ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ-ಯುವಿ ನಡುವಣ ಗೆಳೆತನ ವೈರತ್ವಕ್ಕೆ ತಿರುಗಿದೆಯೇ?

Worldcup 2019: 2011ರ ವಿಶ್ವಕಪ್‍ನಲ್ಲಿ ಹೀರೋಗಳಾಗಿದ್ದರು ಧೋನಿ, ಯುವಿ | Oneindia Kannada
Yuvraj Singh and MS Dhonis age-old alleged rift

ಹೊಸದಿಲ್ಲಿ, ಜೂನ್‌ 13: ಟೀಮ್‌ ಇಂಡಿಯಾಗೆ 2011ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದು ಕೊಡುವಲ್ಲಿ ಇಬ್ಬರು ಆಟಗಾರರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಟೂರ್ನಿ ಶ್ರೇಷ್ಠ ಆಟಗಾರ ಯುವರಾಜ್‌ ಸಿಂಗ್‌ ಮತ್ತು ಅಂದಿನ ಭಾರತ ತಂಡದ ನಾಯಕ ಎಂ.ಎಸ್‌ ಧೋನಿ ಈ ವಿಶ್ವಕಪ್‌ನಲ್ಲಿ ಭಾರತ ಪಾಲಿಗೆ ಹೀರೊಗಳಾಗಿದ್ದರು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಈ ಇಬ್ಬರು ಆಟಗಾರರು ಆನ್‌ ಫೀಲ್ಡ್‌ ಮತ್ತು ಆಫ್‌ಫೀಲ್ಡ್‌ನಲ್ಲೂ ಅತ್ಯುತ್ತಮ ಗೆಳೆಯರಾಗಿದ್ದರು ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಎಷ್ಟೂ ಸರಣಿ ಗೆಲುವಿನ ಸಂದರ್ಭಗಳಲ್ಲಿ ಗೆದ್ದ ಬೈಕ್‌ನಲ್ಲಿ ಧೋನಿ ಮತ್ತು ಯುವಿ ಕ್ರೀಡಾಂಗಣದಲ್ಲಿ ಸವಾರಿ ನಡೆಸಿ ತಮ್ಮ ಗೆಳೆತನ ಪ್ರದರ್ಶಿಸಿದ್ದರು. ಆದರೆ, ಈ ಇಬ್ಬರೂ ಆಟಗಾರರನ ನಡುವಣ ಗೆಳೆತನ ಇದೀಗ ಮುರಿದು ಬಿದ್ದಿದೆಯೇ ಎಂಬ ಸಂಶಯ ಎಲ್ಲರನ್ನು ಕಾಡಲಾರಂಭಿಸಿದೆ.

ಗಾಯಾಳುಗಳಿಂದ ಕಳೆಗುಂದಿತೆ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ?ಗಾಯಾಳುಗಳಿಂದ ಕಳೆಗುಂದಿತೆ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ?

ಸ್ಟಾರ್‌ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ತಮ್ಮ 19 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ಮತ್ತು ಐಪಿಎಲ್‌ಗೆ ಸೋಮವಾರವಷ್ಟೇ ನಿವೃತ್ತಿ ಹೇಳಿದ್ದರು. ಈ ಸಂದರ್ಭದಲ್ಲಿ ಯುವರಾಜ್‌ ಎಲ್ಲಿಯೂ ಕೂಡ ಧೋನಿ ಜೊತೆಗಿನ ಬಾಂಧವ್ಯದ ಕುರಿತಾಗಿ ಮಾತನಾಡಲಿಲ್ಲ. ಇನ್ನು ಟೀಮ್‌ ಇಂಡಿಯಾದ ಹಾಲಿ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಇಡೀ ಕ್ರಿಕೆಟ್‌ ಜಗತ್ತೇ ನಿವೃತ್ತಿ ಪ್ರಕಟಿಸಿದ ಯುವರಾಜ್‌ಗೆ ಶುಭಾಶಯ ಹೇಳಿರುವಾಗ, ಮಾಜಿ ನಾಯಕ ಎಂ.ಎಸ್‌ ಧೋನಿ ಎಲ್ಲಿಯೂ ಪ್ರತಿಕ್ರಿಯೆ ನೀಡದೇ ಇರುವುದು ಇವರಿಬ್ಬರ ನಡುವಣ ಗೆಳೆತನ ಈಗ ಬೇರೆಯದ್ದೇ ರೂಪ ಪಡೆದಿದೆ ಎಂಬ ಸಂಶಯ ಮೂಡುವಂತೆ ಮಾಡಿದೆ.

ಧವನ್‌ ಫಿಟ್ನೆಸ್‌ ಬಗ್ಗೆ ಕೊನೆಗೂ ಮಾತನಾಡಿದ ಕ್ಯಾಪ್ಟನ್‌ ಕೊಹ್ಲಿ!ಧವನ್‌ ಫಿಟ್ನೆಸ್‌ ಬಗ್ಗೆ ಕೊನೆಗೂ ಮಾತನಾಡಿದ ಕ್ಯಾಪ್ಟನ್‌ ಕೊಹ್ಲಿ!

ಯುವಿ ಮತ್ತು ಧೋನಿ ಇಬ್ಬರೂ ಬರೋಬ್ಬರಿ 10 ವರ್ಷಗಳ ಕಾಲ ಟೀಮ್‌ ಇಂಡಿಯಾದಲ್ಲಿ ಜೊತೆಯಾಗಿ ಆಡಿದ್ದಾರೆ. ಧೋನಿ-ಯುವಿ ಸಂಯೋಜನೆ ಎದುರಾಳಿ ತಂಡಗಳ ಎದೆಯಲ್ಲಿ ನಡುಕ ಹಿಟ್ಟಿಸಿದಂತ ಜೋಡಿ. ಆದರೆ, ಈ ಜೋಡಿ ಇದೀಗ ಬೇರ್ಪಟ್ಟಿರುವುದು ಸ್ಪಷ್ಟವಾಗುತ್ತಿದೆ. ನಿವೃತ್ತಿ ಸಂದರ್ಭದಲ್ಲಿ ಯುವರಾಜ್‌ ಕೂಡ ತಾವು ಯಾವುದೇ ವಿವಾದಾತ್ಮಕ ಹೇಳಿಕೆ ನೀಡಲು ಸದ್ಯಕ್ಕೆ ಬಯಸುವುದಿಲ್ಲ. ಸೂಕ್ತ ಸಂದರ್ಭದಲ್ಲಿ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದ್ದರು. ಇದರರ್ಥ ಧೋನಿ ವಿಚಾರವಾಗಿಯೂ ಯುವಿ ತುಟಿ ಬಿಚ್ಚುವ ಸಾಧ್ಯತೆಗಳಿವೆ.

ಯುವರಾಜ್‌ ಅವರ ತಂದೆ ಯೋಗರಾಜ್‌ ಸಿಂಗ್‌ ಕೂಡ ಹಲವು ಬಾರಿ ಧೋನಿ ವಿರುದ್ಧ ಕಿಡಿ ಕಾರಿದ್ದರು. ಅಷ್ಟೇ ಅಲ್ಲದೆ ಧೋನಿ ಒಬ್ಬ 'ಸೊಕ್ಕಿನ' ವ್ಯಕ್ತಿ ಎಂದೆಲ್ಲಾ ಜಾಡಿಸಿದ್ದರು. ಇದೀಗ ಈ ಇಬ್ಬರು ಕ್ರಿಕೆಟಿಗರ ನಡುವಣ ಅನಧಿಕೃತ ವೈರತ್ವಕ್ಕೆ ತುಪ್ಪ ಸುರಿಯುವಂತಹ ಕೆಲಸವನ್ನು ಬಾಲಿವುಡ್‌ನ ನಟ ಕಮಾಲ್‌ ರಶೀದ್‌ ಖಾನ್‌ ಮಾಡಿದ್ದಾರೆ.

ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ಗೆ ಬಿಸಿಸಿಐನಿಂದಲೇ ಮೋಸ!ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ಗೆ ಬಿಸಿಸಿಐನಿಂದಲೇ ಮೋಸ!

ಬಾಲಿವುಡ್‌ನಲ್ಲಿ ಕೆಆರ್‌ಕೆ ಎಂದೇ ಕರೆಸಿಕೊಳ್ಳುವ ಕಮಾಲ್‌ ರಶೀದ್‌ ಟ್ವಿಟರ್‌ ಮೂಲಕ ಧೋನಿ ಮತ್ತು ಯುವರಾಜ್‌ ನಡುವಣ ವೈರತ್ವದ ಬಗ್ಗೆ ಮಾತನಾಡಿದ್ದಾರೆ. "ಧೋನಿ ಮತ್ತು ಯುವರಾಜ್‌ ನಡುವೆ ಯಾವುದೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಯುವರಾಜ್‌ ಎಲ್ಲಿಯೂ ಧೋನಿ ಬಗ್ಗೆ ಮಾತನಾಡಲಿಲ್ಲ. ಯುವಿ ನಿವೃತ್ತಿ ಬಗ್ಗೆಯೂ ಧೋನಿ ಎಲ್ಲಿಯೂ ತುಟಿಬಿಚ್ಚಿಲ್ಲ. ಇದರರ್ಥ ಇವರಿಬ್ಬರ ನಡುವಣ ವೈರತ್ವ ಹಳೆಯದ್ದು ಹಾಗೂ ಸಾಕಷ್ಟು ಆಳವಾದುದ್ದಾಗಿದೆ,'' ಎಂದು ಟ್ವೀಟ್‌ ಮಾಡಿದ್ದಾರೆ.

ಒಡಿಐ ಕ್ರಿಕೆಟ್‌ನಲ್ಲಿ ಯುವರಾಜ್‌ಗೆ ಕೀರ್ತಿ ತಂದ 5 ಪಂದ್ಯಗಳಿವು!ಒಡಿಐ ಕ್ರಿಕೆಟ್‌ನಲ್ಲಿ ಯುವರಾಜ್‌ಗೆ ಕೀರ್ತಿ ತಂದ 5 ಪಂದ್ಯಗಳಿವು!

2011ರ ವಿಶ್ವಕಪ್‌ ಬಳಿಕ ಕ್ಯಾನ್ಸರ್‌ಗೆ ತುತ್ತಾದ ಯುವರಾಜ್‌ ಸಿಂಗ್‌, ಕ್ಯಾನ್ಸರ್‌ನಿಂದ ಗುಣಮುಖರಾದ ಬಳಿಕ ಭಾರತ ತಂಡದ ಪರ ಮರಳಿ ಏಕದಿನ ಕ್ರಿಕೆಟ್‌ನಲ್ಲಿ ಆಡಿದ್ದು 2017ರಲ್ಲಿ ಅದು ಕೂಡ ಧೋನಿ ತಮ್ಮ ನಾಯಕತ್ವದಿಂದ ಕೆಳಗಿಳಿದ ಮೇಲೆ. ಅಂದಹಾಗೆ ಯುವರಾಜ್‌ ಮತ್ತು ಧೋನಿ ನಡುವಣ ಗೆಳೆತನ ನಿಜಕ್ಕೂ ಮುರಿದು ಬಿದ್ದಿದೆಯೇ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.

Story first published: Thursday, June 13, 2019, 23:19 [IST]
Other articles published on Jun 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X