Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಡೊ-ಪಾಕ್‌ ಕದನ: ಟೀಮ್‌ ಇಂಡಿಯಾಗೆ ಎಚ್ಚರಿಕೆ ನೀಡಿದ ಸಚಿನ್‌!

ICC World Cup 2019 : ಸಚಿನ್ ಈ ರೀತಿ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದೇಕೆ..? | Oneindia Kannada
Play aggressively against Mohammad Amir: Tendulkars advice

ಲಂಡನ್‌, ಜೂನ್‌ 14: ಇಡೀ ಕ್ರಿಕೆಟ್‌ ಜಗತ್ತೇ ಕಾದು ಕುಳಿತಿರುವ ಬಹು ನಿರೀಕ್ಷಿತ ಇಂಡೊ-ಪಾಕ್‌ ವಿಶ್ವಕಪ್‌ ಪಂದ್ಯ ಆರಂಭಕ್ಕೆ ಇನ್ನೆರಡೇ ದಿನ ಬಾಕಿ ಇದ್ದು, ಭಾರತ ತಂಡದ ಮಾಜಿ ನಾಯಕ ಹಾಗೂ ಬ್ಯಾಟಿಂಗ್‌ ಮಾಂತ್ರಿಕ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಸಾರಥ್ಯದ ಭಾರತ ತಂಡಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ವಿಶ್ವಕಪ್‌ನಲ್ಲಿ ರನ್‌ ಹೊಳೆಯನ್ನೇ ಹರಿಸಿದ ಅನುಭ ಹೊಂದಿರುವ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಟೀಮ್‌ ಇಂಡಿಯಾದ ಬ್ಯಾಟ್ಸ್‌ಮನ್‌ಗಳಿಗೆ ಪಾಕಿಸ್ತಾನ ವೇಗದ ಬೌಲರ್‌ಗಳ ಎದುರು ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ. ಪಾಕಿಸ್ತಾನ ತಂಡದ ಬೌಲಿಂಗ್‌ ಉತ್ತಮವಾಗಿದ್ದು, ವಹಾಬ್‌ ರಿಯಾಝ್‌ ಮತ್ತು ಮೊಹಮ್ಮದ್‌ ಆಮಿರ್‌ ಟೀಮ್‌ ಇಂಡಿಯಾದ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿಯನ್ನು ಗುರಿಯಾಗಿಸಲಿದ್ದಾರೆ ಎಂದಿದ್ದಾರೆ.

ಧೋನಿ-ಯುವಿ ನಡುವಣ ಗೆಳೆತನ ವೈರತ್ವಕ್ಕೆ ತಿರುಗಿದೆಯೇ?

"ಟೀಮ್‌ ಇಂಡಿಯಾದಲ್ಲಿ ರೋಹಿತ್‌ ಮತ್ತು ವಿರಾಟ್‌ ಹೆಚ್ಚು ಅನುಭವ ಹೊಂದಿರುವ ಬ್ಯಾಟ್ಸ್‌ಮನ್‌ಗಳು. ಹೀಗಾಗಿ ಅವರಿಬ್ಬರನ್ನು ಔಟ್‌ ಮಾಡಲು ಪಾಕಿಸ್ತಾನ ತಂಡದ ಬೌಲರ್‌ಗಳು ಮೊದಲು ಮುನ್ನುಗ್ಗಲಿದ್ದಾರೆ. ಆರಂಭದಲ್ಲೇ ಇವರಿಬ್ಬರ ವಿಕೆಟ್‌ ಪಡೆಯಲು ಮೊಹಮ್ಮದ್‌ ಆಮಿರ್‌ ಮತ್ತು ವಹಾಬ್‌ ರಿಯಾಝ್‌ ಪ್ರಯತ್ನಿಸಲಿದ್ದಾರೆ,'' ಎಂದು ಡ್ರೆಂಟ್‌ ಬ್ರಿಡ್ಜ್‌ನಲ್ಲಿ ಗುರುವಾರ ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಪಂದ್ಯ ಮಳೆಯಿಂದಾಗಿ ರದ್ದಾದ ಬಳಿಕ ಸಚಿನ್‌ ಹೇಳಿದ್ದಾರೆ.

ಇದೇ ವೇಳೆ ಪಾಕಿಸ್ತಾನದ ವೇಗಿಗಳ ಎದುರು ಅದರಲ್ಲು ಎಡಗೈ ವೇಗಿ ಮೊಹಮ್ಮದ್‌ ಆಮಿರ್‌ ಎದುರು ಹೇಗೆ ಬ್ಯಾಟಿಂಗ್‌ ಮಾಡಬೇಕೆಂಬುದನ್ನೂ ಸಚಿನ್‌ ಹೇಳಿಕೊಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಆಮಿರ್‌ ಭರ್ಜರಿ ಬೌಲಿಂಗ್‌ ಸಂಘಟಿಸಿ ತಮ್ಮ ವೃತ್ತಿ ಬದುಕಿನ ಶ್ರೇಷ್ಠ ಪ್ರದರ್ಶನವಾಗಿ 30ಕ್ಕೆ 5 ವಿಕೆಟ್‌ ಪಡೆದಿದ್ದರು.

"ರೋಹಿತ್‌ ಮತ್ತು ವಿರಾಟ್‌ ಇಬ್ಬರೂ ದೊಡ್ಡ ಇನಿಂಗ್ಸ್‌ ಆಡಬೇಕಿದೆ. ಇದು ತಂಡದ ಮುಖ್ಯ ಯೋಜನೆಯಾಗಬೇಕು. ಉಳಿದ ಆಟಗಾರರು ಅವರಿಬ್ಬರೊಟ್ಟಿಗೆ ಆಡಲು ಪ್ರಯತ್ನಿಸಬೇಕು. ಆಮಿರ್‌ ಎದುರು ಹೆಚ್ಚು ಡಾಟ್‌ ಬಾಲ್‌ ಆಡುವ ಋಣಾತ್ಮಕ ಮನಸ್ಥಿತಿಯಲ್ಲಿ ಆಡಬಾರದು. ಅವಕಾಶ ಸಿಕ್ಕಾಗಲೆಲ್ಲಾ ಹೊಡೆತಗಳನ್ನಾಡಿ ವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಎಲ್ಲಾ ವಿಭಾಗಗಳಲ್ಲಿಯೂ ಆಖ್ರಮಣಕಾರಿ ಆಟವಾಡಬೇಕು. ಆತ್ಮವಿಶ್ವಾಸ ಮುಖ್ಯ,'' ಎಂದು ಸಚಿನ್‌ ಹೇಳಿದ್ದಾರೆ.

ಶಿಖರ್‌ ಧವನ್‌ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಕೆ.ಎಲ್‌ ರಾಹುಲ್‌ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ದಿನೇಶ್‌ ಕಾರ್ತಿಕ್‌ ಅಥವಾ ವಿಜಯ್‌ ಶಂಕರ್‌ ಆಡುವ ಸಾಧ್ಯತೆ ಇದೆ.

Story first published: Friday, June 14, 2019, 16:59 [IST]
Other articles published on Jun 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+