For Quick Alerts
ALLOW NOTIFICATIONS  
For Daily Alerts
 

ಹೆಚ್ಚುತ್ತಿದೆ ಕ್ರಿಕೆಟ್ ಬೆಟ್ಟಿಂಗ್ ಹಾವಳಿ: ಒಬ್ಬನ ಬಂಧನ

ಬೆಂಗಳೂರು, ಏಪ್ರಿಲ್ 21: ಐಪಿಎಲ್ ಆರಂಭವಾಗುತ್ತಿದ್ದಂತೆಯೇ ಬೆಟ್ಟಿಂಗ್ ಹಾವಳಿಯೂ ತೀವ್ರಗೊಂಡಿದೆ. ನಗರದ ವಿವಿಧೆಡೆ ದೊಡ್ಡ ಮೊತ್ತದ ವಹಿವಾಟುಗಳು ಬೆಟ್ಟಿಂಗ್ ರೂಪದಲ್ಲಿ ನಡೆಯುತ್ತಿದೆ.

ಯಾವ ತಂಡ ಗೆಲ್ಲುತ್ತದೆ, ಯಾವ ತಂಡ ಎಷ್ಟು ರನ್ ಹೊಡೆಯುತ್ತದೆ, ಯಾರು ಗರಿಷ್ಠ ಸ್ಕೋರರ್ ಆಗುತ್ತಾರೆ, ಯಾರು ಎಷ್ಟು ವಿಕೆಟ್ ಕೀಳುತ್ತಾರೆ ಮುಂತಾದ ಪಂದ್ಯದ ಒಟ್ಟು 240 ಎಸೆತಗಳ ಮೇಲೆಯೂ ಬೆಟ್ಟಿಂಗ್ ನಡೆಯುತ್ತದೆ. ಇತರೆ ಪಂದ್ಯಗಳಿದ್ದಾಗಲೂ ಬೆಟ್ಟಿಂಗ್ ನಡೆಯುತ್ತದೆ. ಆದರೆ ವಿಶ್ವಕಪ್, ಐಪಿಎಲ್ ಮುಂತಾದ ಪ್ರಮುಖ ಟೂರ್ನಿಗಳಲ್ಲಿ ಬೆಟ್ಟಿಂಗ್ ಹಾವಳಿ ಅಧಿಕಗೊಳ್ಳುತ್ತದೆ. ಮೇ 27ರವರೆಗೂ ಐಪಿಎಲ್ ನಡೆಯಲಿದ್ದು, ಅಲ್ಲಿಯವರೆಗೆ ಭಾರಿ ಪ್ರಮಾಣದ ಹಣದ ಹೊಳೆ ಹರಿಯಲಿದೆ.

ಮಂಗಳವಾರ (ಏ. 17) ಆರ್‌ಎಂಸಿ ಯಾರ್ಡ್‌ನ ಕೊರಿಯರ್ ಕಚೇರಿ ಒಂದರಲ್ಲಿ ಜನರಿಂದ ಹಣ ಪಟ್ಟಿಸಿಕೊಂಡು ಬೆಟ್ಟಿಂಗ್ ಆಡುತ್ತಿದ್ದ ಸೋಮಶೇಖರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

Police arrest a person for alleged involvement in betting

ಆರೋಪಿಯಿಂದ 59,000 ನಗದು ಹಣ, ಎರಡು ಮೊಬೈಲ್ ಫೋನ್‌ಗಳು, ಬೆಟ್ಟಿಂಗ್‌ ವಿವರಗಳನ್ನು ಬರೆದಿರುವ ಪಾಕೆಟ್ ಡೈರಿ ಹಾಗೂ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿತ್ತು. ಇದರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಆರ್‌ಸಿಬಿ ತಂಡವನ್ನು ಮಣಿಸಿತ್ತು.

Story first published: Saturday, April 21, 2018, 16:10 [IST]
Other articles published on Apr 21, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+