ಟಿ20 ವಿಶ್ವಕಪ್‌ಗೆ ಮುನ್ನವೇ ಪ್ರತಿ ಆಟಗಾರನಿಗೆ ಭಾರೀ ಬಹುಮಾನ ಘೋಷಿಸಿದ ಪಾಕ್
ಇದೇ ಜೂನ್‌ನಲ್ಲಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ಆಟಗಾರರುಗೆ ಭಾರೀ ಬಹುಮಾನ ಘೋಷಿಸಿ ಸುದ್ದಿಯಾಗಿದೆ.
2024ರ ಟಿ20 ವಿಶ್ವಕಪ್ ಟ್ರೋಫಿ ಗೆದ್ದರೆ ಪಾಕಿಸ್ತಾನದ ಟಿ20 ವಿಶ್ವಕಪ್ ತಂಡದ ಪ್ರತಿಯೊಬ್ಬ ಸದಸ್ಯರು 100,000 ಯುಎಸ್ ಡಾಲರ್ ಪಡೆಯಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾನುವಾರ ಪ್ರಕಟಿಸಿದೆ.

ಸೋಮವಾರ ರಾತ್ರಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಹೊರಡುವ ಮುನ್ನ ಆಟಗಾರರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಮಾತುಕತೆಯ ನಂತರ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಈ ಘೋಷಣೆ ಮಾಡಿದ್ದಾರೆ.
ವಿಶ್ವಕಪ್ ಟ್ರೋಫಿ ಗೆಲ್ಲುವುದಕ್ಕೆ ಹೋಲಿಸಿದರೆ, ಈ ಬಹುಮಾನದ ಮೊತ್ತಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲ ಎಂದು ಮೊಹ್ಸಿನ್ ನಖ್ವಿ ಹೇಳಿದ್ದು, ತಮ್ಮ ಆಟಗಾರರು ಪಾಕಿಸ್ತಾನದ ಧ್ವಜವನ್ನು ಎತ್ತುವ ಭರವಸೆಯನ್ನು ವ್ಯಕ್ತಪಡಿಸಿದರು.
"ಮುಂಬರುವ 2024ರ ಟಿ20 ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ಪ್ರತಿಯೊಬ್ಬ ಆಟಗಾರನಿಗೆ 100,000 ಯುಎಸ್ ಡಾಲರ್ ಬಹುಮಾನ ನೀಡುವುದಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಘೋಷಿಸಿದ್ದಾರೆ," ಎಂದು ಪಿಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಇದೇ ವೇಳೆ ಆಟಗಾರರಿಗೆ ಯಾರ ಬಗ್ಗೆಯೂ ಕಾಳಜಿ ವಹಿಸಬೇಡಿ, ಆದರೆ ಪಾಕಿಸ್ತಾನಕ್ಕಾಗಿ ಆಡಲು ಮತ್ತು ತಂಡದ ಉತ್ತಮ ಆಟವನ್ನು ಪ್ರದರ್ಶಿಸಲು ಮೊಹ್ಸಿನ್ ನಖ್ವಿ ಹೇಳಿದರು ಮತ್ತು 'ದೇವರ ಇಚ್ಛೆ' ತಂಡ ಗೆಲುವು ಸಾಧಿಸುತ್ತದೆ ಎಂದರು.
ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಅವರು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿ, ತಂಡದ ಎಲ್ಲಾ ಆಟಗಾರರು ಒಂದಾಗಿದ್ದಾರೆ ಎಂದು ಮೊಹ್ಸಿನ್ ನಖ್ವಿ ತಿಳಿಸಿದರು.
"ದೇಶವು ನಿಮ್ಮಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ. ನೀವು ಅವುಗಳನ್ನು ಪೂರೈಸಬೇಕು," ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಆಟಗಾರರಿಗೆ ಸೂಚಿಸಿದರು.
ಮೊಹ್ಸಿನ್ ನಖ್ವಿ ಭೇಟಿಯ ಸಂದರ್ಭದಲ್ಲಿ, ಟಿ20 ಕ್ರಿಕೆಟ್‌ನಲ್ಲಿ ಮೈಲಿಗಲ್ಲುಗಳನ್ನು ಸಾಧಿಸಿದ ಆಟಗಾರರಿಗೆ ವಿಶೇಷ ಶರ್ಟ್‌ಗಳನ್ನು ನೀಡಿದರು. ವಿಕೆಟ್ ಕೀಪರ್-ಬ್ಯಾಟರ್ ಮೊಹಮದ್ ರಿಜ್ವಾನ್ ಟಿ20 ಕ್ರಿಕೆಟ್‌ನಲ್ಲಿ 3,000 ರನ್ ಪೂರೈಸಿದ್ದಕ್ಕಾಗಿ ಶರ್ಟ್ ಮತ್ತು ವೇಗಿ ನಸೀಮ್ ಶಾ 100 ಟಿ20 ವಿಕೆಟ್‌ಗಳನ್ನು ಪಡೆದಿದ್ದಕ್ಕಾಗಿ ವಿಶೇಷ ಶರ್ಟ್ ಹಸ್ತಾಂತರಿಸಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications