For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನಕ್ಕೆ 447 ಕೋಟಿ ಕೊಡಬೇಕಂತೆ ಬಿಸಿಸಿಐ! ಏನಿದು ವಿವಾದ?

PCB claims that BCCI should pay 447 crore, ICC begans hearing

ನವದೆಹಲಿ, ಅಕ್ಟೋಬರ್ 01: ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ತನಗೆ 447 ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಬೇಕು ಎಂದು ಐಸಿಸಿ ಮುಂದೆ ರಚ್ಚೆ ಹಿಡಿದು ಕೂತಿದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ).

ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿ ಆಡಲು ನಿರಾಕರಿಸಿದೆ ಹೀಗಾಗಿ ನಮಗೆ ಆಗಿರುವ ನಷ್ಟವನ್ನು ತುಂಬಿಸಿಕೊಡಬೇಕು ಎಂದು ಪಿಸಿಬಿಯು ಐಸಿಸಿ ಮುಂದೆ ಅವಲತ್ತುಕೊಂಡಿದೆ. ಪಿಸಿಬಿಯ ಅರ್ಜಿಯನ್ನು ಇಂದು ಐಸಿಸಿ ವಿಚಾರಣೆಗೆ ಎತ್ತಿಕೊಳ್ಳಲಿದೆ. ವಿಚಾರಣೆಯು ದುಬೈನಲ್ಲಿ ನಡೆಯಲಿದೆ.

ಅನುರಾಗ್ ಠಾಕೂರ್ ಅವರು ಬಿಸಿಸಿಐ ಅಧ್ಯಕ್ಷರಾಗಿದ್ದಾಗ ಎರಡು ಬಾರಿ ಪಾಕಿಸ್ತಾನದೊಂದಿಗೆ ಸರಣಿ ಆಡಲು ನಿರಾಕರಿಸಿದ್ದರು. ಯಾವುದೇ ಕಾರಣಕ್ಕೂ ಭಾರತವು ಪಾಕಿಸ್ತಾನಕ್ಕೆ ಹಣ ನೀಡಬಾರದು, ಅಷ್ಟೆ ಅಲ್ಲದೆ ಇಂದಿನ ವಿಚಾರಣೆಗೂ ಭಾರತ ಹಾಜರಾಗರಾಬಾರದು ಎಂದಿದ್ದಾರೆ.

PCB claims that BCCI should pay 447 crore, ICC begans hearing

ಬಿಸಿಸಿಐ ಈಗಾಗಲೇ ಬ್ರಿಟಿಶ್ ಲಾಯರ್ ಹಾಗೂ ದುಬೈ ಕಾನೂನು ಸಂಸ್ಥೆಯನ್ನು ಗೊತ್ತು ಮಾಡಿದ್ದು. ಅವರು ಬಿಸಿಸಿಐ ಪರವಾಗಿ ವಾದ ಮಂಡಿಸಲಿದ್ದಾರೆ. ದ್ವಿಪಕ್ಷೀಯ ಸರಣಿ ಆಡದಿರುರವುದಕ್ಕೆ ರಕ್ಷಣಾ ಕಾರಣಗಳಿವೆ. ಆದರೆ ನಾವು ಬೇರೆ ಸರಣಿಗಳಲ್ಲಿ ತಟಸ್ಥ ಜಾಗಗಳ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರದ್ಧ ಪಂದ್ಯಗಳನ್ನು ಆಡಿದ್ದೇವೆ ಎಂಬುದು ಬಿಸಿಸಿಐ ವಾದ. ವಿಚಾರಣೆಯು ದುಬೈನಲ್ಲೇ ನಡೆಯಲಿದೆ.

2015 ರಿಂದ 2023ರ ಒಳಗೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಆರು ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳಾಗಬೇಕಿದೆ. ಅದರಲ್ಲಿ ಎರಡು ಸರಣಿ ಈಗಾಗಲೇ ಆಗಿರಬೇಕಿತ್ತು. ಆದರೆ ಬಿಸಿಸಿಐ ಆಡಲು ನಿರಾಕರಿಸಿದೆ. ಐಸಿಸಿ ನಿಯಮದ ಪ್ರಕಾರ ಪ್ರತಿಯೊಂದು ತಂಡವು ಎಲ್ಲ ಟೆಸ್ಟ್‌ ಮಾನ್ಯತೆ ಪಡೆದ ತಂಡಗಳ ವಿರುದ್ಧ ದ್ವಿಪಕ್ಷೀಯ ಸರಣಿಯನ್ನು ನಿಗದಿತ ಅವಧಿಯೊಳಗೆ ಆಡಲೇ ಬೇಕು.

Story first published: Monday, October 1, 2018, 11:19 [IST]
Other articles published on Oct 1, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+