
ದಾಖಲೆಯ ಶತಕ ಗಳಿಸಿದ ಉಸ್ಮಾನ್ ಖಾನ್
36 ಎಸೆತಗಳಲ್ಲಿ ಶತಕ ಗಳಿಸಿದ ಉಸ್ಮಾನ್ ಖಾನ್ ನಂತರವೂ ಅಬ್ಬರಿಸಿದರು. 43 ಎಸೆತಗಳಲ್ಲಿ 12 ಬೌಂಡರಿ, 6 ಭರ್ಜರಿ ಸಿಕ್ಸರ್ ಸಹಿತ 120 ರನ್ ಗಳಿಸಿ ಔಟಾದರು. ಉಸ್ಮಾನ್ ಖಾನ್‌ರ ಅಮೋಘ ಶತಕದ ನೆರವಿನಿಂದ ಮುಲ್ತಾನ್ ಸುಲ್ತಾನ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 262 ರನ್ ಕಲೆಹಾಕಿತು. ಕೈಸ್ ಅಹಮದ್ ಕೇವಲ 4 ಓವರ್ ಗಳಲ್ಲಿ 77 ರನ್ ಬಿಟ್ಟುಕೊಡುವ ಮೂಲಕ ಅತಿ ಹೆಚ್ಚು ರನ್ ಸೋರಿಕೆ ಮಾಡಿದ ಬೌಲರ್ ಎನಿಸಿಕೊಂಡರು.

9 ರನ್‌ಗಳ ರೋಚಕ ಸೋಲು ಕಂಡ ಕ್ವೆಟ್ಟಾ
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ಆರಂಭದಲ್ಲೇ ಪ್ರಮುಖ ಬ್ಯಾಟರ್ ಜೇಸನ್ ರಾಯ್ ವಿಕೆಟ್ ಕಳೆದುಕೊಂಡಿತು. ರಾಯ್ ಕೇವಲ 6 ರನ್ ಗಳಿಸಿ ಔಟಾದರು. ಮಾರ್ಟಿನ್ ಗಪ್ಟಿಲ್ ಕೇವಲ 14 ಎಸೆತಗಳಲ್ಲಿ 2 ಬೌಂಡರಿ 4 ಭರ್ಜರಿ ಸಿಕ್ಸರ್ ಸಹಿತ 37 ರನ್ ಗಳಿಸಿದರು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.
ಒಮೈರ್ ಯೂಸುಫ್ 36 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರು. ಇಫ್ತಿಕರ್ ಅಹ್ಮದ್ 31 ಎಸೆತಗಳಲ್ಲಿ 53 ರನ್ ಗಳಿಸಿದರು, ಉಮರ್ ಅಕ್ಮಲ್ 10 ಎಸೆತಗಳಲ್ಲಿ 28 ರನ್ ಗಳಿಸಿದರು. ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 253 ರನ್ ಗಳಿಸಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ 9 ರನ್‌ಗಳಿಂದ ಸೋಲುವ ಮೂಲಕ ಪಿಎಸ್‌ಎಲ್‌ನಲ್ಲಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.

ಕ್ರಿಸ್ ಗೇಲ್ ದಾಖಲೆ ಮುರಿದ ಉಸ್ಮಾನ್ ಖಾನ್
ಎರಡೂ ಇನ್ನಿಂಗ್ಸ್‌ಗಳಿಂದ ಒಟ್ಟು 515 ರನ್ ದಾಖಲಾಗುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಟಿ20 ಪಂದ್ಯ ಎನಿಸಿಕೊಂಡಿದೆ. ಅಕ್ಟೋಬರ್ 2022 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಸಿಎಸ್‌ಎ ಟಿ20 ಚಾಲೆಂಜ್ ಪಂದ್ಯದಲ್ಲಿ ಟೈಟಾನ್ಸ್ ಮತ್ತು ನೈಟ್ಸ್ ನಡುವಿನ ಪಂದ್ಯದಲ್ಲಿ ಒಟ್ಟು 501 ರನ್ ಬಂದಿದ್ದು ಈವರೆಗಿನ ದಾಖಲೆಯಾಗಿತ್ತು.
ಮೊದಲ 10 ಓವರ್ ಗಳಲ್ಲಿ ಬ್ಯಾಟರ್ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದರು. 10ನೇ ಓವರ್ ಅಂತ್ಯಕ್ಕೆ ಉಸ್ಮಾನ್ ಖಾನ್ 42 ಎಸೆತಗಳಲ್ಲಿ 120 ರನ್ ಗಳಿಸಿದರು. ಈ ಮೂಲಕ ಕ್ರಿಸ್ ಗೇಲ್ ದಾಖಲೆಯನ್ನು ಮುರಿದರು. 2013 ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಆರ್ ಸಿಬಿ ಬ್ಯಾಟರ್ ಗೇಲ್ 10 ಓವರ್ ಗಳಾಗುಷ್ಟರಲ್ಲಿ 105 ರನ್ ಗಳಿಸಿದ್ದರು.


Click it and Unblock the Notifications












