Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕ್ ನಾಯಕ ಬಾಬರ್ ಅಝಾಮ್, ತಂಡಕ್ಕೆ ಪಿಸಿಬಿಯಿಂದ ಎಚ್ಚರಿಕೆ

PCB warns Babar Azam and Co. for violating coronavirus SOPs

ಲಾಹೋರ್, ಜೂನ್ 10: ಪಾಕಿಸ್ತಾನ ಏಕದಿನ ಮತ್ತು ಟಿ20 ತಂಡದ ನಾಯಕ ಬಾಬರ್ ಅಝಾಮ್ ಮತ್ತು ಕೆಲ ಆಟಗಾರರಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಎಚ್ಚರಿಕೆ ನೀಡಿದೆ. ಕೊರೊನಾವೈರಸ್ ಮಾರ್ಗಸೂಚಿ ಉಲ್ಲಂಘಿಸಿದಕ್ಕಾಗಿ ಆಟಗಾರರಿಗೆ ಪಿಸಿಬಿ ಎಚ್ಚರಿಸಿದೆ.

ಬಾಬರ್ ಅಝಾಮ್ ಮತ್ತು ಪಾಕ್ ತಂಡದ ಕೆಲ ಆಟಗಾರರು, ಪಾಕ್‌ ನೀಡಿದ್ದ ಮಾರ್ಗಸೂಚಿಯನ್ನು ಮೀರಿ ಲಾಹೋರ್‌ನಲ್ಲಿ ಒಟ್ಟಾಗಿ ಕ್ರಿಕೆಟ್ ಅಭ್ಯಾಸ ನಡೆಸಿದ್ದರು. ಈ ವಿಚಾರ ಗಮನಕ್ಕೆ ಬಂದಿದ್ದರಿಂದ ಪಾಕ್ ಕ್ರಿಕೆಟ್ ಬೋರ್ಡ್ ಖಡಕ್ ಎಚ್ಚರಿಕೆ ನೀಡಿದೆ.

ಬಾಬರ್ ತನ್ನ ತಂಡದ ಸಹ ಆಟಗಾರರಾದ ಇಮಾಮ್ ಉಲ್ ಹಕ್, ವೇಗಿ ನಸೀಮ್ ಷಾ ಮತ್ತು ಕೆಲ ಸ್ಥಳೀಯ ಆಟಗಾರರು ಅಭ್ಯಾಸ ನಡೆಸುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೀಡಿಯೋ ಗಮನಕ್ಕೆ ಬಂದ ಬಳಿಕ ಪಿಸಿಬಿ ಎಚ್ಚೆತ್ತುಕೊಂಡಿದೆ.

ತಮ್ಮ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್‌ನಲ್ಲಿ ಕೊಠಡಿಗಳ ಕೊರತೆಯಿಂದಾಗಿ "ಜೈವಿಕ ಸುರಕ್ಷಿತ" ವಾತಾವರಣವನ್ನು ನಿರ್ಮಿಸುವಲ್ಲಿ ವಿಫಲವಾದ ಕಾರಣ, ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಮುಂಚಿತವಾಗಿ ಲಾಹೋರ್‌ನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಶಿಬಿರ ನಡೆಸುವ ನಿರ್ಧಾರವನ್ನು ಪಿಸಿಬಿ ಮಂಗಳವಾರ ರದ್ದುಗೊಳಿಸಿತ್ತು.

Story first published: Wednesday, June 10, 2020, 23:54 [IST]
Other articles published on Jun 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+