ ಹೆಚ್ಚು ರನ್ ಗಳಿಸಿದರೆ 287 ರನ್‌ಗಳ ಅಂತರದಿಂದ ಗೆಲ್ಲಬೇಕಾಗುತ್ತದೆ.

ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಿದರೆ, ಅವರ ಅವಕಾಶಗಳು ಇನ್ನೂ ಮಸುಕಾಗಲಿವೆ. ಇಂಗ್ಲೆಂಡ್ ತಂಡವನ್ನು 100 ರನ್‌ಗಳಿಗೆ ಆಲೌಟ್ ಮಾಡಿದರೂ, 2.5 ಓವರ್‌ಗಳಲ್ಲಿ ಮೊತ್ತವನ್ನು ಬೆನ್ನಟ್ಟಬೇಕು. ಅಂದರೆ ಇನ್ನೂ 283 ಎಸೆತಗಳು ಬಾಕಿ ಉಳಿದಿರುವಂತೆಯೇ ಗೆಲ್ಲಬೇಕು.

ಶನಿವಾರದಂದು ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿದರೆ, 2023ರ ವಿಶ್ವಕಪ್‌ನಿಂದ ಪಾಕಿಸ್ತಾನ ತಂಡವು ವಿಶ್ವಕಪ್‌ನಿಂದ ಹೊರಬೀಳಲಿದೆ.

ಇದೇ ವೇಳೆ ಅಫ್ಘಾನಿಸ್ತಾನ ತಂಡವು ಹೆಚ್ಚು ಕಷ್ಟಕರವಾದ ಸಮಯವನ್ನು ಎದುರಿಸುತ್ತಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲು ತಮ್ಮ ಸೆಮಿಫೈನಲ್ ಅವಕಾಶವನ್ನು ಕಳೆದುಕೊಂಡರು.

Story first published: Thursday, November 9, 2023, 22:38 [IST]
Other articles published on Nov 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+