For Quick Alerts
ALLOW NOTIFICATIONS  
For Daily Alerts
 

ಪ್ರೊ ಕಬಡ್ಡಿ 2021: ಪುಣೇರಿ ಪಲ್ಟರ್ ವಿರುದ್ಧ ತಮಿಳ್ ತಲೈವಾಸ್‌ಗೆ ಗೆಲುವು, ಟೂರ್ನಿಯಲ್ಲಿ ಮೊದಲ ಜಯ

Tamil Thalaivas

ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪುಣೇರಿ ಪಲ್ಟನ್ ವಿರುದ್ಧ ತಮಿಳ್ ತಲೈವಾಸ್ 36-26 ಅಂತರದ ಗೆಲುವು ಸಾಧಿಸಿದೆ. ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಅಜಿಂಕ್ಯ ಪವಾರ್ 11 ರೇಡ್‌ಗಳಲ್ಲಿ 11 ಪಾಯಿಂಟ್ಸ್‌ ಕಲೆಹಾಕುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಅಜಿಂಕ್ಯಗೆ ಮಂಜಿತ್ ಉತ್ತಮ ಸಾಥ್ ನೀಡಿದ್ದು 8 ಪಾಯಿಂಟ್ಸ್ ತಂಡಕ್ಕೆ ಸೇರಿಸಿದ್ರು.

36 ಪಾಯಿಂಟ್ಸ್ ಕಲೆಹಾಕಿದ ತಮಿಳು ತಲೈವಾಸ್‌ಗೆ ಈ ಸೀಸನ್‌ನ ಮೊದಲ ಗೆಲುವು ಇದಾಗಿದೆ. ಎದುರಾಳಿ ಪುಣೇರಿ ಪಲ್ಟನ್ ಪರ ಪಂಕಜ್ ಮೊಹಿತೆ 8, ಅಭಿಷೇಕ್ ನಾದರಾಜನ್ 4, ಅಸ್ಲಾಂ ಇನಾಮ್‌ದಾರ್ 4, ವಿಶಾಲ್ ಭಾರಧ್ವಜ್ 4 ಪಾಯಿಂಟ್ಸ್‌ ಕಲೆಹಾಕಿದ್ದಾರೆ.

ಮತ್ತೊಂದು ಪಂದ್ಯದಲ್ಲಿ, ಪಾಟ್ನ ಪರ ಮೋನು ಗೋಯತ್ ರೇಡಿಂಗ್‌ನ ಅತ್ಯಂತ ರೋಮಾಂಚನಕಾರಿ ಪ್ರದರ್ಶನ ನೀಡಿದ್ರು, ಒಂದೇ ದಾಳಿಯಲ್ಲಿ ಏಳು ಅಂಕಗಳನ್ನು ಗಳಿಸಿದರು. ಒಟ್ಟು 15 ಪಾಯಿಂಟ್ಸ್ ಕಲೆಹಾಕಿದ ಪಾಟ್ನ ಪೈರೇಟ್ಸ್‌ ಬೆಂಗಾಲ್ ವಾರಿಯರ್ಸ್ ವಿರುದ್ಧ 43-29 ಅಂತರದಲ್ಲಿ ಗೆಲುವು ಸಾಧಿಸಿತು.

ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ 12 ಪಾಯಿಂಟ್ಸ್ ಕಲೆಹಾಕಿ ಏಕಾಂಗಿ ಹೋರಾಟ ನಡೆಸಿದ್ರು. ಅಮಿತ್ ಐದು ಟ್ಯಾಕಲ್ ಪಾಯಿಂಟ್ಸ್‌ನೊಂದಿಗೆ ತಂಡದ ಪಾಯಿಂಟ್ಸ್ ಹೆಚ್ಚಿಸಿದ್ರು.

ನಮ್ಮ ತಂಡದೊಳಗೇ ಶತೃಗಳಿರೋದ್ರಿಂದ ಭಯವಾಗುತ್ತೆ ಎಂದ KL ರಾಹುಲ್ | oneindia Kannada

ಈ ಗೆಲುವಿನಿಂದ ಪಾಟ್ನಾ ಪೈರೇಟ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದರೆ, ಬೆಂಗಾಲ್ ವಾರಿಯರ್ಸ್ ಈಗ ಎಂಟನೇ ಸ್ಥಾನದಲ್ಲಿದೆ.

Story first published: Friday, December 31, 2021, 23:28 [IST]
Other articles published on Dec 31, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+