For Quick Alerts
ALLOW NOTIFICATIONS  
For Daily Alerts
 

ಚಾಂಪಿಯನ್ಸ್ ಟ್ರೋಫಿ ನಡೆಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ PCB

ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ಯಾವ ದೇಶಕ್ಕಾದ್ರೂ ಹೋಲಿಕೆ ಆಗುತ್ತದೆ ಎನ್ನುವ ಹಾಗೆ ಇದ್ದರೆ ಅದು ಪಾಕಿಸ್ತಾನ. ನೆರೆಯ ದೇಶ ಹಲವು ತೊಂದರೆಗಳನ್ನು ಅನುಭವಿಸುತ್ತಿದೆ. ಅಲ್ಲಿ ಹಲವು ಭಾಗದಲ್ಲಿನ ಜನ ಹೊತ್ತು ಊಟಕ್ಕೆ ಪರದಾಟ ನಡೆಸುತ್ತಿದ್ದಾರೆ. ಆದರೂ, ಪಾಕ್‌ ಚಾಂಪಿಯನ್ಸ್‌ ಟ್ರೋಫಿಯ ಆಯೋಜನೆಯ ಕನಸನ್ನು ಬಿಟ್ಟಿಲ್ಲ.

ಈಗ ಕೆಲ ದಿನಗಳ ಹಿಂದೆ ಪಾಕಿಸ್ತಾನ ಕ್ರೀಡಾಂಗಣದ ಮೂಲ ಸೌಕರ್ಯಗಳ ಕುರಿತಾದ ಸುದ್ದಿಯೊಂದು ಬಂದಿತ್ತು. ಅದು ಚೆನ್ನಾಗಿ ನಿಮಗೆ ನೆನಪಿರಬೇಕು. ಆ ಸುದ್ದಿ ಪಾಕ್‌ ಸ್ಟೇಡಿಯಂಗಳ ಸ್ಥಿತಿಗೆ ಹಿಡಿದ ಕೈ ಗನ್ನಡಿಯಾಗಿತ್ತು. ಆದರೂ ಪಾಕ್‌ ಏನು ಆಗೇ ಇಲ್ಲ ಎಂಬಂತೆ ಸೋಗು ಮಾಡುತ್ತಿದೆ. ಈಗ ಪಾಕ್‌ ಮಾಡಿರುವ ಕಾರ್ಯ ಕೇಳಿದ್ರೆ ಬೆಚ್ಚಿ ಬೀಳ್ತೀರಾ..

PCB Sells Naming Rights of Gaddafi Stadium for 1 Billion PKR Ahead of ICC Champions Trophy 2025

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಐಸಿಸಿ ಟೂರ್ನಿಗಳನ್ನು ಆಯೋಜಿಸಲೇಬೇಕು ಎಂಬ ಕನಸು ಕಾಣುತ್ತಿದೆ. ಈ ನಿಟ್ಟಿನಲ್ಲಿ ಪಾಕ್‌ ಸ್ಟೇಡಿಯಂಗಳಲ್ಲಿ ಮೂಲ ಸೌಕರ್ಯ ಹಾಗೂ ಐಸಿಸಿ ದರ್ಜೆಗೆ ಅವುಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪಾಕ್‌ ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಈ ಮೂಲಕ ಏನೇ ಆದ್ರೂ ತಮ್ಮ ಕೈ ಯಿಂದ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯವನ್ನು ಬಿಟ್ಟುಕೊಡುವ ಚಾನ್ಸ್‌ ಇಲ್ಲವೇ ಇಲ್ಲ ಎಂದು ಸಾರಿ ಹೇಳಿದೆ.

ಪಿಸಿಬಿ ಮಾಡಿದ್ದೇನು?

ಮುಂದಿನ ವರ್ಷ ಪಾಕ್‌ಗೆ ಚಾಂಪಿಯನ್ಸ್‌ ಟ್ರೋಫಿ ಆಯೋಜಿಸುವ ಅವಕಾಶ ಇಕ್ಕಿದೆ. ಇದಕ್ಕಾಗಿ ಪಾಕ್‌ ಈಗ ಹಣ ಸಂಗ್ರಹಣೆಗೆ ಮುಂದಾಗಿದೆ. ಪಿಸಿಬಿ ಸ್ಥಿತಿಯ ಬಗ್ಗೆ ಯಾರಿಗೂ ಹೇಳುವ ಅವಶ್ಯತೆ ಇಲ್ಲ. ಇದೇ ಕಾರಣಕ್ಕೆ ಚಾಂಪಿಯನ್ಸ್ ಟ್ರೋಫಿಯನ್ನು ನಿಗದಿತ ಸಮಯಕ್ಕೆ ಆಯೋಜಿಸಲು ಮಂಡಳಿಯು ವಿವಿಧ ರೀತಿಯಲ್ಲಿ ಹಣ ಸಂಗ್ರಹಿಸಲು ಮುಂದಾಗಿದೆ. ವರದಿಯನ್ನು ನಂಬುವದಾದರೆ ಪಿಸಿಬಿ ತನ್ನ ಐತಿಹಾಸಿಕ ಸ್ಟೇಡಿಯಂಗಳ ಹೆಸರುಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಪ್ರಸಿದ್ಧ ಗಡಾಫೆ ಕ್ರೀಡಾಂಗಣದ ಹೆಸರನ್ನು ಮರು ನಿರ್ಮಾಣ ಮಾಡಲು ಪಿಸಿಬಿ ಮುಂದಾಗಿದೆ ಎಂಬ ವರದಿಗಳು ಬರುತ್ತಿವೆ. ಪಿಸಿಬಿ ಗಡಾಫಿ ಕ್ರೀಡಾಂಗಣದ ನಾಮಕರಣದ ಹಕ್ಕುಗಳನ್ನು ಖಾಸಗಿ ಬ್ಯಾಂಕ್‌ಗೆ 5 ವರ್ಷಗಳವರೆಗೆ ಮಾರಾಟ ಮಾಡಿರುವ ಬಗ್ಗೆ ವರದಿಗಳು ಬಂದಿವೆ. ಈ ಒಪ್ಪಂದವನ್ನು 1 ಶತಕೋಟಿ ಪಾಕಿಸ್ತಾನಿ ರೂಪಾಯಿಗಳಿಗೆ ಮಾಡಲಾಗಿದೆ ಎನ್ನಲಾಗುತ್ತಿದೆ.. ಈ ಒಪ್ಪಂದದ ಅಧಿಕೃತತೆಯ ಬಗ್ಗೆ ಪಿಸಿಬಿ ಇನ್ನು ಯಾವುದೇ ಮಾಹಿತಿಯನ್ನು ನೀಡಿಲ್ಲ.

ಲಾಹೋರ್‌ನ ಕ್ರೀಡಾಂಗಣಕ್ಕೆ 1974 ರಲ್ಲಿ ಲಿಬಿಯಾದ ನಾಯಕ ಮುಅಮ್ಮರ್ ಗಡಾಫಿ ಅವರ ಹೆಸರನ್ನು ಇಡಲಾಗಿತ್ತು. ಪಾಕಿಸ್ತಾನದಲ್ಲಿ ಸ್ಟೇಡಿಯಂ ನಾಮಕರಣದ ಹಕ್ಕುಗಳನ್ನು ಮಾರಾಟ ಮಾಡುವ ಸಂಪ್ರದಾಯವನ್ನು ಪಿಸಿಬಿ ಮಾಜಿ ಅಧ್ಯಕ್ಷ ಮತ್ತು ಪಾಕಿಸ್ತಾನ ಮಾಜಿ ನಾಯಕ ರಮೀಜ್ ರಾಜಾ ಪ್ರಾರಂಭಿಸಿದರು. ರಾಜಾ ಅವರ ಅಧಿಕಾರಾವಧಿಯಲ್ಲಿ ಕರಾಚಿ ಕ್ರೀಡಾಂಗಣದ ನಾಮಕರಣದ ಒಪ್ಪಂದವನ್ನು ಬ್ಯಾಂಕ್‌ ಜೊತೆ ಮಾಡಿಕೊಳ್ಳಲಾಗಿತ್ತು.

ಭಾರತ ಪ್ರವಾಸ ಬೆಳೆಸುತ್ತದಾ?

ಪಾಕಿಸ್ತಾನದಲ್ಲಿ ಚಾಂಪಿಯನ್ಸ್‌ ಟ್ರೋಫಿಗಳು ನಡೆದಲ್ಲಿ ಭಾರತ ಪ್ರವಾಸ ಬೆಳೆಸುತ್ತದಾ ಎಂಬುದು ಕುತೂಹಲ ಮೂಡಿಸಿದೆ. ಅಸಲಿಗೆ ಇದಕ್ಕಾಗಿ ಬಿಸಿಸಿಐ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಇನ್ನು ಬಿಸಿಸಿಐ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ನಡೆಸುವಂತೆ ಬೇಡಿಕೆ ಇಟ್ಟಿದೆ.

Story first published: Saturday, August 31, 2024, 14:25 [IST]
Other articles published on Aug 31, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+