ಬೆಂಗಳೂರಿನಲ್ಲಿ ಕಿವೀಸ್ vs ಲಂಕಾ ಪಂದ್ಯ ರದ್ದಾದರೂ, ಪಾಕಿಸ್ತಾನ ಫುಲ್ ಖುಷ್; 4ನೇ ಸ್ಥಾನಕ್ಕೆ 3 ತಂಡಗಳ ಪೈಪೋಟಿ!
ನವೆಂಬರ್ 9, ಗುರುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2023ರ ಏಕದಿನ ವಿಶ್ವಕಪ್‌ನ ನಿರ್ಣಾಯಕ ಪಂದ್ಯವೊಂದರಲ್ಲಿ ನ್ಯೂಜಿಲೆಂಡ್ ತಂಡವು ಶ್ರೀಲಂಕಾವನ್ನು ಎದುರಿಸುತ್ತಿದೆ.
ಆತಿಥೇಯ ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಂತಹ ತಂಡಗಳು ಈಗಾಗಲೇ ಪ್ರಸಕ್ತ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿವೆ. ಆದರೆ, ಉಳಿದ ಒಂದು ಸೆಮಿಫೈನಲ್ ಸ್ಥಾನಕ್ಕಾಗಿ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದರೆ, ಉಳಿದಿರುವ ಒಂದು ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಕಿವೀಸ್ ಬಹಳ ಹತ್ತಿರಕ್ಕೆ ಸಾಗಲಿದೆ ಮತ್ತು ಬಹುತೇಕ ಖಚಿತವಾಗಲಿದೆ.
ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ನ್ಯೂಜಿಲೆಂಡ್
ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡವು ಪ್ರಸ್ತುತ ಆಡಿದ ಎಂಟು ಪಂದ್ಯಗಳಿಂದ ಎಂಟು ಅಂಕಗಳನ್ನು ಗಳಿಸಿದೆ. ನಾಲ್ಕು ಪಂದ್ಯಗಳ ಸೋಲಿನ ಸರಣಿಯನ್ನು ಪ್ರಾರಂಭಿಸುವ ಮೊದಲು ಕಿವೀಸ್ ಪಡೆ ತಮ್ಮ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದರು.

ನ್ಯೂಜಿಲೆಂಡ್ ತಂಡ ಪ್ರಸ್ತುತ +0.398ರ ನೆಟ್ ರನ್-ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಇನ್ನು ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು ಸಹ ತಲಾ ಎಂಟು ಪಂದ್ಯಗಳಿಂದ ಎಂಟು ಅಂಕಗಳನ್ನು ಹೊಂದಿವೆ. ಪಾಕಿಸ್ತಾನ ತಮಡ +0.036ರ ನೆಟ್ ರನ್-ರೇಟ್ ಹೊಂದಿದ್ದರೆ, ಅಫ್ಘಾನಿಸ್ತಾನ -0.338ರ ನೆಟ್ ರನ್-ರೇಟ್ ಹೊಂದಿದೆ.
ಉಳಿದಿರುವ ಒಂದು ಸೆಮಿಫೈನಲ್ ಸ್ಥಾನಕ್ಕಾಗಿ ಮೂರು ತಂಡಗಳು ತಮ್ಮ ಉಳಿದಿರುವ ತಲಾ ಒಂದು ಪಂದ್ಯವನ್ನು ಗೆಲ್ಲಲೇಬೇಕಿದೆ. ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ ಗೆಲುವು ಪಡೆಯುವ ಮೂಲಕ ನ್ಯೂಜಿಲೆಂಡ್ ತನ್ನ ಮುನ್ನಡೆ ವ್ಯತ್ಯಾಸವನ್ನು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳಿಗೆ ವಿಸ್ತರಿಸಲಿದೆ.

ಉದ್ಯಾನನಗರಿಯಲ್ಲಿ ಗುರುವಾರ ನಿರೀಕ್ಷಿತ ಮಳೆ ಭೀತಿ
ಆದಾಗ್ಯೂ, ಉದ್ಯಾನನಗರಿಯಲ್ಲಿ ಗುರುವಾರ ನಿರೀಕ್ಷಿತ ಮಳೆಯು ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿದೆ. 2023ರ ಏಕದಿನ ವಿಶ್ವಕಪ್ ಲೀಗ್ ಹಂತದಲ್ಲಿ ಯಾವುದೇ ಆಟಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿಲ್ಲ ಎಂಬುದನ್ನು ಗಮನಿಸುವುದು ಸಂಗತಿಯಾಗಿದೆ.
ನಿರಂತರ ಮಳೆಯಿಂದ ಪಂದ್ಯ ರದ್ದುಗೊಂಡರೆ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳು ತಲಾ ಒಂದು ಅಂಕವನ್ನು ಪಡೆಯುತ್ತವೆ. ಆಗ ಕಿವೀಸ್ ಒಂಬತ್ತು ಅಂಕಗಳೊಂದಿಗೆ ಲೀಗ್ ಹಂತಕ್ಕೆ ಅಂತ್ಯಹಾಡಲಿದೆ.
ಇದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳಿಗೆ ತಮ್ಮ ಕೊನೆಯ ಲೀಗ್ ಪಂದ್ಯಗಳಲ್ಲಿ ಗೆಲುವಿನೊಂದಿಗೆ ಸಂಪೂರ್ಣ ಎರಡು ಅಂಕಗಳನ್ನು ಪಡೆಯಲು ಅವಕಾಶವನ್ನು ನೀಡುತ್ತದೆ ಮತ್ತು ಸೆಮಿಫೈನಲ್ ಆಸೇ ಜೀವಂತವಾಗಿರಿಸಲಿದೆ.
ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಪಂದ್ಯದ ರದ್ದು, ಪಾಕಿಸ್ತಾನ ತಂಡಕ್ಕೆ 2023ರ ಏಕದಿನ ವಿಶ್ವಕಪ್ ಸೆಮಿಫೈನಲ್‌ಗೆ ದಾರಿ ಕಂಡುಕೊಳ್ಳಲು ಸಹಾಯ ಮಾಡುತ್ತದೆ.
ಇನ್ನು ಶ್ರೀಲಂಕಾ ವಿರುದ್ಧದ ಪಂದ್ಯವನ್ನು ನ್ಯೂಜಿಲೆಂಡ್ ಸೋತು ಬಿಟ್ಟರೆ, ಬಾಬರ್ ಅಜಂ ನಾಯಕತ್ವದ ತಂಡವು ಹಶ್ಮತುಲ್ಲಾ ಶಾಹಿದಿ ನಾಯಕತ್ವದ ಅಫ್ಘಾನಿಸ್ತಾನಕ್ಕಿಂತ ಹೆಚ್ಚು ಉತ್ತಮವಾದ ನೆಟ್ ರನ್‌ರೇಟ್ ಅನ್ನು ಹೊಂದಿರುವುದರಿಂದ ಉಳಿದ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಉತ್ತಮ ಅವಕಾಶವನ್ನು ಹೊಂದಿರುತ್ತದೆ.
ಶನಿವಾರ, ನವೆಂಬರ್ 11ರಂದು ಕೋಲ್ಕತ್ತಾದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡ ಸೆಮಿಸ್‌ಗೆ ಮುನ್ನಡೆಯಲು ಗೆಲ್ಲಬೇಕಿದೆ.
ಇನ್ನು ಅಫ್ಘಾನಿಸ್ತಾನ ತನ್ನ ಅಂತಿಮ ಲೀಗ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ, ನವೆಂಬರ್ 10ರಂದು ಅಹಮದಾಬಾದ್‌ನಲ್ಲಿ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications