For Quick Alerts
ALLOW NOTIFICATIONS  
For Daily Alerts
 

ಪ್ರೊ ಕಬಡ್ಡಿ ಲೀಗ್ : ಪುಣೇರಿ ಪಲ್ಟನ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್‌ಗೆ ಗೆಲುವು

Pro kabaddi 2021

ಇಂದು ನಡೆದ ಪ್ರೊ ಕಬಡ್ಡಿ ಲೀಗ್‌ನ 64ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ ಅಬ್ಬರಿಸಿದ್ರೆ, ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ತೆಲುಗು ಟೈಟನ್ಸ್ ರೋಚಕ ಗೆಲುವು ದಾಖಲಿಸಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಇಂದು ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ ಪರ ವಿಶ್ವಾಸ್ 7 ಪಾಯಿಂಟ್ಸ್ ಮೂಲಕ ಅಬ್ಬರದ ಆಟವಾಡಿದ್ರೆ, ಹರಿಯಾಣ ಸ್ಟೀಲರ್ಸ್ ಪರ ವಿಕಾಸ್ ಖಂಡೋಲಾ 8 ಪಾಯಿಂಟ್ಸ್ ಮೂಲಕ ಮಿಂಚಿದ್ರು. ಹರಿಯಾಣ ಸ್ಟೀಲರ್ಸ್ ಪರ ಜೈದೀಪ್ ಮತ್ತು ಮೋಹಿತ್ ಉತ್ತಮ ಪ್ರದರ್ಶನದ ಮೂಲಕ 16 ಟ್ಯಾಕಲ್ ಪಾಯಿಂಟ್ಸ್‌ ಕಲೆಹಾಕಿದ್ರೆ, ಪುಣೇರಿ ಪಲ್ಟನ್ ಕ್ಷೇತ್ರ ರಕ್ಷಣೆಯಲ್ಲಿ ಎಡವಿ ಕೇವಲ 9 ಪಾಯಿಂಟ್ಸ್‌ ಪಡೆದು ಸೋಲಿಗೆ ಶರಣಾಯಿತು.

ಪುಣೇರಿ ಪಲ್ಟನ್ ಪರ ವಿಶ್ವಾಸ್ ಒಟ್ಟು 7 ಪಾಯಿಂಟ್ಸ್‌ನೊಂದಿಗೆ ಯಶಸ್ವಿ ರೈಡರ್‌ ಎನಿಸಿಕೊಂಡ್ರೆ, ನಿತಿನ್ ತೋಮರ್ 5 ಪಾಯಿಂಟ್ಸ್‌ನೊಂದಿಗೆ ಉತ್ತಮ ಸಾಥ್ ನೀಡಿದ್ರು.

ಇನ್ನು ಹರಿಯಾಣ ಸ್ಟೀಲರ್ಸ್ ಪರ ವಿಕಾಸ್ 8 ಪಾಯಿಂಟ್ಸ್‌ ಪಡೆದರು. ಜೈದೀಪ್ ಮತ್ತು ಮೋಹಿತ್ ತಲಾ ಏಳು ಪಾಯಿಂಟ್ಸ್‌ ಗಿಟ್ಟಿಸಿದ್ರು. ಅಂತಿಮವಾಗಿ ಹರಿಯಾಣ ಸ್ಟ್ರೀಲರ್ಸ್ 37-30 ಅಂತರದಲ್ಲಿ ಪಂದ್ಯ ಗೆದ್ದು ಬೀಗಿತು.

ಎರಡನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ತೆಲುಗು ಟೈಟನ್ಸ್ ಮುಖಾಮುಖಿಯಾಗಿದ್ದು, ಕೊನೆಯವರೆಗೂ ಯಾರಿಗೆ ವಿಜಯಲಕ್ಷ್ಮೀ ಒಲಿಯಬಹುದು ಎಂದು ಡೋಲಾಯಮಾನವಾಗಿತ್ತು. ಪಿಂಕ್ ಪ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ 13 ಪಾಯಿಂಟ್ಸ್ ಕಲೆಹಾಕಿ ಯಶಸ್ವಿ ರೈಡರ್ ಎನಿಸಿದ್ರು. ದೀಪಕ್ ನಿವಾಸ್ ಹೂಡ 8 ಪಾಯಿಂಟ್ಸ್‌ ಮುಟ್ಟಿದ್ದರು.

ರೈಡಿಂಗ್‌ನಲ್ಲಿ ಉಭಯ ತಂಡಗಳು ತಲಾ 21 ಪಾಯಿಂಟ್ಸ್ ಪಡೆದ್ರೆ, ಟ್ಯಾಕಲ್‌ನಲ್ಲಿ ತೆಲುಗು ಟೈಟನ್ಸ್‌ಗಿಂತ ಮೂರು ಪಾಯಿಂಟ್ಸ್ ಜೈಪುರ ಮುಂದಿತ್ತು. ಆದ್ರೆ ಅಂತಿಮವಾಗಿ ಪಿಂಕ್ ಪ್ಯಾಂಥರ್ಸ್‌ 34-35 ಅಂತರದಲ್ಲಿ ತೆಲುಗು ಟೈಟನ್ಸ್‌ಗೆ ಪಂದ್ಯ ಬಿಟ್ಟುಕೊಟ್ಟಿತು.

KL Rahul ಪ್ರಕಾರ ಪಂದ್ಯ ಸೋಲಲು ಇದೇ ಮುಖ್ಯ ಕಾರಣ | Oneindia Kannada

ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿ ದಬಾಂಗ್ ಡೆಲ್ಲಿ 42 ಪಾಯಿಂಟ್ಸ್‌ನೊಂದಿಗೆ ಅಗ್ರ ಸ್ಥಾನ ಪಡೆದಿದ್ದು, ಪಾಟ್ನ ಪೈರೇಟ್ಸ್ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ಬುಲ್ಸ್ 39 ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನ ಅಲಂಕರಿಸಿದೆ.

Story first published: Wednesday, January 19, 2022, 22:54 [IST]
Other articles published on Jan 19, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+