ಧೋನಿ ಪಡೆಗೆ ಮತ್ತೊಮ್ಮೆ ಆಘಾತ, ಡುಪ್ಲೆಸಿಸ್ ಔಟ್
ಪುಣೆ, ಏಪ್ರಿಲ್ 28 : ರೈಸಿಂಗ್ ಪುಣೆ ಸೂಪರ್ ಜೈಂಟ್ (ಆರ್ ಪಿಎಸ್) ತಂಡದ ಸಮಸ್ಯೆಗಳು ಮುಂದುವರೆದಿದೆ. ಧೋನಿ ಪಡೆಯಿಂದ ಕೆವಿನ್ ಪೀಟರ್ಸನ್ ಹೊರಕ್ಕೆ ಹೋದ ಬಳಿಕ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಡುಪ್ಲೆಸಿಸ್ ಅವರು ಐಪಿಎಲ್ 9ರಿಂದ ಔಟ್ ಆಗಿದ್ದಾರೆ.
ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ
ಕೆವಿನ್ ಪೀಟರ್ಸನ್ ಅವರ ಬದಲಿಗೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಆಯ್ಕೆಯಾಗಿರುವ ಸುದ್ದಿ ಬಂದಿದೆ. ಆದರೆ, ಇದರ ಬೆನ್ನಲ್ಲೇ 31ವರ್ಷ ವಯಸ್ಸಿನ ಫಾಫ್ ಡುಪ್ಲೆಸಿಸ್ ಅವರು ಗಾಯಗೊಂಡು ಟೂರ್ನಿಯಿಂದ ಹೊರಕ್ಕೆ ನಡೆದಿದ್ದಾರೆ. [ಪೀಟರ್ಸನ್ ಬದಲಿಗೆ ಉಸ್ಮಾನ್ ಸೇರ್ಪಡೆ]

ಬೆರಳಿಗೆ ಗಾಯ ಮಾಡಿಕೊಂಡಿರುವ ಡುಪ್ಲೆಸಿಸ್ ಅವರು ಸುಮಾರು 6 ವಾರಗಳ ಕಾಲ ಕ್ರಿಕೆಟ್ ಮೈದಾನದಿಂದ ಹೊರಗುಳಿಯಬೇಕಾಗುತ್ತದೆ. ಈ ಬಗ್ಗೆ ಡುಪ್ಲೆಸಿಸ್ ಅವರು ಏಪ್ರಿಲ್ 28ರಂದು ಟ್ವೀಟ್ ಮಾಡಿದ್ದಾರೆ.[ಸೋಲಿನಲ್ಲೂ ದಾಖಲೆ ಬರೆದ ಎಂಎಸ್ ಧೋನಿ]
ಬೆರಳಿಗೆ ಗಾಯ ಮಾಡಿಕೊಂಡಿರುವ ಡು ಪ್ಲೇಸಿಸ್ ಭಾರತಕ್ಕೆ ಧನ್ಯವಾದಗಳು ಅಂತ ಟ್ವೀಟ್ ಮಾಡುವ ಮೂಲಕ ಐಪಿಲ್ ಸೀಸನ್ 9 ಗೆ ಹಾಗೂ ಪುಣೆ ತಂಡಕ್ಕೆ ಬೈಬೈ ಹೇಳಿದ್ದಾರೆ. ಇದರಿಂದ ಪುಣೆ ತಂಡಕ್ಕೆ ಹೊಡೆತದ ಮೇಲೆ ಹೊಡೆತ ಬಿದ್ದಿದ್ದು ಏನು ಮಾಡಬೇಕು ಎಂದು ತಿಳಿಯದೆ ದೋನಿ ಒತ್ತಡಕ್ಕೆ ಸಿಲುಕುವಂತೆ ಮಾಡಿದೆ.
ಐಪಿಎಲ್ 2016ರಲ್ಲಿ ಪುಣೆ ಪರ ಆಡುತ್ತಿರುವ ಡುಪ್ಲೆಸಿಸ್ ಅವರು 6 ಪಂದ್ಯಗಳಿಂದ 2 ಅರ್ಧಶತಕ ಸಹಿತ 206 ರನ್ ಗಳಿಸಿದ್ದಾರೆ. 69ರನ್ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಏಪ್ರಿಲ್ 29ರಂದು ಗುಜರಾತ್ ಲಯನ್ಸ್ ವಿರುದ್ಧ ಪುಣೆ ಸೆಣಸಾಡಲಿದೆ. (ಒನ್ ಇಂಡಿಯಾ ಸುದ್ದಿ)
Story first published: Wednesday, January 3, 2018, 10:03 [IST]
Other articles published on Jan 3, 2018
Read in English: Faf du Plessis ruled out of IPL 2016
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications