IPL Auction 2023: ಸ್ಯಾಮ್ ಕರನ್‌ರನ್ನು ಖರೀದಿಸಿದ ಪಂಜಾಬ್ ಕಿಂಗ್ಸ್ ಸಂಪೂರ್ಣ ತಂಡ

ಪಂಜಾಬ್ ಕಿಂಗ್ಸ್ ತಂಡ 2023ರ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್‌ಕರನ್‌ರನ್ನು 18.5 ಕೋಟಿ ರುಪಾಯಿಗೆ ಖರೀದಿಸಿದೆ. ತಂಡದ ನಾಯಕ ಮಯಾಂಕ್ ಅಗರ್ವಾಲ್‌ರನ್ನೇ ಬಿಡುಗಡೆ ಮಾಡುವ ಮೂಲಕ ಪಂಜಾಬ್ ಕಿಂಗ್ಸ್ ಹರಾಜಿಗೆ ಮುನ್ನ ಅಚ್ಚರಿ ಮೂಡಿಸಿತ್ತು.
ಸ್ಯಾಮ್ ಕರನ್‌ಗಾಗಿ 18.5 ಕೋಟಿ ರುಪಾಯಿ ವ್ಯಯಿಸುವ ಮೂಲಕ, ಐಪಿಎಲ್ ಇತಿಹಾಸದಲ್ಲಿ ದುಬಾರಿ ಆಟಗಾರನನ್ನು ಹೊಂದಿದ ತಂಡ ಎನಿಸಿಕೊಂಡಿದೆ. 32.2 ಕೋಟಿ ರುಪಾಯಿ ಪರ್ಸ್ ಹೊಂದಿದ್ದ ಪಂಜಾಬ್ ಕಿಂಗ್ಸ್ ಒಬ್ಬ ಆಟಗಾರನಿಗಾಗಿ ಅರ್ಧಕ್ಕಿಂತ ಹೆಚ್ಚು ಹಣ ವ್ಯಯಿಸಿತು. 9 ಜನರನ್ನು ಖರೀದಿ ಮಾಡಲು ಪಂಜಾಬ್‌ಗೆ ಅವಕಾಶ ಇತ್ತು. ಆದರೆ, ಅದು ಕೇವಲ 6 ಆಟಗಾರರನ್ನು ಮಾತ್ರ ಖರೀದಿ ಮಾಡಿದೆ. ತಂಡದ ಪರ್ಸ್‌ನಲ್ಲಿ 12 ಕೋಟಿ ರುಪಾಯಿಗಿಂದ ಹೆಚ್ಚಿನ ಮೊತ್ತ ಉಳಿಸಿಕೊಂಡಿದೆ.
ಐಪಿಎಲ್‌ನಲ್ಲಿ ಆಡಬೇಕು ಎಂದು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದ ಜಿಂಬಾಬ್ವೆ ಆಲ್‌ರೌಂಡರ್ ಸಿಕಂದರ್ ರಾಜಾರನ್ನು ಪಂಜಾಬ್ ಕಿಂಗ್ಸ್ ಮೂಲಬೆಲೆ 50 ಲಕ್ಷ ರುಪಾಯಿಗೆ ಖರೀದಿ ಮಾಡಿತು. ಹರ್‌ಪ್ರೀತ್ ಭಾಟಿಯಾ 40 ಲಕ್ಷ ರುಪಾಯಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಸಹಿ ಮಾಡಿದರು.
ಕರ್ನಾಟಕ ತಂಡದ ವೇಗದ ಬೌಲರ್ ವಿದ್ವತ್ ಕಾವೇರಪ್ಪ ಅವರನ್ನು ಮೂಲಬೆಲೆ 20 ಲಕ್ಷ ರುಪಾಯಿ ನೀಡಿ ಖರೀದಿ ಮಾಡಿದೆ. ಮೋಹಿತ್ ರಥಿ ಮತ್ತು ಶಿವಂ ಸಿಂಗ್ ಕೂಡ ಮೂಲ ಬೆಲೆ 20 ಲಕ್ಷ ರುಪಾಯಿಗೆ ತಂಡಕ್ಕೆ ಸೇರ್ಪಡೆಯಾದರು.

ಸ್ಯಾಮ್ ಕರನ್ ಉತ್ತಮ ಆಯ್ಕೆ
ಸ್ಯಾಮ್ ಕರನ್‌ರನ್ನು ಖರೀದಿ ಮಾಡಿದ ತಂಡದ ನಿರ್ಧಾರದ ಬಗ್ಗೆ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಟ್ರೆವರ್ ಬೇಲಿಸ್ ಸಂತಸ ವ್ಯಕ್ತಪಡಿಸಿದ್ದಾರೆ. "ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ಸಂತೋಷದ ವಿಷಯ. ಅವರು ಅತ್ಯುತ್ತಮ ಆಲ್‌ರೌಂಡರ್, ಇಬ್ಬರು ಅಥವಾ ಮೂವರು ಆಲ್‌ರೌಂಡರ್ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಗುರಿ ಹೊಂದಿದ್ದೆವು. ಸ್ಯಾಮ್ ಕರನ್ ತಂಡವನ್ನು ಸೇರಿಕೊಂಡಿದ್ದು ನಮ್ಮ ಅದೃಷ್ಟ" ಎಂದು ಹೇಳಿದ್ದಾರೆ.
IPL Auction 2023: ಮಿನಿ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್ ಸೇರ್ಪಡೆ; ಹೇಗಿದೆ ಮುಂಬೈ ಇಂಡಿಯನ್ಸ್ ತಂಡ?

ಪಂಜಾಬ್ ತಂಡ ಸೇರಿದ ಸಿಕಂದರ್ ರಾಜಾ
ಜಿಂಬಾಬ್ವೆ ತಂಡದ ಅತ್ಯುತ್ತಮ ಆಲ್‌ರೌಂಡರ್ ಸಿಕಂದರ್ ರಾಜಾ ಅತ್ಯುತ್ತಮ ಪ್ರದರ್ಶನ ನೀಡಿದ ನಂತರವೂ ಅವರು ಐಪಿಎಲ್‌ನಲ್ಲಿ ಹರಾಜಾಗುವಲ್ಲಿ ವಿಫಲರಾಗಿದ್ದರು. ಆದರೆ, 2022ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಮೊತ್ತಕ್ಕೆ ಹರಾಜಾಗುವ ವಿಶ್ವಾಸದಲ್ಲಿದ್ದರು. ಆದರೆ, ಸಿಕಂದರ್ ರಾಜಾ ಅವರನ್ನು ಖರೀದಿಸಲು ಯಾವ ತಂಡವೂ ಹೆಚ್ಚಿನ ಆಸಕ್ತಿ ತೋರಿಸದ ಕಾರಣ. ಪಂಜಾಬ್ ಕಿಂಗ್ಸ್ ತಂಡ ಮೂಲ ಬೆಲೆ 50 ಲಕ್ಷಕ್ಕೆ ಅವರನ್ನು ಖರೀದಿ ಮಾಡಿತು.
ಸಿಕಂದರ್ ರಾಜಾ ಅಪರಿಚಿತ, ನಿಗೂಢ ಸ್ಪಿನ್ನರ್ ಮತ್ತು ಸ್ಫೋಟಕ ಬ್ಯಾಟಿಂಗ್ ಕೂಡ ಮಾಡಬಲ್ಲರು. ನಾವು ಬ್ಯಾಕ್ ಅಪ್ ಆಟಗರಾರನ್ನು ಹುಡುಕುತ್ತಿದ್ದೇವೆ ಎಂದು ಕೋಚ್ ಟ್ರೆವರ್ ಬೇಲಿಸ್ ಹೇಳಿದ್ದಾರೆ.

ಪಂಜಾಬ್ ಕಿಂಗ್ಸ್ ಸಂಪೂರ್ಣ ತಂಡ
ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಜಾನಿ ಬೈರ್‌ಸ್ಟೋ, ಪ್ರಭಾಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಷ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ರಾಹುಲ್ ರಬಾಡ ಚಾಹರ್, ಹರ್‌ಪ್ರೀತ್ ಬ್ರಾರ್, ಸ್ಯಾಮ್ ಕರನ್, ಸಿಕಂದರ್ ರಾಜಾ, ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಮೋಹಿತ್ ರಥಿ, ಶಿವಂ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications