ಪಾಕ್‌ಗೆ ನ್ಯೂಜಿಲೆಂಡ್ ಪ್ರವಾಸ: ಭದ್ರತಾ ಸಿಬ್ಬಂದಿಯ ಬಿರಿಯಾನಿ ಬಿಲ್ ಎಷ್ಟು ಗೊತ್ತಾ?!

ಕರಾಚಿ: ಪಾಕಿಸ್ತಾನಕ್ಕೆ ಪ್ರವಾಸ ಬಂದಿದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭದ್ರತಾ ಭೀತಿಯ ನೆಪ ನೀಡಿ ಪ್ರವಾಸ ಸರಣಿಯಿಂದ ಹೊರ ನಡೆದಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನಕ್ಕೆ ಪ್ರವಾಸ ಬರಲಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡ ಕೂಡ ಪ್ರವಾಸ ಸರಣಿಯಿಂದ ದೂರ ಉಳಿಯುವ ನಿರ್ಧಾರ ಮಾಡುತ್ತಿದೆ. ಈ ಬೆಳವಣಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ದೊಡ್ಡ ನಷ್ಟ ತಂದಿದೆ.
ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಪ್ರವಾಸ ಸರಣಿಯಿಂದ ಹಿಂದೆ ಸರಿದ ಬಳಿಕ ಬಂದಿರುವ ಒಂದು ವರದಿಯ ಪ್ರಕಾರ, ನ್ಯೂಜಿಲೆಂಡ್ ತಂಡ ಪಾಕ್‌ಗೆ ಬಂದಾಗ ಕಿವೀಸ್ ತಂಡಕ್ಕೆ ಭದ್ರತೆ ಒದಗಿಸುವ ಸಲುವಾಗಿ ಪಾಕ್ ದೊಡ್ಡ ಮಟ್ಟದ ಹಣ ವ್ಯಯಿಸಿದೆ. ಭದ್ರತಾ ಸಿಬ್ಬಂದಿಯ ಊಟೋಪಚಾರಕ್ಕಾಗಿಯೇ ಬರೋಬ್ಬರಿಗೆ 27 ಲಕ್ಷ ರೂ. ಬಿಲ್ ಪಿಸಿಬಿಗೆ ಬಂದಿದೆ.
ಬಹಳಷ್ಟು ವರದಿಯ ನ್ಯೂಜಿಲೆಂಡ್ ಪಾಕಿಸ್ತಾನಕ್ಕೆ ಪ್ರವಾಸ ಬಂದಾಗ ಭದ್ರತೆಗಾಗಿ ಪಾಕಿಸ್ತಾನ ಐವರು ಎಸ್‌ಪಿಎಸ್ (ಸ್ಟೇಟ್ ಪೊಲೀಸ್ ಸರ್ವಿಸ್), ಸುಮಾರು 500ರಷ್ಟು ಮಂದಿ ಎಸ್ಎಸ್‌ಪಿ (ಸೀನಿಯರ್ ಸೂಪರಿಂಟೆಂಡೆಂಟ್ ಪೊಲೀಸ್) ಸಿಬ್ಬಂದಿಗಳನ್ನು ನೇಮಿಸಿತ್ತು. ಅಷ್ಟೇ ಅಲ್ಲ, ಇದರ ಜೊತೆಗೆ ಪಾಕ್ ಆರ್ಮಿಯನ್ನೂ ನಿಯೋಜಿಸಲಾಗಿತ್ತು.
ಭದ್ರತೆಗಾಗಿ ನಿಯೋಜಿಸಲಾಗಿದ್ದ ಈ ಸಿಬ್ಬಂದಿಗಳಿಗೆ ದಿನಕ್ಕೆ ಎರಡು ಬಾರಿ ಬಿರಿಯಾನಿ ನೀಡಲಾಗಿತ್ತು. ಈ ಬಿರಿಯಾನಿಯ ಬಿಲ್ ಮಾತ್ರವೇ ಸುಮಾರು 27 ಲಕ್ಷ ರೂ.ನಷ್ಟಾಗಿದೆ ಎಂದು ವರದಿಗಳು ಹೇಳಿವೆ. ಪಾಕಿಸ್ತಾನಕ್ಕೆ ಬಂದಿದ್ದ ನ್ಯೂಜಿಲೆಂಡ್ ಅಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಐದು ಪಂದ್ಯಗಳ ಟಿ20ಐ ಸರಣಿ ಆಡುವುದರಲ್ಲಿತ್ತು. ಆದರೆ ಅಷ್ಟಾಗಿಯೂ ಭದ್ರತೆ ಭೀತಿಯ ಧ್ವನಿ ಕೇಳಿ ಬಂದಿದೆ ಎಂದು ನ್ಯೂಜಿಲೆಂಡ್ ಸರಣಿಯಿಂದ ಹಿಂದೆ ಸರಿದಿತ್ತು. ಹೀಗಾಗಿ ಪಾಕ್ ಬರೀ ಹಣ ವ್ಯಯಿಸಿದ್ದು ಮಾತ್ರ; ಉದ್ದೇಶಿತ ಸರಣಿಗಳು ನಡೆಯಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications