ರೋಹಿತ್ ಶರ್ಮಾ, ಸ್ಟೀವ್ ಸ್ಮಿತ್ ಹೆಸರಲ್ಲಿದ್ದ, ಟಿ20 ವಿಶ್ವ ದಾಖಲೆ ಮುರಿದ ಶಾಹಿನ್ ಅಫ್ರಿದಿ

ಪಾಕಿಸ್ತಾನದ ಯುವ ವೇಗದ ಬೌಲರ್ ಶಾಹಿನ್ ಅಫ್ರಿದಿ ವಿಶ್ವ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ಉಪನಾಯಕ ಸ್ಟೀವನ್ ಸ್ಮಿತ್ ಹೆಸರಲ್ಲಿದ್ದ ದಾಖಲೆ ಮುರಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ 2022ರ ಫೈನಲ್‌ನಲ್ಲಿ ಮುಲ್ತಾನ್ ಸುಲ್ತಾನ್ ವಿರುದ್ಧ ಲಾಹೋರ್ ಖಲಂದರ್ ಗೆಲ್ಲುವ ಮೂಲಕ ಚೊಚ್ಚಲ ಟ್ರೋಫಿ ಗೆದ್ದು ಬೀಗಿತು. ಪಿಎಸ್‌ಎಲ್ ಪ್ರಸಕ್ತ ಸೀಸನ್‌ನಲ್ಲಿ ನಾಯಕತ್ವದ ಬದಲಾವಣೆಯ ಬಳಿಕ ಲಾಹೋರ್ ಖಲಂದರ್ ಚಮತ್ಕಾರವನ್ನೇ ಮಾಡಿದೆ. ಶಾಹೀನ್ ಅಫ್ರಿದಿ ನಾಯಕತ್ವದ ತಂಡ ಮುಲ್ತಾನ್ ಸುಲ್ತಾನ್ ವಿರುದ್ದ 42 ರನ್‌ಗಳ ವಿಜಯ ಸಾಧಿಸುವ ಮೂಲಕ ಪಿಎಸ್‌ಎಲ್ ಟ್ರೋಫಿಯನ್ನ ಎತ್ತಿ ಹಿಡಿದಿದೆ.
181 ರನ್ ಟಾರ್ಗೆಟ್ ಬೆನ್ನತ್ತಿದ ಮೊಹಮ್ಮದ್ ರಿಜ್ವಾನ್ ನಾಯಕತ್ವನ್ ಮುಲ್ತಾನ್ ಸುಲ್ತಾನ್ ತಂಡ ಶಾಹಿನ್ ಅಫ್ರಿದಿ ಮತ್ತು ಹಫೀಜ್ ಬೌಲಿಂಗ್ ದಾಳಿಗೆ ತತ್ತರಿಸಿ 138 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಲಾಹೋರ್ ಖಲಂದರ್ ಮೊದಲ ಕಪ್ ಗೆದ್ದು ಬೀಗಿದೆ.
ಶಾಹಿನ್ ಅಫ್ರಿದಿ ತಮ್ಮ 21ನೇ ವಯಸ್ಸಿನಲ್ಲಿ ವಿಶ್ವದ ಪ್ರಮುಖ ಟಿ20 ಲೀಗ್ ಗೆದ್ದ ಅತ್ಯಂತ ಕಿರಿಯ ನಾಯಕ ಎಂಬ ಹೆಸರು ಮಾಡಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಮತ್ತು ಸ್ಟೀವನ್ ಸ್ಮಿತ್ ದಾಖಲೆ ಅಳಿಸಿದ್ದಾರೆ. ರೋಹಿತ್ ಶರ್ಮಾ ತನ್ನ 26ನೇ ವಯಸ್ಸಿನಲ್ಲಿ 2013ನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರೋಫಿ ಗೆದ್ದು ಕೊಟ್ಟಿದ್ದರು. ಇನ್ನು ಆಸಿಸ್ ಕ್ರಿಕೆಟಿಗ ಸ್ಟೀವನ್ ಸ್ಮಿತ್ ತನ್ 22ನೇ ವಯಸ್ಸಿನಲ್ಲೇ 2012ರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ ನಾಯಕತ್ವ ವಹಿಸಿಕೊಂಡು ತಂಡವನ್ನ ಚಾಂಪಿಯನ್ ಆಗಿ ಮಾಡಿದ್ದರು.
ಆದ್ರೀಗ ಶಾಹಿದ್ ಅಫ್ರಿದಿ ಈ ಇಬ್ಬರು ಆಟಗಾರರ ದಾಖಲೆ ಮುರಿದು ತನ್ನದೇ ಹೆಸರನ್ನ ರಾರಾಜಿಸುವಂತೆ ಹೊಸ ದಾಖಲೆ ಮಾಡಿದ್ದಾರೆ.
"ಇದೊಂದು ದೊಡ್ಡ ಸಾಧನೆ. ನಾವು 6 ವರ್ಷಗಳಿಂದ ಕಾಯುತ್ತಿದ್ದೇವು. ಕನಸು ನನಸಾಗಿದ್ದು, ನಾನು ಲಾಹೋರ್ ಪ್ರೇಕ್ಷಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಬಹಳ ಸಂಖ್ಯೆಯಲ್ಲಿ ಬಂದು ನಮಗೆ ಬೆಂಬಲ ನೀಡಿದ್ದಾರೆ. ಬಹಳಷ್ಟು ಜನರು ನನ್ನನ್ನು ಬೆಂಬಲಿಸಿದ್ದು, ಹಫೀಜ್ ಬಹಳಷ್ಟು ಒತ್ತಡದ ಕ್ಷಣಗಳಲ್ಲಿ ನನಗೆ ಮಾರ್ಗದರ್ಶನ ನೀಡಿದರು. ಹೀಗಾಗಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಪಂದ್ಯಾವಳಿಯುದ್ದಕ್ಕೂ ನಾವು ತಂಡವಾಗಿ ತೋರಿದ ಹೋರಾಟವು ನಿಜವಾಗಿಯೂ ಅದ್ಭುತವಾಗಿದೆ ಮತ್ತು ಕೊನೆಯ ಎಸೆತದವರೆಗೂ ಹೋರಾಡುವ ಮನೋಭಾವವನ್ನು ನಾವು ಹೊಂದಿದ್ದೇವೆ'' ಎಂದು ಅಫ್ರಿದಿ ಪಂದ್ಯದ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಹೇಳಿದರು.
ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಾಹೋರ್ ಖಲಂದರ್ 5 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತು. ತಂಡದ ಪರ ಟಾಪ್ ಆರ್ಡರ್ ವೈಫಲ್ಯದ ನಡುವೆ ಮೊಹಮ್ಮದ್ ಹಫೀಜ್ 69, ಹ್ಯಾರಿ ಬ್ರೂಕ್ 41, ವೈಸ್ ಸ್ಫೋಟಕ 28 ರನ್ ಸಿಡಿಸಿ ತಂಡದ ಸ್ಕೋರ್ ಅನ್ನು 180ಕ್ಕೆ ಮುಟ್ಟಿಸಿದ್ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications