Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫವಾದ್ ಅಹ್ಮದ್‌ಗೆ ಕೊರೊನಾ, ಪಿಎಸ್‌ಎಲ್ ಪಂದ್ಯ ಮುಂದೂಡಿಕೆ

PSL 2021: Match postponed after Fawad Ahmed tests positive for coronavirus

ಕರಾಚಿ: ಪಾಕಿಸ್ತಾನ್ ಸೂಪರ್ ಲೀಗ್‌ (ಪಿಎಸ್‌ಎಲ್)ನಲ್ಲಿ ಆಡುತ್ತಿದ್ದ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಫವಾದ್ ಅಹ್ಮದ್‌ಗೆ ಕೊರೊನಾ ವೈರಸ್ ಸೋಂಕಿರುವುದು ಪತ್ತೆಯಾಗಿದೆ. ಹೀಗಾಗಿ ಸೋಮವಾರ (ಮಾರ್ಚ್ 1) ನಡೆಯಬೇಕಿದ್ದ ಪಿಎಸ್‌ಎಲ್ ಪಂದ್ಯವೊಂದು ಮುಂದೂಡಲ್ಪಟ್ಟಿದೆ.

ಸೋಮವಾರ ಪಿಎಸ್‌ಎಲ್ 12ನೇ ಪಂದ್ಯದಲ್ಲಿ ಇಸ್ಲಮಾಬಾದ್‌ ಯುನೈಟೆಡ್ ಮತ್ತು ಕ್ವೆಟ್ಟ ಗ್ಲಾಡಿಯೇಟರ್ಸ್ ಕಾದಾಡಬೇಕಿತ್ತು. ಆದರೆ ಇಸ್ಲಮಾಬಾದ್ ಯುನೈಟೆಡ್‌ನ ಫವಾದ್ ಅಹ್ಮದ್‌ಗೆ ಕೋವಿಡ್-19 ಸೋಂಕಿರುವುದು ಪತ್ತೆಯಾಗಿದ್ದರಿಂದ ನಡೆಯಬೇಕಿದ್ದ ಪಂದ್ಯವನ್ನು ಮುಂದೂಡಲಾಯ್ತು.

ಪಂದ್ಯ ನಡೆಯಲು ಇನ್ನು 2 ಗಂಟೆ ಇರುವಾಗ ಪಂದ್ಯ ಮುಂದೂಡುತ್ತಿರುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಘೋಷಿಸಿದೆ. ಹೀಗಾಗಿ ಸೋಮವಾರದ ಪಂದ್ಯವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಅಹ್ಮದ್ ಅವರನ್ನು ಐಸೊಲೇಶನ್‌ನಲ್ಲಿ ಇರಿಸಲಾಗಿದೆ.

'ನಮ್ಮ ಆಟಗಾರರಲ್ಲೊಬ್ಬರಾದ ಫವಾದ್ ಅಹ್ಮದ್‌ಗೆ ಕೊರೊನಾವೈರಸ್ ಪಾಸಿಟಿವ್ ಇರುವುದು ಪರೀಕ್ಷೆಯ ವೇಳೆ ಪತ್ತೆಯಾಗಿದೆ. ಹೀಗಾಗಿ ಎರಡು ದಿನಗಳ ಮುಂಚೆಯೇ ಅವರನ್ನು ಪ್ರತ್ಯೇಕವಾಗಿಸಲಾಗಿದೆ,' ಎಂದು ಇಸ್ಲಮಾಬಾದ್ ಯುನೈಟೆಡ್ ಮಾಹಿತಿ ನೀಡಿದೆ.

Story first published: Monday, March 1, 2021, 21:11 [IST]
Other articles published on Mar 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+