Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಶ್ರೇಯಾಂಕ ಪಟ್ಟಿ ಕೊಹ್ಲಿ 4th, ಧವನ್ 6th

ದುಬೈ, ಮಾ.31: ಐಸಿಸಿ ವಿಶ್ವಕಪ್ ಟೂರ್ನಿಯ ನಂತರ ಟೀಂ ಇಂಡಿಯಾ ಸಾಧನೆ ಬಗ್ಗೆ ಎಲ್ಲೆಡೆ ಚರ್ಚೆ ನಡೆದಿದೆ. ಧೋನಿ ಹುಡುಗರ ಸಾಧನೆ ಕಡಿಮೆ ಏನಿಲ್ಲ ಎಂದು ಅನೇಕರು ಹೇಳಿದರೂ ಐಸಿಸಿ ವಿಶ್ವಕಪ್ ಶ್ರೇಷ್ಠ ತಂಡದಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಸ್ಥಾನವೇ ಸಿಕ್ಕಿಲ್ಲ. ಅದರೆ, ಐಸಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಧವನ್ ಉತ್ತಮ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದರೆ, ಶಿಖರ್ ಧವನ್ ಅವರು 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಉಳಿದಂತೆ ಟಾಪ್ 10 ಪಟ್ಟಿಯಲ್ಲಿ ನಾಯಕ ಎಂಎಸ್ ಧೋನಿ 8ನೇ ಸ್ಥಾನ ಪಡೆದಿದ್ದಾರೆ. [ವಿಶ್ವಕಪ್ 2015 ಸಮರ ಸಂಭ್ರಮ]

ರೋಹಿತ್ ಶರ್ಮ ಅವರು ಕಳೆದ ಬಾರಿಗಿಂತ ಏಳು ಸ್ಥಾನ ಮೇಲಕ್ಕೇರಿ 12ನೇ ಸ್ಥಾನಕ್ಕೆ ಬಂದಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಪಾಕಿಸ್ತಾನದ ಮಿಸ್ಬಾ ಉಲ್ ಹಕ್ ಕೂಡಾ ಜಂಟಿಯಾಗಿ 12ನೇ ಸ್ಥಾನ ಪಡೆದುಕೊಂಡಿದ್ದಾರೆ. [ಆಸೀಸ್ ಗೆ 25 ಕೋಟಿ ರು, ಭಾರತಕ್ಕೆಷ್ಟು?]

ಮಾ.31 ರಂತೆ ಐಸಿಸಿ ಶ್ರೇಯಾಂಕ ಪಟ್ಟಿ
1. ಎಬಿ ಡಿ ವಿಲೆಯರ್ಸ್ (ದಕ್ಷಿಣ ಆಫ್ರಿಕಾ)
2. ಕುಮಾರ್ ಸಂಗಕ್ಕಾರ (ಶ್ರೀಲಂಕಾ)
3. ಹಶೀಂ ಆಮ್ಲಾ (ದಕ್ಷಿಣ ಆಫ್ರಿಕಾ)
4. ವಿರಾಟ್ ಕೊಹ್ಲಿ (ಭಾರತ)
5. ತಿಲಕರತ್ನೆ ದಿಲ್ಶನ್ (ಶ್ರೀಲಂಕಾ)
6. ಶಿಖರ್ ಧವನ್ (ಭಾರತ)
7. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)
8. ಎಂಎಸ್ ಧೋನಿ (ಭಾರತ)
9. ಗ್ಲೆನ್ ಮ್ಯಾಕ್ಸ್ ವೆಲ್ (ಆಸ್ಟ್ರೇಲಿಯಾ)
10. ಜಾರ್ಜ್ ಬೈಲಿ (ಆಸ್ಟ್ರೇಲಿಯಾ)

Post WC 2015, Kohli steady at 4th, Dhawan rises to 6th in ICC rankings

ಬೌಲರ್ಸ್: [ವಿಶ್ವಕಪ್ 2015 ಶ್ರೇಷ್ಠ ತಂಡದಲ್ಲಿ ಭಾರತೀಯರೇ ಇಲ್ಲ]
1. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
2. ಇಮ್ರಾನ್ ತಾಹೀರ್ (ದಕ್ಷಿಣ ಆಫ್ರಿಕಾ)
3. ಸಯೀದ್ ಅಜ್ಮಲ್ (ಪಾಕಿಸ್ತಾನ)
4. ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ)
5. ಸುನಿಲ್ ನರೇನ್ (ವೆಸ್ಟ್ ಇಂಡೀಸ್)
6. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್)
7. ಮಿಚೆಲ್ ಜಾನ್ಸನ್ (ಆಸ್ಟ್ರೇಲಿಯಾ)
8. ಜೇಮ್ಸ್ ಅಂಡರ್ಸನ್ (ಇಂಗ್ಲೆಂಡ್)
9. ಮಾರ್ನೆ ಮಾರ್ಕೆಲ್ (ದಕ್ಷಿಣ ಆಫ್ರಿಕಾ)
10. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ)

ವಿಶ್ವಕಪ್ 2015 ಟೂರ್ನಿ ನಂತರ ಡೇನಿಯಲ್ ವೆಟ್ಟೋರಿ, ಶಹೀದ್ ಅಫ್ರಿದಿ, ಮೈಕಲ್ ಕ್ಲಾರ್ಕ್, ಬ್ರೆಂಡನ್ ಟೇಲರ್, ಮಿಸ್ಬಾ ಉಲ್ ಹಕ್, ಕುಮಾರ್ ಸಂಗಕ್ಕಾರ ಹಾಗೂ ಮಹೇಲ ಜಯವರ್ದನೆ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈ ಪೈಕಿ ಸಂಗಕ್ಕಾರ ಟಾಪ್ 2ನಲ್ಲಿದ್ದರೆ, ಜಯವರ್ದನೆ 34,ಟೇಲರ್ 20, ಕ್ಲಾರ್ಕ್ 29, ಮಿಸ್ಬಾ 12 ಸ್ಥಾನದಲ್ಲಿ ವೃತ್ತಿ ಮುಗಿಸಿದ್ದಾರೆ. [ಸಚಿನ್ ಕಂಡ ಕನಸು ಈಡೇರಿಸಿದ ಕೊಹ್ಲಿ]

ರಿಲೆಯನ್ಸ್ ಐಸಿಸಿ ಪ್ಲೇಯರ್ ಶ್ರೇಯಾಂಕ ಪಟ್ಟಿಯ ಆಲ್ ರೌಂಡರ್ ಗಳ ಪೈಕಿ ತಿಲಕರತ್ನೆ ದಿಲ್ಶನ್ ಟಾಪ್ ಸ್ಥಾನದಲ್ಲಿದ್ದರೆ, ಶಕೀಬ್ ಅಲ್ ಹಸನ್ ಜೆಪಿ ಡುಮಿನಿ, ಶಹೀದ್ ಅಫ್ರಿದಿ ಸ್ಥಾನ ಪಡೆದುಕೊಂಡಿದ್ದಾರೆ. (ಪಿಟಿಐ)

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+