ಕೆಪಿಎಲ್ : ಕರ್ನಾಟಕದ ಕಲಿಗಳ ತಾಲೀಮು ಜೋರು
ಬೆಂಗಳೂರು, ಆ.25: ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ20 ಟೂರ್ನಿಗಾಗಿ ಭರ್ಜರಿ ತಯಾರಿ ನಡೆದಿದೆ. ಕಾರ್ಬನ್ ಒಡೆಯರ್ ಕಪ್ ಪಂದ್ಯಾವಳಿಗಳು ಆ.28ರಿಂದ ಆರಂಭಗೊಳ್ಳಲಿದೆ. ಆಟಗಾರರು ಈಗಾಗಲೇ ಸಾಕಷ್ಟು ಬೆವರಿಳಿಸಿ, ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಕಾಯುತ್ತಿದ್ದಾರೆ.
ಕೆಪಿಎಲ್ ನಲ್ಲಿ ಗ್ಲಾಮರ್ ಸ್ಪರ್ಶ ನೀಡಲು ಇದೇ ಮೊದಲ ಬಾರಿಗೆ ಚಿತ್ರ ನಟರ ತಂಡವೊಂದು ಪಾಲ್ಗೊಳ್ಳುತ್ತಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಟೂರ್ನಿಯಲ್ಲಿ ಸೆಲೆಬ್ರಿಟಿಗಳ ತಂಡ ಆಡುತ್ತಿದೆ.[ಕಿಚ್ಚ ಸುದೀಪ್ ರಾಕ್ ಸ್ಟಾರ್ಸ್ ತಂಡ]
ಬೆಂಗಳೂರು ಸೇರಿದಂತೆ ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಕೆಪಿಎಲ್ 2014 ಪಂದ್ಯಾವಳಿ ನಡೆಯಲಿದೆ.ಆ.28ರಿಂದ ಪಂದ್ಯಾವಳಿಗಳು ಆರಂಭಗೊಳ್ಳಲಿದ್ದು, ಸೆ.12ರಂದು ಹುಬ್ಬಳ್ಳಿಯಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಕೆಪಿಎಲ್ ಟೂರ್ನಿ ಹೆಸರನ್ನು ಮರು ನಾಮಕರಣ ಮಾಡಲಾಗಿದ್ದು, ಕೆಎಸ್ ಸಿಎ ಮಾಜಿ ಅಧ್ಯಕ್ಷ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹೆಸರನ್ನು ಇಡಲಾಗಿದೆ.[ಕೆಪಿಎಲ್ ವೇಳಾಪಟ್ಟಿ ನೋಡಿ]
ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್, ಹುಬ್ಳಿ ಟೈಗರ್ಸ್, ಬಳ್ಳಾರಿ ಟೈಗರ್ಸ್, ಮಂಗಳೂರು ಯುನೈಟೆಡ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳ ಆಟಗಾರರು ಮೈದಾನದಲ್ಲಿ ತಾಲೀಮು ಆರಂಭಿಸಿದ್ದಾರೆ. ಅಭ್ಯಾಸ ಅವಧಿ ಬೆಳಗ್ಗೆ 7.30ರಿಂದ ಸಂಜೆ 5.30ರ ತನಕ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಗಿದೆ.
ವೇಗಿ ಆರ್ ವಿನಯ್ ಕುಮಾರ್, ರಾಬಿನ್ ಉತ್ತಪ್ಪ, ಕೆಎಲ್ ರಾಹುಲ್, ಕರಣ್ ನಾಯರ್ ಹಾಗೂ ಇನ್ನಿತರ ಆಟಗಾರರು ನೆಟ್ ಅಭ್ಯಾಸ ನಿರತ ಚಿತ್ರಗಳು ನಿಮಗಾಗಿ ಇಲ್ಲಿದೆ...

ಬ್ಯಾಟ್ ಮನ್ ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ (ಬಲ ಬದಿ) ಬಿಜಾಪುರ್ ಬುಲ್ಸ್ ಸಹ ಮಾಲೀಕ ಹಾಗೂ ಕೋಚ್ ಇರ್ಫಾನ್ ಸೇಠ್ ಜೊತೆಯಲ್ಲಿ

ವೇಗಿ ವಿನಯ್ ಕುಮಾರ್
ಬೆಳಗಾವಿ ಪ್ಯಾಂಥರ್ಸ್ ನಾಯಕ ಆರ್ ವಿನಯ್ ಕುಮಾರ್ ಅವರು ಬೌಲಿಂಗ್ ಅಭ್ಯಾಸ ನಿರತರಾಗಿದ್ದಾರೆ.

ಅಭ್ಯಾಸ ನಿರತ ಕೆಎಲ್ ರಾಹುಲ್
ಹುಬ್ಳಿ ಟೈಗರ್ಸ್ ನ ಸ್ಟಾರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅವರು ನೆಟ್ ಅಭ್ಯಾಸ ನಿರತರಾಗಿದ್ದಾರೆ.

ಮಂಗಳೂರಿನ ಕರಣ್ ನಾಯರ್
ಮಂಗಳೂರು ಯುನೈಟೆಡ್ ತಂಡದ ಕರಣ್ ನಾಯರ್ ಬ್ಯಾಟಿಂಗ್ ಗೆ ಸಿದ್ಧರಾಗುತ್ತಿದ್ದಾರೆ.

ಬುಲ್ಸ್ ಗಳಿಂದ ಕ್ಯಾಚಿಂಗ್ ಪ್ರಾಕ್ಟೀಸ್
ಬಿಜಾಪುರ ಬುಲ್ಸ್ ನ ಕುನಾಲ್ ಕಪೂರ್ ಅವರು ಕ್ಯಾಚಿಂಗ್ ಪ್ರಾಕ್ಟೀಸ್ ನಲ್ಲಿ ಬ್ಯುಸಿ.

ವೇಗಿ ಅಭಿಮನ್ಯು ಮಿಥುನ್
ಬಿಜಾಪುರ ಬುಲ್ಸ್ ನ ವೇಗಿ ಅಭಿಮನ್ಯು ಮಿಥುನ್ ಅವರು ನೆಟ್ ನಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ.

ವೇಗಿ ಎಸ್ ಅರವಿಂದ್
ಹುಬ್ಳಿ ಟೈಗರ್ಸ್ ನ ಎಡಗೈ ವೇಗಿ ಶ್ರೀನಾಥ್ ಅರವಿಂದ್ ಅವರು ಅಭ್ಯಾಸ ನಡೆಸಿದ್ದು ಹೀಗೆ

ಕುನಾಲ್ ಕಪೂರ್
ಬಿಜಾಪುರ್ ಬುಲ್ಸ್ ನ ಕುನಾಲ್ ಕಪೂರ್ ಅವರು ಭಾರಿ ಹೊಡೆತಗಳ ಅಭ್ಯಾಸ ಮಾಡುತ್ತಿದ್ದಾರೆ.

ಎಲ್ಲಾ ಆಟಗಾರರಲ್ಲೂ ಉತ್ಸಾಹ
ಎಲ್ಲಾ ತಂಡದ ಆಟಗಾರರಲ್ಲೂ ಉತ್ಸಾಹ ಕಂಡು ಬಂದಿದ್ದು, ಕೆಪಿಎಲ್ ನಲ್ಲಿ ಪ್ರತಿಭೆ ಪ್ರದರ್ಶನಕ್ಕೆ ಒಳ್ಳೆ ಅವಕಾಶ ಸಿಗುವ ಭರವಸೆ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications