ಪ್ರಚಾರಕ್ಕಾಗಿ ಜನ ಈಗಲೂ ನನ್ನ ಹೆಸರು ಬಳಸ್ತಿದ್ದಾರೆ: ವಾಸಿಮ್ ಅಕ್ರಮ್

ಕರಾಚಿ, ಮೇ 8: ಕೆಲ ವ್ಯಕ್ತಿಗಳು ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳುವುದಕ್ಕೋಸ್ಕರ ಈಗಲೂ ನನ್ನ ಹೆಸರನ್ನು ಬಳಸುತ್ತಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಮ್ ಅಕ್ರಮ್ ಹೇಳಿದ್ದಾರೆ. ಪಾಕ್ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಅಮೀರ್ ಸೊಹೈಲ್ ಅವರನ್ನುದ್ದೇಶಿಸಿ ವಾಸಿಮ್ ಈ ಹೇಳಿಕೆ ನೀಡಿದ್ದಾರೆ.
ಅಮೀರ್ ಸೊಹೈಲ್ ಈ ಹಿಂದೆ ವಾಸಿಮ್ ಅಕ್ರಮ್ ಅವರನ್ನು ದೂರಿ ಮಾತನಾಡಿದ್ದರು. 1992ರಿಂದಲೂ ಪಾಕಿಸ್ತಾನ ತಂಡ ವಿಶ್ವಕಪ್ ಗೆಲ್ಲದಿರುವುದಕ್ಕೆ ಮಾಜಿ ವೇಗಿ ಅಕ್ರಮ್ ಕಾರಣ ಎಂದು ಸೊಹೈಲ್ ಹೇಳಿಕೆ ನೀಡಿದ್ದರು. ಇದಕ್ಕೆ ವಾಸಿಮ್ ಪ್ರತಿಕ್ರಿಯಿಸಿದ್ದಾರೆ.
'ಇಂಥ ನಕಾರಾತ್ಮಕ ವಿಚಾರಗಳನ್ನು ಕೇಳುವಾಗ ನನಗೆ ತುಂಬಾ ಬೇಸರವಾಗುತ್ತದೆ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ 17 ವರ್ಷಗಳು ಕಳೆದಿವೆ. ಆದರೂ ಈಗಲೂ ಕೆಲ ಜನ ತಮ್ಮ ಪ್ರಚಾರಕ್ಕಾಗಿ ನನ್ನ ಹೆಸರು ಬಳಸುತ್ತಿದ್ದಾರೆ,' ಎಂದು ವೆಬ್ ಶೋ ಒಂದರಲ್ಲಿ ಮಾತನಾಡುತ್ತ ವಾಸಿಮ್ ಹೇಳಿದರು.
'ನಾನೂ ಕೂಡ ಇವರೆಲ್ಲರ ಬಗ್ಗೆ ನಕಾರಾತ್ಮಕ ಹೇಳಿಕೆ ನೀಡಬಹುದು. ಆದರೆ ಅದರಿಂದೇನು ಪ್ರಯೋಜನ? ಇದೇ ಕಾರಣಕ್ಕೆ ಇಂಥದ್ದೆಲ್ಲ ಕೇಳಿಯೂ ನಾನು ಸುಮ್ಮನಿರೋದು. 17 ವರ್ಷ ನಿವೃತ್ತಿಯ ಬಳಿಕವೂ ನನ್ನನ್ನು ಪ್ರೀತಿ-ಗೌರವದಿಂದ ಯಾರೆಲ್ಲ ಕಾಣುತ್ತಿದ್ದಾರೋ ಅವರ ಬಗ್ಗೆಯಷ್ಟೇ ನಾನು ಯೋಚಿಸುತ್ತೇನೆ,' ಎಂದು ವಾಸಿಮ್ ನುಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications