ಟೆಸ್ಟ್ ನಾಯಕತ್ವದಿಂದ ಸರ್ಫರಾಜ್ ಅಹ್ಮದ್ ಕಿಕ್ ಔಟ್‌ಗೆ ಪಾಕಿಸ್ತಾನ ನಿರ್ಧಾರ?!

ಇಸ್ಲಮಾಬಾದ್, ಜುಲೈ 29: ಸರ್ಫರಾಜ್ ಅಹ್ಮದ್ ಅವರನ್ನು ಟೆಸ್ಟ್ ನಾಯಕತ್ವದಿಂದ ಕೆಳಗಿಳಿಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ ಎಂದು ವರದಿಯೊಂದಿ ಹೇಳಿದೆ. ತಂಡ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ನಾಯಕತ್ವದಲ್ಲಿ ಬದಲಾವಣೆಯಾಗಲಿದೆ ಎಂದು ತಿಳಿದುಬಂದಿದೆ.
ಜಿಯೋ ನ್ಯೂಸ್ ವರದಿ ಮಾಡಿರುವಂತೆ ಪಾಕಿಸ್ತಾನ ಟೆಸ್ಟ್ ತಂಡಕ್ಕೆ ಹೊಸ ನಾಯಕನನ್ನು ನೇಮಿಸಲು ಪಾಕ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಮುಂದಿನ ಶುಕ್ರವಾರ ಲಾಹೋರ್‌ನಲ್ಲಿ ನಡೆಯುವ ಪಿಸಿಬಿ ಸಭೆಯಲ್ಲಿ ಈ ವಿಚಾರವನ್ನು ಚರ್ಚೆಯಾಗಲಿದೆ. ಟೆಸ್ಟ್ ನಾಯಕನಾಗಿ ಶಾನ್ ಮಸೂದ್ ನೇಮಿಸಲು ಪಿಸಿಬಿ ನಿರ್ಧರಿಸಿದೆ ಎನ್ನಲಾಗಿದೆ.
ಪಾಕ್ ಕ್ರಿಕೆಟ್ ಬೋರ್ಡ್‌ನಲ್ಲಿರುವ ಎಲ್ಲರಿಗೂ ಮಸೂದ್ ಆರಿಸುವತ್ತ ಒಲವಿಲ್ಲ. ಆದರೆ ನಾಯಕನ ಬದಲಾವಣೆಯ ವಿಚಾರ ಪಿಸಿಬಿ ಯಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸರ್ಫರಾಜ್ ಅಹ್ಮದ್ ಕೂಡ ಇದಕ್ಕೆ ಪುರಾವೆ ಒದಗಿಸುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮಾತನಾಡಿದ್ದ ಸರ್ಫರಾಜ್, 'ಟೆಸ್ಟ್ ನಾಯಕತ್ವ ಬದಲಾವಣೆಯ ವಿಚಾರ ನಾನು ಹೇಳುತ್ತಿಲ್ಲ. ನಾನು ರಾಜೀನಾಮೆ ನೀಡಲು ನಿರಾಕರಿಸಿದ್ದೇನೆ. ಆದರೆ ಈ ಬಗ್ಗೆ ಪಿಸಿಬಿ ನಿರ್ಧರಿಸಲಿದೆ. ಒಂದಂತೂ ಖಂಡಿತವಾಗಿ ಹೇಳಬಲ್ಲೆ; ಏನೆಂದರೆ ಪಿಸಿಬಿ ಏನೇ ನಿರ್ಧಾರ ತೆಗೆದುಕೊಂಡರೂ ಅದು ತಂಡದ ಒಳಿಗಿಗಾಗಿ ಆಗಿರಲಿದೆ,' ಎಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications