Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನ್ ಸೂಪರ್ ಲೀಗ್ 2021 ಪುನರಾರಂಭದ ದಿನಾಂಕ ನಿಗದಿ

PSL 2021: Second leg to kick off on June 9, final to be staged on June 24

6ನೇ ಆವೃತ್ತಿಯ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿ ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿತ್ತು. ಐಪಿಎಲ್ ಮಾದರಿಯಲ್ಲಿಯೇ ಪಾಕಿಸ್ತಾನ್ ಸೂಪರ್ ಲೀಗ್ ಬಯೋ ಬಬಲ್ ಒಳಗಡೆ ಕೊರೊನಾ ಪ್ರವೇಶಿಸಿ ವಿವಿಧ ತಂಡಗಳ 6 ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಿಎಸ್ಎಲ್ ಟೂರ್ನಿಯನ್ನು ಮುಂದೂಡಲಾಗಿತ್ತು.

ಐಪಿಎಲ್ 2022: ಹೊಸ ತಂಡಗಳಾಗಿ ಸೇರ್ಪಡೆಯಾಗಬಹುದಾದ 5 ನಗರಗಳು

ಹೀಗೆ ಮುಂದೂಡಲ್ಪಟ್ಟ ಪಿಎಸ್ಎಲ್ ಟೂರ್ನಿಯನ್ನು ಯುಎಇಯಲ್ಲಿ ಪುನರಾರಂಭಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೆಲದಿನಗಳಿಂದ ಪ್ರಯತ್ನಿಸುತ್ತಿತ್ತು. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಿದ್ದು ವಿವಿಧ ತಂಡಗಳ ಕೆಲ ಆಟಗಾರರು ಹಾಗೂ ಪಿಎಸ್ಎಲ್ ಅಧಿಕಾರಿ ವರ್ಗ ಈಗಾಗಲೇ ಅಬುಧಾಬಿ ತಲುಪಿದ್ದಾರೆ.

ನ್ಯೂಜಿಲೆಂಡ್‌ಗೆ ಅನುಕೂಲ ಹೆಚ್ಚು ಎನ್ನುವವರು ಯಾವುದೇ ಕಾರಣಕ್ಕೂ ವಿಮಾನ ಹತ್ತಬೇಡಿ ಎಂದಿದ್ದ ವಿರಾಟ್ ಕೊಹ್ಲಿ!

ಪ್ರಸ್ತುತ ಪಿಎಸ್ಎಲ್ ಟೂರ್ನಿಯ 20 ಪಂದ್ಯಗಳು ಬಾಕಿ ಉಳಿದಿದ್ದು, ಈ ಉಳಿದ ಪಂದ್ಯಗಳ ಪೈಕಿ ಮೊದಲನೇ ಪಂದ್ಯ ಜೂನ್ 9ರಂದು ಅಬುಧಾಬಿಯಲ್ಲಿ ನಡೆಯಲಿದೆ. ಹಾಗೂ ಮುಂದುವರಿಯಲಿರುವ ಪಿಎಸ್ ಎಲ್ ಟೂರ್ನಿಯ ಫೈನಲ್ ಪಂದ್ಯ ಜೂನ್ 24ರಂದು ನಡೆಯುವುದು ಖಚಿತ ಎನ್ನಲಾಗುತ್ತಿದೆ.

Story first published: Thursday, June 3, 2021, 19:49 [IST]
Other articles published on Jun 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+