For Quick Alerts
ALLOW NOTIFICATIONS  
For Daily Alerts
 

ರಿಷಭ್‌ ಪಂತ್‌ ಸಾಮರ್ಥ್ಯದ ಬಗ್ಗೆ ಮಾತನಾಡಿದ ಕ್ಯಾಪ್ಟನ್‌ ಕೊಹ್ಲಿ

Kohli on Pant 2019

ಜಾರ್ಜ್‌ಟೌನ್‌, ಆಗಸ್ಟ್‌ 07: ಎಂ.ಎಸ್‌ ಧೋನಿ ಸ್ಥಾನ ತುಂಬಬಲ್ಲ ಆಟಗಾರನೆಂದೇ ಟೀಮ್‌ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿರುವ ದಿಲ್ಲಿಯ ಸ್ಫೋಟಕ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಕುರಿತಾಗಿ ಮಾತನಾಡಿರವ ನಾಯಕ ವಿರಾಟ್‌ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಂತ್‌ಗೆ ಅವರ ಸ್ಥಾನದಲ್ಲಿ ನೆಲೆ ನಿಲ್ಲಲು ಬೇಗಾದ ಅಗತ್ಯದ ಕಾಲಾವಕಾಶ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಮಂಗಳವಾರ ಅಂತ್ಯಗೊಂಡ ಟಿ20 ಕ್ರಿಕೆಟ್‌ ಸರಣಿಯಲ್ಲಿ ರಿಷಭ್‌ ಪಂತ್‌ ಮೊದಲ ಎರಡು ಪಂದ್ಯಗಳಲ್ಲಿ ತಮ್ಮ ಕಳಪೆ ಶಾಟ್‌ ಸೆಲೆಕ್ಷನ್‌ ಮೂಲಕ ಭಾರಿ ಟೀಕೆಗೆ ಗುರಿಯಾಗಿದ್ದರು. ಆದರೆ, ಮಂಗಳವಾರ ನಡೆದ ಮೂರನೇ ಹಾಗೂ ಅಂತಿಮ ಟಿ20ಯಲ್ಲಿ ಪಂತ್‌ ತಮ್ಮ ಸಾಮರ್ಥ್ಯವೇನೆಂಬುದನ್ನು ಅನಾವರಣ ಪಡಿಸಿದ್ದರು.

ವಿಂಡೀಸ್‌ ಬೌಲಿಂಗ್‌ ದಾಳಿಯನ್ನು ಧೂಳಿಪಟ ಮಾಡಿದ ಪಂತ್‌ ಅಜೇಯ 65 ರನ್‌ಗಳನ್ನು ಚೆಚ್ಚಿ ಭಾರತ ತಂಡಕ್ಕೆ 7 ವಿಕೆಟ್‌ಗಳ ಜಯತಂದುಕೊಟ್ಟು ಸರಣಿ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. 42 ಎಸೆತಗಳ ಅದ್ಭುತ ಇನಿಂಗ್ಸ್‌ನಲ್ಲಿ ತಲಾ 4 ಫೋರ್‌ ಮತ್ತು ಸಿಕ್ಸರ್‌ಗಳು ಮೂಡಿಬಂದವು. ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ 147 ರನ್‌ಗಳ ಗುರಿ ನೀಡಿದರೆ, ಗುರಿ ಬೆನ್ನತ್ತಿದ ಭಾರತ ಇನ್ನು 5 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟದಲ್ಲಿ 150 ರನ್‌ ಗಳಿಸಿ ಜಯ ದಕ್ಕಿಸಿಕೊಂಡಿತು.

ಹಿತಾಸಕ್ತಿ ಸಂಘರ್ಷದ ಸುಳಿಗೆ ಸಿಲುಕಿದ ರಾಹುಲ್‌ ದ್ರಾವಿಡ್‌!

"ಪಂತ್‌ ನಮ್ಮ ತಂಡದ ಭವಿಷ್ಯ ಎಂದು ನಾವು ನೋಡುತ್ತಿದ್ದೇವೆ. ಅವರಲ್ಲಿ ಅಪಾರ ಪ್ರತಿಭೆ ಅಡಗಿದೆ. ಹೀಗಾಗಿ ಅವರ ಮೇಲೆ ಅನಗತ್ಯವಾಗಿ ಒತ್ತಡ ಹೇರದೆ ಅವರ ಸ್ಥಾನದಲ್ಲಿ ನೆಲೆನಿಲ್ಲಲು ಬೇಕಾದ ಅಗತ್ಯದ ಕಾಲಾವಕಾಶವನ್ನು ಒದಗಿಸಿಕೊಡಬೇಕು," ಎಂದು ಕೊಹ್ಲಿ ಯುವ ಆಟಗಾರನ ಬೆನ್ನು ತಟ್ಟಿದ್ದಾರೆ. ಪಂದ್ಯದಲ್ಲಿ 3ನೇ ವಿಕೆಟ್‌ಗೆ ವಿರಾಟ್‌ ಮತ್ತು ಪಂತ್‌ 106 ರನ್‌ಗಳ ಅದ್ಭುತ ಜೊತೆಯಾಟವಾಡಿ ಭಾರತದ ಗೆಲುವಿನ ಹಾದಿಯನ್ನು ಸುಗಮವನ್ನಾಗಿಸಿದರು.

2003ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಸೋಲಿಗೆ ಕಾರಣ ಕೊಟ್ಟ ಅಖ್ತರ್‌

"ಪಂತ್‌ ಬಹಳ ದೊಡ್ಡ ಹಾದಿಯಲ್ಲಿ ಸಾಗಿ ಬಂದಿದ್ದಾರೆ. ಗೆಲ್ಲುವುದು ಮತ್ತು ಈ ರೀತಿ ಪಂದ್ಯಗಳನ್ನು ಗೆದ್ದುಕೊಡುವುದೇ ಇಲ್ಲಿ ಮುಖ್ಯ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒತ್ತಡವನ್ನು ವಿಭಿನ್ನ ರೀತಿಯಲ್ಲೇ ನಿಭಾಯಿಸಬೇಕಾಗುತ್ತದೆ. ಅವರು ಇದೇ ರೀತಿ ಸ್ಥಿರ ಪ್ರದರ್ಶನ ಕಾಯ್ದುಕೊಂಡರೆ, ಅವರು ಭಾರತ ತಂಡದ ಪರ ಮಿಂಚುವುದರಲ್ಲಿ ಸಂಶಯವೇ ಇಲ್ಲ," ಎಂದು ಕೊಹ್ಲಿ ಹೇಳಿದ್ದಾರೆ.

ಮೂರು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿರುವ ಭಾರತ ತಂಡ, ಆಗಸ್ಟ್‌ 8ರಂದು (ಗುರುವಾರ) ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲೂ ಇಂಥದ್ದೇ ಆಟ ಹೊರತರುವುದನ್ನು ಎದುರು ನೋಡುತ್ತಿದೆ.

Story first published: Wednesday, August 7, 2019, 17:05 [IST]
Other articles published on Aug 7, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+