ಪಾಕಿಸ್ತಾನಕ್ಕೊಂದು ಸಿಹಿಸುದ್ದಿ: ಭಾರತದ ನಡುವೆ ದ್ವಿಪಕ್ಷೀಯ ಸರಣಿಯ ಗುಸುಗುಸು?
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಝಾಕಾ ಅಶ್ರಫ್ ಅವರು ಭಾರತದೊಂದಿಗೆ ಕ್ರಿಕೆಟ್ ಸಂಬಂಧವನ್ನು ಸುಧಾರಿಸಲು ಮುಂದಾಗಿದ್ದಾರೆ. ಪಿಸಿಬಿ ಅಧ್ಯಕ್ಷರು ಹಿರಿಯ ಬಿಸಿಸಿಐ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಭಾರತದಲ್ಲಿ ವಿಶ್ವಕಪ್ ನಡೆಯುತ್ತಿದ್ದು ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಣೆಗೆ ಬರುವಂತೆ ಝಕಾ ಅಶ್ರಫ್ ಅವರನ್ನು ಬಿಸಿಸಿಐ ಆಹ್ವಾನಿಸಿದೆ. ಪಾಕಿಸ್ತಾನದ ಪತ್ರಕರ್ತರು ಮತ್ತು ಅಭಿಮಾನಿಗಳಿಗೆ ಇನ್ನೂ ವೀಸಾ ನೀಡುವ ಪ್ರಕ್ರಿಯೆ ಆರಂಭಗೊಳ್ಲಬೇಕಷ್ಟೇ..

ಭಾರತಕ್ಕೆ ತೆರಳುವ ಮೊದಲು, ಝಾಕಾ ಅಶ್ರಫ್ ಅವರು ಭಾರತಕ್ಕೆ ಹೋಗದಿರಲು ಮೊದಲು ನಿರ್ಧರಿಸಿದ್ದರು. ಆದರೆ ಈಗ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ನಲ್ಲಿ ಪತ್ರಕರ್ತರಿಗೆ ವೀಸಾ ಪ್ರಕ್ರಿಯೆ ಪ್ರಾರಂಭವಾಗಿದೆ. ಆದ್ದರಿಂದ ಭಾರತ-ಪಾಕ್ ಪಂದ್ಯಕ್ಕೂ ಮೊದಲು ಭಾರತಕ್ಕೆ ಭೇಟಿ ನೀಡಲು ನಿರ್ಧರಿಸುವುದಾಗಿ ಅವರು ತಿಳಿಸಿದ್ದಾರೆ.
"ಇದಲ್ಲದೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಬುಧವಾರ ನಡೆಸಿದ ಸಂಭಾಷಣೆಯ ಮಾಹಿತಿಯನ್ನು ಸಹ ಪಿಸಿಬಿಯ ಮಖ್ಯಸ್ಥರು ನೀಡಿದ್ದಾರೆ. ನಮ್ಮ ಎರಡು ದೇಶಗಳ ನಡುವಿನ ಕ್ರಿಕೆಟ್ ಸಂಬಂಧವನ್ನು ನಾವು ಹೇಗೆ ಮತ್ತಷ್ಟು ಉತ್ತಮ ಗೊಳಿಸಬಹುದು. ಹೇಗೆ ಕ್ರಿಕೆಟ್ ಉತ್ತೇಜಿಸಬಹುದು ಎಂದು ನಾವು ಚರ್ಚಿಸಿದ್ದೇವೆ" ಎಂದು ಝಾಕಾ ಅಶ್ರಫ್ ತಿಳಿಸಿದ್ದಾರೆ.
ಈಗ ಪಿಸಿಬಿ ಅಧ್ಯಕ್ಷರ ಭಾರತ ಭೇಟಿ ಮತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧವನ್ನು ಸುಧಾರಿಸುವ ಕುರಿತು ಜಯ್ ಶಾ ಇನ್ನು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾಯುತ್ತಿದೆ.
ಎರಡೂ ತಂಡಗಳು ತಮ್ಮ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದುಕೊಂಡು ಮೈದಾನಕ್ಕಿಳಿಯಲಿವೆ. ಪಾಕಿಸ್ತಾನವು ನೆದರ್ಲೆಂಡ್ಸ್ ಮತ್ತು ಶ್ರೀಲಂಕಾವನ್ನು ಸೋಲಿಸಿದರೆ, ಭಾರತವು ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದೆ.
ಈಗ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ವಿಶ್ವಕಪ್ ಪಂದ್ಯವು ಹೇಗೆ ಕೂಡಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಜೊತೆಗೆ, ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತೆ ಆರಂಭವಾಗುತ್ತೋ ಎನ್ನುವ ಚರ್ಚೆಯೂ ಆರಂಭವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications