For Quick Alerts
ALLOW NOTIFICATIONS  
For Daily Alerts
 

ಹೆಣ್ಣು ಮಗುವಿನ ತಂದೆಯಾದ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್

Quinton De Kock

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿ ಕಾಕ್ ತಂದೆಯಾದ ಸಂಭ್ರಮದಲ್ಲಿದ್ದು, ಅವರ ಪತ್ನಿ ಸಶಾ ಗುರುವಾರ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. 29 ವರ್ಷ ವಯಸ್ಸಿನ ಡಿಕಾಕ್‌ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಈ ಖುಷಿ ಸುದ್ದಿಯನ್ನು ಪೋಸ್ಟ್‌ ಮಾಡಿದ್ದು, ತಂದೆಯಾಗಿರುವ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ತನ್ನ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಬೇಕೆಂಬ ಕಾರಣಕ್ಕೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕ್ವಿಂಟನ್ ಡಿಕಾಕ್ ತಮ್ಮ ಮಗಳಿಗೆ ಕಿಯಾರ ಎಂದು ಹೆಸರಿಟ್ಟಿದ್ದಾರೆ. ಡಿ ಕಾಕ್ ತನ್ನ ಕುಟುಂಬ ಮತ್ತು ಮೊದಲ ಮಗುವಿನೊಂದಿಗೆ ಕಾಲ ಕಳೆಯಬೇಕೆಂದು ದೀರ್ಘ ಸ್ವರೂಪದ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದರು. ಆದ್ರೆ ಅವರು ದಕ್ಷಿಣ ಆಫ್ರಿಕಾದ ವೈಟ್-ಬಾಲ್ ಕ್ರಿಕೆಟ್ ಆಡುವುದನ್ನು ಮುಂದುವರೆಸುತ್ತಾರೆ ಮತ್ತು ಪ್ರಪಂಚದಾದ್ಯಂತ ಟಿ20 ಲೀಗ್‌ಗಳಲ್ಲಿ ಭಾಗವಹಿಸಲಿದ್ದಾರೆ.

ಸೆಂಚುರಿಯನ್ ಮೈದಾನದಲ್ಲಿ ಭಾರತ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯವೇ ಡಿಕಾಕ್‌ರ ಕೊನೆಯ ಪಂದ್ಯವಾಗಿತ್ತು. ಎರಡು ಇನ್ನಿಂಗ್ಸ್‌ಗಳಲ್ಲಿ ಇವರು 34 ಮತ್ತು 21 ರನ್ ಗಳಿಸಿದರು.

''ಇದು ನಾನು ತುಂಬಾ ಸುಲಭವಾಗಿ ತೆಗೆದುಕೊಂಡ ನಿರ್ಧಾರವಲ್ಲ, ನಾನು ಮತ್ತು ಸಶಾ ನಮ್ಮ ಮೊದಲ ಮಗುವನ್ನು ಸ್ವಾಗತಿಸಲಿರುವಾಗ ನನ್ನ ಭವಿಷ್ಯ ಹೇಗಿರುತ್ತದೆ ಮತ್ತು ನನ್ನ ಜೀವನದಲ್ಲಿ ಏನು ಆದ್ಯತೆ ನೀಡಬೇಕು ಎಂಬುದರ ಕುರಿತು ಯೋಚಿಸಲು ನಾನು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದೇನೆ. ಈ ಜಗತ್ತಿನಲ್ಲಿ ನಮ್ಮ ಕುಟುಂಬಕ್ಕೂ ಮೀರಿ ನನಗೇನು ಇಲ್ಲ. ನನ್ನ ಕುಟುಂಬ ನನಗೆ ಎಲ್ಲವೂ ಆಗಿದೆ ಮತ್ತು ನಮ್ಮ ಜೀವನದ ಈ ಹೊಸ ಮತ್ತು ಉತ್ತೇಜಕ ಅಧ್ಯಾಯದಲ್ಲಿ ಅವರೊಂದಿಗೆ ಹೆಚ್ಚು ಸಮಯ ಹೊಂದಲು ನಾನು ಬಯಸುತ್ತೇನೆ" ಎಂದು ಡಿ ಕಾಕ್ ನಿವೃತ್ತಿ ಸಮಯದಲ್ಲಿ ಹೇಳಿದರು.

2020/21 ರ ವರ್ಷದಲ್ಲಿ ಡಿಕಾಕ್ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾದ ನಾಯಕತ್ವವನ್ನು ಸಹ ವಹಿಸಿದ್ದರು. ಇನ್ನು ದಕ್ಷಿಣ ಆಫ್ರಿಕಾ ಪರ ವೈಟ್ ಬಾಲ್ ಕ್ರಿಕೆಟ್ ಆಡುವುದನ್ನು ಮುಂದುವರಿಸುವ ಉದ್ದೇಶ ಹೊಂದಿರುವುದಾಗಿ ಅವರು ಹೇಳಿದ್ದಾರೆ.

ಕ್ವಿಂಟನ್ ಡಿ ಕಾಕ್ ಫೆಬ್ರವರಿ 2014 ರಲ್ಲಿ ಪೋರ್ಟ್ ಎಲಿಜಬೆತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು 54 ಟೆಸ್ಟ್ ಪಂದ್ಯಗಳಲ್ಲಿ ಆರು ಶತಕಗಳೊಂದಿಗೆ 3300 ರನ್ ಗಳಿಸಿದರು.

Story first published: Friday, January 7, 2022, 9:32 [IST]
Other articles published on Jan 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+