
ಪುಣೆಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 9ನೇ ಸೀನಸ್‌ನ 46ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು ತೆಲುಗು ಟೈಟನ್ಸ್ ವಿರುದ್ಧ 30-19 ಪಾಯಿಂಟ್ಸ್‌ಗಳಿಂದ ಗೆದ್ದು ಬೀಗಿದೆ.
ಮೊದಲಾರ್ಧದಲ್ಲಿ 12-9 ಪಾಯಿಂಟ್ಸ್‌ಗಳಿಂದ ಮುಂದಿದ್ದ ತೆಲುಗು ಟೈಟನ್ಸ್ ತಂಡವು ದ್ವಿತಿಯಾರ್ಧದಲ್ಲಿ ಆಶ್ವರ್ಯಕರ ರೀತಿಯಲ್ಲಿ ಪಂದ್ಯ ಸೋಲುವ ಮೂಲಕ ಹಿನ್ನಡೆ ಅನುಭವಿಸಿತು. 4 ರೈಡಿಂಗ್ ಪಾಯಿಂಟ್ಸ್ ಜೊತೆಗೆ 6 ಟ್ಯಾಕಲ್ ಪಾಯಿಂಟ್ ಮೂಲಕ ಮಿಂಚಿದ್ದ ತೆಲುಗು ಟೈಟನ್ಸ್ ವಿರಾಮದ ಬಳಿಕ ಎದುರಾಳಿಯಿಂದ ಪಾಯಿಂಟ್ ಗೆಲ್ಲಲು ಸೋತಿದೆ.
ದ್ವಿತಿಯಾರ್ಧದಲ್ಲಿ ಅದ್ಭುತವಾಗಿ ಕಂಬ್ಯಾಕ್ ಮಾಡಿದ ಗುಜರಾತ್ ಜೈಂಟ್ಸ್ ಒಟ್ಟು 21 ಪಾಯಿಂಟ್ಸ್ ಕಬಳಿಸಿತು. ಇದರಲ್ಲಿ 7 ರೈಡಿಂಗ್ ಪಾಯಿಂಟ್ಸ್, 9 ಟ್ಯಾಕಲ್ ಪಾಯಿಂಟ್ಸ್, 4 ಆಲೌಟ್ ಪಾಯಿಂಟ್‌ಗಳು ಸೇರಿದ್ದವು. ಆದ್ರೆ ಇದೇ ವೇಳೆಯಲ್ಲಿ ತೆಲುಗು ಟೈಟನ್ಸ್ ಆಟವು ಮಂಕಾಯಿತು. ಕೇವಲ 7 ಅಂಕ ಕಲೆಹಾಕಿದ ತೆಲುಗು ಟೈಟನ್ಸ್ 2 ರೈಡಿಂಗ್ ಪಾಯಿಂಟ್ಸ್ ಮತ್ತು 5 ಟ್ಯಾಕಲ್ ಕಲೆಹಾಕಿತು.
ಪಂದ್ಯದ ಕೊನೆಗೆ ಗುಜರಾತ್ ಟೈಟನ್ಸ್ ಅಮೋಘ ಗೆಲುವನ್ನ ಸಾಧಿಸಿದ್ದಲ್ಲದೆ 30-19 ಪಾಯಿಂಟ್ಸ್ ಅಂತರದಲ್ಲಿ ಗೆಲ್ಲುವ ಮೂಲಕ ದ್ವಿತಿಯಾರ್ಧದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತು.
ಗುಜರಾತ್ ಜೈಂಟ್ಸ್ ಪರ ರಾಕೇಶ್ ಮತ್ತು ಸೌರವ್ ಗುಲಿಯ, ಪ್ರತೀಕ್ ದಹಿಯಾ ತಲಾ 6 ಪಾಯಿಂಟ್ಸ್ ಪಡೆದ್ರೆ, ರಿಂಕು ನರ್ವಾಲ್ 4 ಪಾಯಿಂಟ್ ಗಿಟ್ಟಿಸಿದರು. ಇನ್ನು ತೆಲುಗು ಟೈಟನ್ಸ್ ಪರ ಡಿಫೆಂಡರ್ ಅಂಕಿತ್ 6 ಪಾಯಿಂಟ್ಸ್ ಗಳಿಸಿದ್ದೇ ಹೆಚ್ಚು.
ಈ ಗೆಲುವಿನೊಂದಿಗೆ ಗುಜರಾತ್ ಜೈಂಟ್ಸ್ ಆಡಿರುವ 8 ಪಂದ್ಯಗಳಲ್ಲಿ 4 ಗೆಲುವು, 3 ಸೋಲು, 1 ಟೈ ಮೂಲಕ 24 ಪಾಯಿಂಟ್ಸ್ ಕಲೆಹಾಕಿದೆ. ಪಂದ್ಯ ಸೋತಿರುವ ತೆಲುಗು ಟೈಟನ್ಸ್ ಆಡಿರುವ 8 ಪಂದ್ಯಗಳಲ್ಲಿ 7ನೇ ಸೋಲನ್ನ ಕಾಣುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದೆ.
ಪ್ರೊ ಕಬಡ್ಡಿ ಸೀಸನ್ 2022ರ ಸಂಪೂರ್ಣ ಪಾಯಿಂಟ್ಸ್ ಟೇಬಲ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ