ಭಾನುವಾರ, ಏಪ್ರಿಲ್ 9ರಂದು ಹೈದರಾಬಾದ್‌ನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್)ನ 14ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಇದೇ ವೇಳೆ ಮೊದಲ ಇನ್ನಿಂಗ್ಸ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಅವರು ಆರಂಭಿಕರಾಗಿ ಕಣಕ್ಕಿಳಿದು 66 ಎಸೆತಗಳನ್ನು ಎದುರಿಸಿ 12 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಮೇತ ಅಜೇಯ 99 ರನ್ ಗಳಿಸುವ ಮೂಲಕ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲರ್‌ಗಳು ಬಿಗಿ ಬೌಲಿಂಗ್ ದಾಳಿ ನಡೆಸಿ ಪಂಜಾಬ್ ಕಿಂಗ್ಸ್ ತಂಡವನ್ನು ಒಂದು ಹಂತದಲ್ಲಿ 88 ರನ್‌ಗಳಿಗೆ 9 ವಿಕೆಟ್ ಕಿತ್ತು ಸಂಕಷ್ಟಕ್ಕೆ ದೂಡಿದ್ದರು. ಆದರೆ, ಶಿಖರ್ ಧವನ್ ಅವರ ಕೆಚ್ಚೆದೆಯ ಇನ್ನಿಂಗ್ಸ್ ಪಂಜಾಬ್ ಕಿಂಗ್ಸ್ ತಂಡ ಅದೇ 9 ವಿಕೆಟ್‌ಗಳಿಗೆ 143 ರನ್ ಗಳಿಸಲು ಸಹಾಯ ಮಾಡಿತು.
37 ವರ್ಷದ ಶಿಖರ್ ಧವನ್ ಅಂತಿಮವಾಗಿ ಅಜೇಯರಾಗುಳಿದರು ಮತ್ತು ಪಂಜಾಬ್ ಕಿಂಗ್ಸ್ ತಂಡದ ಒಟ್ಟು ರನ್‌ಗಳಲ್ಲಿ ಶೇ.69.23ರಷ್ಟು ರನ್ ಕೊಡುಗೆ ನೀಡಿದರು. ಇದು ಐಪಿಎಲ್‌ನ ಒಂದು ಇನ್ನಿಂಗ್ಸ್ ಮೊತ್ತದಲ್ಲಿ ಕೊಡುಗೆ ನೀಡಿದ ಎರಡನೇ ಅತಿ ಹೆಚ್ಚು ಶೇಕಡಾವಾರು ರನ್‌ಗಳ ದಾಖಲೆಗಾಗಿ ರಿಷಭ್ ಪಂತ್ ದಾಖಲೆಯನ್ನು ಮೀರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಪಂತ್ 2018ರಲ್ಲಿ ಇದೇ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 63 ಎಸೆತಗಳಲ್ಲಿ ಅಜೇಯ 128 ರನ್ ಬಾರಿಸಿ ಅವರ ತಂಡದ ಮೊತ್ತದ ಶೇ.68.44ರಷ್ಟು ಕೊಡುಗೆ ನೀಡಿದ್ದರು. ರಿಷಭ್ ಪಂತ್ ಅವರ ಇನ್ನಿಂಗ್ಸ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಿ 187 ರನ್ ಗಳಿಸಿತ್ತು.

ಆದರೆ, ಶಿಖರ್ ಧವನ್ 50 ಎಸೆತಗಳಲ್ಲಿ ಅಜೇಯ 92 ರನ್ ಗಳಿಸಿ, ಆ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳು ಮತ್ತು ಏಳು ಎಸೆತಗಳು ಬಾಕಿ ಉಳಿದಿರುವಂತೆಯೇ ಸನ್‌ರೈಸರ್ಸ್ ಹೈದರಾಬಾದ್ ತಂಡ ಯಶಸ್ವಿಯಾಗಿ ಗುರಿ ಬೆನ್ನಟ್ಟಿತ್ತು.
ಇದೇ ವೇಳೆ ಶಿಖರ್ ಧವನ್ ಅವರ ಅದ್ಬುತ ಪ್ರದರ್ಶನ ಐಪಿಎಲ್ ಇನ್ನಿಂಗ್ಸ್‌ನಲ್ಲಿ ತಂಡದ ಹೆಚ್ಚಿನ ಶೇಕಡಾವಾರು ರನ್‌ಗಳ ವಿಷಯದಲ್ಲಿ ಬ್ರೆಂಡನ್ ಮೆಕಲಮ್ ಅವರ ದಾಖಲೆಯನ್ನು ಮೀರಿಸಲು ಸಾಧ್ಯವಾಗಲಿಲ್ಲ. 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಚೊಚ್ಚಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಬ್ರೆಂಡನ್ ಮೆಕಲಮ್ ಶತಕವನ್ನು ದಾಖಲಿಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ 73 ಎಸೆತಗಳಲ್ಲಿ ಅಜೇಯ 158 ರನ್ ಗಳಿಸಿದ ಬ್ರೆಂಡನ್ ಮೆಕಲಮ್ ಐಪಿಎಲ್ ಪಂದ್ಯಾವಳಿಯನ್ನು ಅದ್ಭುತ ರೀತಿಯಲ್ಲಿ ಪ್ರಾರಂಭಿಸಿದರು. ಕೋಲ್ಕತ್ತಾ ನೈಟ್ ರೈಡರ್ಸ್‌ನ ಒಟ್ಟು 222 ರನ್‌ಗಳಲ್ಲಿ ಶೇ.71.17 ರನ್‌ಗಳ ಕೊಡುಗೆ ನೀಡಿದ್ದರು ಮತ್ತು ಉಳಿದ ಆಟಗಾರರು ಕೇವಲ 64 ರನ್ ಗಳಿಸಿದರು.

ಇನ್ನು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ ಸ್ಪಿನ್ನರ್ ಮಯಾಂಕ್ ಮಾರ್ಕಾಂಡೆ ಹೈದರಾಬಾದ್ ತಂಡದ ಪರ ತಮ್ಮ ಚೊಚ್ಚಲ ಪಂದ್ಯದಲ್ಲೇ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಮಾರ್ಕೊ ಜಾನ್ಸೆನ್ ಮತ್ತು ಉಮ್ರಾನ್ ಮಲಿಕ್ ತಲಾ ಎರಡು ವಿಕೆಟ್ ಕಿತ್ತರು. ಪಂಜಾಬ್ ಕಿಂಗ್ಸ್ ತಂಡ 100 ರನ್ ಗಡಿ ದಾಟಲು ಕಷ್ಟಪಡುತ್ತಿತ್ತು. 2023ರ ಐಪಿಎಲ್‌ನಲ್ಲಿ ಅತಿ ಕಡಿಮೆ ಮೊತ್ತ ದಾಖಲಿಸುವುದನ್ನು ತಪ್ಪಿಸಲು ಶಿಖರ್ ಧವನ್ ನಾಯಕನ ಆಟವಾಡಿದರು.