Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ ಲೀಗ್ : ಜೈಪುರ ಪಿಂಕ್ ಪ್ಯಾಂಥರ್ಸ್‌ ವಿರುದ್ಧ ಅಬ್ಬರಿಸಿದ ಬೆಂಗಾಲ್ ವಾರಿಯರ್ಸ್

Pro kabaddi 2021

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 75ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ವಿರುದ್ಧ ಬೆಂಗಾಲ್ ವಾರಿಯರ್ಸ್ ಅಬ್ಬರಿಸಿದ್ರೆ, ದಬಾಂಗ್ ಡೆಲ್ಲಿ ವಿರುದ್ಧ ತೆಲುಗು ಪುಣೇರಿ ಪಲ್ಟನ್ ಗೆಲುವು ದಾಖಲಿಸಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ಪರ ಅರ್ಜುನ್ 10 ಪಾಯಿಂಟ್ಸ್ ಮೂಲಕ ಅಬ್ಬರದ ಆಟವಾಡಿದ್ರೆ, ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ 13 ಪಾಯಿಂಟ್ಸ್ ಮೂಲಕ ಮಿಂಚಿದ್ರು. ಕ್ಷೇತ್ರ ರಕ್ಷಣೆಯಲ್ಲಿ ಬೆಂಗಾಲ್ ವಾರಿಯರ್ಸ್‌ಗೆ ಹೋಲಿಸಿದ್ರೆ ಜೈಪುರ ಪಿಂಕ್ ಪ್ಯಾಂಥರ್ಸ್ ಹಿಂದೆ ಬಿದ್ದಿದೆ. ಬೆಂಗಾಲ್ ಒಟ್ಟು 10 ಟ್ಯಾಕಲ್ ಪಾಯಿಂಟ್ಸ್‌ ಗಳಿಸಿದ್ರೆ, ಜೈಪುರ ಕೇವಲ 4 ಪಾಯಿಂಟ್ಸ್‌ ಗಿಟ್ಟಿಸಿತು.

ಕ್ಷೇತ್ರ ರಕ್ಷಣೆಯಲ್ಲಿ ಎಡವಿದ ಪಿಂಕ್ ಪ್ಯಾಂಥರ್ಸ್ ಪಂದ್ಯದ ಆರಂಭದಿಂದಲೂ ವಾರಿಯರ್ಸ್ ಅಬ್ಬರದ ಹಿಂದೆ ಬಿದ್ದಿತು. ಅಂತಿಮವಾಗಿ 22-41 ಅಂತರದ ಪಾಯಿಂಟ್ಸ್‌ಗಳಿಂದ ಸೋಲನ್ನ ಕಂಡಿತು.

ಬೆಂಗಾಲ್ ಪರ ಮಣಿಂದರ್ ಸಿಂಗ್ 13, ನಬೀಬಕ್ಷ್‌ 6, ಸುಕೇಶ್ ಹೆಗ್ಡೆ 4 ಪಾಯಿಂಟ್ಸ್ ಕಲೆಹಾಕುವ ಮೂಲಕ ತಂಡಕ್ಕೆ ಆಧಾರವಾದ್ರು. ಅದೇ ಜೈಪುರ ಪಿಂಕ್ ಪ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ 10, ಅಮಿತ್ ನಗರ್ 6, ವಿಶ್ವಾಸ್ 2 ಪಾಯಿಂಟ್ಸ್ ಕಲೆಹಾಕಿದ್ರು.

ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ಮತ್ತು ಪಾಯಿಂಟ್ಸ್‌ ಟೇಬಲ್ ಅಗ್ರಜ ದಬಾಂಗ್ ಡೆಲ್ಲಿ ಮುಖಾಮುಖಿಯಾಗಿದ್ದವು. ಪುಣೇರಿ ಪಲ್ಟನ್ 21 ರೈಡಿಂಗ್ ಪಾಯಿಂಟ್ಸ್ ಪಡೆದ್ರೆ, ಡೆಲ್ಲಿ 19 ಪಾಯಿಂಟ್ಸ್‌ ಪಡೆಯಿತು. ಟ್ಯಾಕಲ್‌ನಲ್ಲಿ ಎಡವಿದ ದಬಾಂಗ್ ಡೆಲ್ಲಿ ಗಳಿಸಿದ್ದು ಕೇವಲ 4 ಪಾಯಿಂಟ್ಸ್. ಆದ್ರೆ ಅದೇ ಪುಣೇರಿ ಪಲ್ಟನ್ 13 ಟ್ಯಾಕಲ್ ಪಾಯಿಂಟ್ಸ್‌ ಮೂಲಕ ಮುನ್ನಡೆ ಸಾಧಿಸಿತು.

ಪುಣೇರಿ ಪಲ್ಟನ್ ಪರ ಮೊಹಿತ್ ಗೊಯತ್ 10, ಅಸ್ಲಾಂ ಇನಾಮ್ದಾರ್ 8, ನಿತಿನ್ ತೋಮರ್ 6 ಪಾಯಿಂಟ್ಸ್ ಪಡೆದ್ರೆ, ಡೆಲ್ಲಿ ಪರ ವಿಜಯ್ ಮಲ್ಲಿಕ್ 8, ನೀರಜ್ ನರ್ವಾಲ್ 6, ಸಂದೂಪ್ ನರ್ವಾಲ್ 5 ಪಾಯಿಂಟ್ಸ್ ಪಡೆದ್ರು.

Kohli ನಾಯಕತ್ವ ಬಿಡುವ ಹಿಂದೆ ದೊಡ್ಡ ಮಾಸ್ಟರ್ ಪ್ಲಾನ್ ಇತ್ತಾ! | Oneindia Kannada

ಅಂತಿಮವಾಗಿ ಪುಣೇರಿ ಪಲ್ಟನ್ ತಂಡವು ದಬಾಂಗ್ ಡೆಲ್ಲಿ ವಿರುದ್ಧ 42-25 ಪಾಯಿಂಟ್ಸ್‌ ಅಂತರದಲ್ಲಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಸೋಲಿನೊಂದಿಗೆ ಅಗ್ರಸ್ಥಾನದಲ್ಲಿದ್ದ ದಬಾಂಗ್ ಡೆಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಬೆಂಗಳೂರು ಬುಲ್ಸ್ 46 ಪಾಯಿಂಟ್ಸ್‌ನೊಂದಿಗೆ ಟೇಬಲ್ ಟಾಪರ್ ಆಗಿದೆ. ಎರಡನೇ ಸ್ಥಾನದಲ್ಲಿ ಡೆಲ್ಲಿ, ಮೂರನೇ ಸ್ಥಾನದಲ್ಲಿ ಬೆಂಗಾಲ್ ವಾರಿಯರ್ಸ್ ಸ್ಥಾನದ ಪಡೆದಿದೆ.

Story first published: Tuesday, January 25, 2022, 9:42 [IST]
Other articles published on Jan 25, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+