For Quick Alerts
ALLOW NOTIFICATIONS  
For Daily Alerts
 

ಬೆಂಗಳೂರು ಬುಲ್ಸ್‌ ಪ್ರೊಮೊ ವೀಡಿಯೋ ವೈರಲ್: ಸುದೀಪ್ ಡೈಲಾಗ್‌ಗೆ ಚಾರ್ಜ್ ಆದ ಬುಲ್ಸ್‌

Bengaluru bulls

ವಿವೊ ಪ್ರೊ ಕಬ್ಬಡ್ಡಿ ಲೀಗ್ ಸೀಸನ್ 8ಕ್ಕೆ ಚಾಲನೆಗೆ ದಿನಗಣನೆ ಆರಂಭಗೊಂಡಿದೆ. ಡಿಸೆಂಬರ್ 22ರಂದು ಪ್ರಾರಂಭಗೊಳ್ಳಲಿರುವ ಆವೃತ್ತಿಗೆ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಇದೇ ವೇಳೆಯಲ್ಲಿ ಬೆಂಗಳೂರು ಬುಲ್ಸ್ ಕೂಡ ಸಖತ್ ತಯಾರಿ ನಡೆಸಿದ್ದು, ಹೊಸ ಪ್ರೊಮೊ ರಿಲೀಸ್ ಮಾಡಿದೆ.

ಬೆಂಗಳೂರು ಬುಲ್ಸ್‌ ಹೊಸ ಪ್ರೊಮೊದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ತಮ್ಮ ಅದ್ಭುತ ಡೈಲಾಗ್ ಮೂಲಕ ಬೆಂಗಳೂರು ಬುಲ್ಸ್‌ ತಂಡವನ್ನ ಪ್ರೇರಿಪಿಸಿರುವ ಪ್ರೊಮೊ ರಿಲೀಸ್ ಆಗಿದೆ. ಈ ಕುರಿತಾದ ವೀಡಿಯೋವನ್ನ ಕಿಚ್ಚ ಸುದೀಪ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನ ಅಕೌಂಟ್‌ನಿಂದ ಪೋಸ್ಟ್ ಮಾಡಿದ್ದು, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಆಗಿದೆ.

ಪ್ರೋಮೊದಲ್ಲಿ ಸುದೀಪ್‌ರ ದೇಶೀಯ ಮಾದರಿಯ ಡ್ರೆಸ್ ಜೊತೆಗೆ ಖಡಕ್ ಡೈಲಾಗ್‌ಗಳು ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ. ಬೆಂಗಳೂರು ಬುಲ್ಸ್ ತಂಡವು ಅಖಾಡಕ್ಕೆ ಇಳಿಯಲು ಸನ್ನದ್ದರಾಗಿದ್ದು, ಪ್ರೊಮೊ ಬುಲ್ಸ್ ಅಭಿಮಾನಿಗಳನ್ನ ಹುರಿದುಂಬಿಸಿದೆ.

ವಿವೋ ಪ್ರೊ ಕಬಡ್ಡಿ ಲೀಗ್, ಡಿಸೆಂಬರ್ 22, 2021 ರಿಂದ ಸಂಜೆ 7:30 ಕ್ಕೆ ಪ್ರಾರಂಭವಾಗಲಿದ್ದು, ಈಗಾಗಲೇ ಮೊದಲಾರ್ಧದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವೀಕ್ಷಕರು ಇಲ್ಲದೆ ಬೆಂಗಳೂರು ವೈಟ್‌ಫೀಲ್ಡ್ ಹೋಟೆಲ್ ಶೆರಟಾನ್ ಗ್ರ್ಯಾಂಡ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ಇಡೀ ಸೀಸನ್‌ ನಡೆಸಲಾಗುವುದು.

ಟೂರ್ನಮೆಂಟ್‌ನ ಆರಂಭಿಕ ಪಂದ್ಯದಲ್ಲಿ ಯು ಮುಂಬಾ ತಂಡವು ಬೆಂಗಳೂರು ಬುಲ್ಸ್ ಅನ್ನು ಎದುರಿಸುವುದರೊಂದಿಗೆ ಪ್ರೊ ಕಬ್ಬಡ್ಡಿ ಲೀಗ್ ಸೀಸನ್ 8 ಪ್ರಾರಂಭವಾಗಲಿದೆ. ಲೀಗ್‌ನ 'ಸದರ್ನ್ ಡರ್ಬಿ' ನಂತರ ಎರಡನೇ ಪಂದ್ಯದಲ್ಲಿ ತಮಿಳು ತಲೈವಾಸ್‌ನೊಂದಿಗೆ ತೆಲುಗು ಟೈಟಾನ್ಸ್ ಮುಖಾಮುಖಿಯಾಗಲಿದೆ. ಆರಂಭಿಕ ದಿನದ ಕೊನೆಯ ಪಂದ್ಯದಲ್ಲಿ ಯುಪಿ ಯೋಧಾ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ನೊಂದಿಗೆ ಸೆಣಸಾಟ ನಡೆಸಲಿದೆ.

Story first published: Monday, December 13, 2021, 15:23 [IST]
Other articles published on Dec 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+