ಫೈನಲ್ ನಲ್ಲಿ ಚೆನ್ನೈ ಗೆಲ್ಲುತ್ತೆ ಎನ್ನಲು ಬಲವಾದ ಕಾರಣಗಳಿವು..

ಮುಂಬೈ, ಮೇ 27: ಐಪಿಎಲ್ ಹಬ್ಬ ಇನ್ನೇನು ಮುಗಿಯುವುದರಲ್ಲಿದೆ. ಈ ಸಂಭ್ರಮಕ್ಕೆ ತೆರೆ ಬೀಳುವ ಮೊದಲು ಇಂದು ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಅಂತಿಮ ಕಾದಾಟ ನಡೆಯಲಿದೆ. ಕಳೆದ ಐಪಿಎಲ್ ಆವೃತ್ತಿಗಳಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದ ಚೆನ್ನೈ ಇಂದೂ ಸೂಪರ್ ಅನ್ನಿಸಿಕೊಳ್ಳುವುದೇ? ಹೌದು ಎನ್ನುತ್ತಿದೆ ಕ್ರೀಡಾಭಿಮಾನಿಗಳ ಬಳಗ.
ಐಪಿಎಲ್ ಫೈನಲ್ ನಲ್ಲಿ ಚೆನ್ನೈ ತಂಡವೇ ಚಾಂಪಿಯನ್ ಆಗಿ ಹೊರ ಹೊಮ್ಮುವ ತಂಡವೆನ್ನುವುದಕ್ಕೆ ಒಂದಿಷ್ಟು ಕಾರಣಗಳು ಸಿಕ್ಕುತ್ತವೆ. ಈವರೆಗೆ ಚೆನ್ನೈ ತಂಡದ ತೋರ್ಪಡಿಸಿದ ಸಾಧನೆಗಳೂ ಇದಕ್ಕೆ ಪುಷ್ಟಿ ನೀಡುತ್ತವೆ.
ಎರಡು ವರ್ಷಗಳ ನಿಷೇಧದ ಬಳಿಕ ಮತ್ತೆ ಐಪಿಎಲ್ ನಲ್ಲಿ ಚೆನ್ನೈ ಕಾಣಿಸಿಕೊಂಡಿದೆ. ಈ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಮೊದಲು ಫೈನಲ್ ಪ್ರವೇಶಿಸಿದ್ದಕ್ಕೂ ತಂಡದ ಗೆಲ್ಲುವ ಹಪಹಪಿಯೇ ಕಾರಣ. ಅದೂ ಕೂಲ್ ಕ್ಯಾಪ್ಟನ್ ಧೋನಿ ನಾಯಕತ್ವದಲ್ಲಿರುವ ಚೆನ್ನೈ ಇಂದೂ ಗೆಲ್ಲುವುದನ್ನು ನಿರೀಕ್ಷಿಸಬಹುದು.

ಧೋನಿ ನಾಯಕತ್ವ
ಐಪಿಎಲ್ ಆರಂಭವಾಗಿದ್ದರಿಂದ ಇದುವರೆಗೂ ಸಿಎಸ್ಕೆ ತಂಡವನ್ನು ಧೋನಿ, ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. 2 ವರ್ಷಗಳ ನಿಷೇಧದ ಅವಧಿಯನ್ನು ಹೊರತು ಪಡಿಸಿದರೆ, ಇದುವರೆಗೂ ಆಡಿರುವ 9 ಟೂರ್ನಿಗಳಲ್ಲಿ 7 ಬಾರಿ ತಂಡವನ್ನು ಫೈನಲ್ ಹಂತಕ್ಕೇರಿಸಿದ್ದಾರೆ. ಮುಂದಿನ ಐಪಿಎಲ್ ನಲ್ಲಿ ಧೋನಿ ಆಡುವುದು ಅನುಮಾನ ಎಂಬ ಮಾತುಗಳು ಕ್ರೀಡಾವಲಯದಲ್ಲಿ ಕೇಳಿ ಬರುತ್ತಿರುವುದರಿಂದ ಧೋನಿ ನಾಯಕತ್ವದಲ್ಲಿ ಸಿಎಸ್ಕೆ ಟ್ರೋಫಿ ಎತ್ತಿಕೊಳ್ಳವುದು ಬಹುತೇಕ ಖಚಿತವಾಗಿದೆ.

ರೈನ ಭರವಸೆ
ಈ ನಡುವೆ ಚೆನ್ನೈ ತಂಡದ ಮತ್ತೊಬ್ಬ ದಾಂಡಿಗ ಸುರೇಶ್ ರೈನ ಅವರೂ ಮಹೇಂದ್ರ ಸಿಂಗ್ ಧೋನಿಗಾಗಿ ನಾವು 2018ರ ಕಪ್ ಗೆದ್ದೇ ಗೆಲ್ತೀವಿ ಎಂದು ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ ಕೂಡ. ಅಲ್ಲಿಗೆ ತಂಡದ ಪ್ರತಿಯೊಬ್ಬರೂ ಮೆಚ್ಚಿನ ನಾಯಕ ಧೋನಿಗೆ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಶ್ರಮಿಸುವುದು ಖಂಡಿತಾ.

ಆಲ್ ರೌಂಡರ್ಸ್
ಅತ್ತ ಸನ್ ರೈಸರ್ಸ್ ನಲ್ಲಿ ಬ್ಯಾಟ್ಸ್ಮನ್ ಗಳನ್ನು ಸಂಪೂರ್ಣ ನಂಬುವಂತಿಲ್ಲ. ಹೈದರಾಬಾದ್ ಹೆಚ್ಚಿನ ಸಾರಿ ರಶೀದ್ ಖಾನ್, ಕೇನ್ ವಿಲಿಯಮ್ಸನ್ ಅವರು ಸೇರಿದಂತೆ ಒಂದಿಷ್ಟು ಆಟಗಾರರನ್ನು ಅವಲಂಬಿಸುತ್ತದೆ. ಚೆನ್ನೈಯಲ್ಲಿ ಆಲ್ ರೌಂಡರ್ ಗಳು ಹೆಚ್ಚಿದ್ದು ಬಹುತೇಕ ಆಟಗಾರರು ಪಂದ್ಯವನ್ನು ತಿರುಗಿಸಬಲ್ಲರು.

ಪ್ರಿಯಾ ವಾರಿಯಾರ್ ಕಿಕ್ಕು
ಈ ಎಲ್ಲದರ ನಡುವೆ ಅತ್ತ ಕಣ್ಣೊಡೆಯೋ ಹುಡ್ಗಿ ಪ್ರಿಯಾ ಪ್ರಕಾಶ್ ವಾರಿಯಾರ್ ಚೆನ್ನೈ ಗೆಲ್ಲಬೇಕು; ಚೆನ್ನೈ ಗೆದ್ದರೆ ತಂಡಕ್ಕೋಸ್ಕರ ನಾನು ಕಣ್ ಹೊಡೆದು ಫ್ಲೈಯಿಂಗ್ ಕಿಸ್ ಕೊಡುವ ನನ್ನ ಫೇಮಸ್ ನಟನೆಯನ್ನು ಮಾಡುವುದಾಗಿ ಚೆನ್ನೈ ಹುಡುಗರನ್ನು ರೊಚ್ಚಿಗೆಬ್ಬಿಸಿದ್ದಾರೆ ಬೇರೆ. ಇನ್ನು ಚೆನ್ನೈ ಸೋಲಲು ಕಾರಣವೇನಿದೆ ಹೇಳಿ?
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications