For Quick Alerts
ALLOW NOTIFICATIONS  
For Daily Alerts
 

ಮುಂದಿನ ಟಿ20 ಪಂದ್ಯಗಳಲ್ಲಿ ಆರ್‌.ಅಶ್ವಿನ್ ಪ್ರಮುಖ ಪಾತ್ರವಹಿಸಲಿದ್ದಾರೆ: ಸಾಬಾ ಕರೀಂ

Saba karim

ಮುಂಬರುವ ಟಿ20 ಪಂದ್ಯಗಳಲ್ಲಿ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪಿಂಗ್ ಬ್ಯಾಟರ್ ಸಾಬಾ ಕರೀಂ ಹೇಳಿದ್ದಾರೆ.

ಎಂಟು ತಿಂಗಳ ಬಳಿಕ ಟಿ20 ಫಾರ್ಮೆಟ್‌ಗೆ ಮರಳಿದ ರವಿಚಂದ್ರನ್ ಅಶ್ವಿನ್, ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡುತ್ತಿದ್ದಾರೆ. ಈತ ಮುಂದಿನ ಟೀಂ ಇಂಡಿಯಾ ಟಿ20 ಪಂದ್ಯಗಳಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸಾಬಾ ಕರೀಂ ಅಭಿಪ್ರಾಯ ಪಟ್ಟಿದ್ದಾರೆ.

ಮೊದಲ ಟಿ20ಯಲ್ಲಿ 2 ಮಹತ್ವದ ವಿಕೆಟ್ ಉರುಳಿಸಿದ ಅಶ್ವಿನ್‌

ಮೊದಲ ಟಿ20ಯಲ್ಲಿ 2 ಮಹತ್ವದ ವಿಕೆಟ್ ಉರುಳಿಸಿದ ಅಶ್ವಿನ್‌

ವಿಂಡೀಸ್ ವಿರುದ್ಧ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಅಶ್ವಿನ್‌ 13 ರನ್‌ಗಳನ್ನ ಗಳಿಸುವುದರ ಜೊತೆಗೆ ಎರಡು ಪ್ರಮುಖ ವಿಕೆಟ್‌ ಪಡೆದರು. ಕೆರಿಬಿಯನ್ ನಾಯಕ ನಿಕೋಲಸ್ ಪೂರನ್ ಹಾಗೂ ಡೇಂಜರ್ ಬ್ಯಾಟರ್ ಶಿಮ್ರಾನ್ ಹೆಟ್ಮಾಯರ್ ವಿಕೆಟ್ ಪಡೆದ ಅಶ್ವಿನ್‌, ಭಾರತ 68ರನ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಅಶ್ವಿನ್ ವಿಕೆಟ್ ಟೇಕಿಂಗ್ ಬೌಲರ್ ಆಗಿದ್ದಾರೆ: ಸಾಬಾ ಕರೀಂ

ಅಶ್ವಿನ್ ವಿಕೆಟ್ ಟೇಕಿಂಗ್ ಬೌಲರ್ ಆಗಿದ್ದಾರೆ: ಸಾಬಾ ಕರೀಂ

ಇಂಡಿಯಾ ಸ್ಪೂರ್ಟ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಾಬಾ ಕರೀಂ, ಭಾರತ ಪರ ಅಶ್ವಿನ್‌ ದೊಡ್ಡ ಪಾತ್ರವಹಿಸಲಿದ್ದು, ಪ್ರಮುಖ ವಿಕೆಟ್ ಆಗಲಿದ್ದಾರೆ ಎಂದು ಹೇಳಿದ್ದಾರೆ.

"ರವಿಚಂದ್ರನ್ ಅಶ್ವಿನ್ ಇನ್ನೂ ರೋಹಿತ್ ಶರ್ಮಾ ಅವರ ಯೋಜನೆಗಳ ಭಾಗವಾಗಿದ್ದಾರೆ. ನಾಯಕನಿಗೆ ಈ ಸ್ವರೂಪದಲ್ಲಿ ವಿಕೆಟ್‌ಗಳನ್ನು ತೆಗೆಯಬಲ್ಲ ಬೌಲರ್‌ಗಳು ಬೇಕಾಗಿದ್ದಾರೆ ಮತ್ತು ಅಶ್ವಿನ್ ವಿಕೆಟ್ ತೆಗೆದುಕೊಳ್ಳುವ ಆಯ್ಕೆಯಾಗಿರುತ್ತಾರೆ. ಮುಂಬರುವ ಪಂದ್ಯಗಳಲ್ಲಿ ಅಶ್ವಿನ್ ದೊಡ್ಡ ಪಾತ್ರ ವಹಿಸುವ ಸಾಧ್ಯತೆ ಇದೆ. ಅವರು ತಂಡಕ್ಕಾಗಿ ವಿಕೆಟ್‌ಗಳನ್ನು ಪಡೆಯಬಹುದು ಮತ್ತು ಅಪಾರ ಅನುಭವವನ್ನು ಹೊಂದಿದ್ದಾರೆ'' ಎಂದು ಸಾಬಾ ಕರೀಂ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತಕ್ಕೆ ಬೇಕಿದೆ ಇನ್ನೊಂದೇ ಗೆಲುವು: ಪಾಕಿಸ್ತಾನದ ಮಹತ್ವದ ದಾಖಲೆ ಸರಿಗಟ್ಟಲಿದೆ

ಜಡೇಜಾ ವಿಕೆಟ್ ಪಡೆಯುವಲ್ಲಿ ವಿಫಲ, ಅಶ್ವಿನ್‌ಗೆ ಸಿಗಲಿದ್ಯಾ ಚಾನ್ಸ್‌

ಜಡೇಜಾ ವಿಕೆಟ್ ಪಡೆಯುವಲ್ಲಿ ವಿಫಲ, ಅಶ್ವಿನ್‌ಗೆ ಸಿಗಲಿದ್ಯಾ ಚಾನ್ಸ್‌

ಆಲ್‌ರೌಂಡರ್ ರವೀಂದ್ರ ಜಡೇಜಾ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ತಗ್ಗಿದೆ. ಅದ್ರಲ್ಲೂ ಟಿ20 ಅಂತರಾಷ್ಟ್ರೀಯ ಸರಣಿಗಳಲ್ಲಿ ಜಡ್ಡು ಹಿನ್ನಡೆಯಿಂದಾಗಿ ರೋಹಿತ್ ಜಡೇಜಾಗೆ ಆತ್ಮವಿಶ್ವಾಸ ಬರಲಿ ಎಂದು ಪವರ್‌ಪ್ಲೇ ಓವರ್‌ಗಳಲ್ಲಿ ಬೌಲಿಂಗ್ ನೀಡಿದ್ರು.

"ರೋಹಿತ್ ಶರ್ಮಾ ಪವರ್‌ಪ್ಲೇ ಸಮಯದಲ್ಲಿ ರವೀಂದ್ರ ಜಡೇಜಾಗೆ ಬೌಲಿಂಗ್ ಮಾಡಲು ಬೆಂಬಲ ನೀಡಿದ್ದು ನೋಡಲು ಸಂತೋಷವಾಯಿತು. ಜಡೇಜಾ ಅವರು ತಮ್ಮ ಕೊನೆಯ ಕೆಲವು ಟಿ20 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ ರೀತಿಯಲ್ಲಿ ಆತ್ಮವಿಶ್ವಾಸದ ಕೊರತೆಯನ್ನು ತೋರುತ್ತಿದೆ.

"ರೋಹಿತ್ ಪ್ರಮುಖ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬಲು ಬಯಸುತ್ತಾರೆ. ಅದಕ್ಕಾಗಿಯೇ ಅವರು ಸ್ಪಿನ್ ಅನುಕೂಲಕರ ವಿಕೆಟ್‌ನಲ್ಲಿ ಅವರನ್ನು ಆಕ್ರಮಣಕ್ಕೆ ತಂದರು. ನಾಯಕನು ಈ ರೀತಿಯಲ್ಲಿ ನಿಮ್ಮನ್ನು ಬೆಂಬಲಿಸಿದಾಗ ಅದು ದೊಡ್ಡ ಪ್ಲಸ್ ಆಗಿದೆ'' ಎಂದು ಮಾಜಿ ಆಟಗಾರ ಹೇಳಿದ್ದಾರೆ.

Commonwealth Games Day 4 Live: ಮೂರು ವಿಭಾಗಗಳಲ್ಲಿ ಭಾರತ ಪದಕ ಗೆಲ್ಲುವುದು ಬಹುತೇಕ ಖಚಿತ

ರೋಹಿತ್ ಶರ್ಮಾ ನಾಯಕತ್ವ ಅದ್ಭುತವಾಗಿದೆ!

ರೋಹಿತ್ ಶರ್ಮಾ ನಾಯಕತ್ವ ಅದ್ಭುತವಾಗಿದೆ!

ರೋಹಿತ್ ಶರ್ಮಾ ನಾಯಕನಾಗಿ ಅಷ್ಟೇ ಅಲ್ಲದೆ ಆಟಗಾರನಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಪಿಚ್‌ನಲ್ಲಿ ಬ್ಯಾಟ್‌ ಮಾಡುವುದು ಸ್ವಲ್ಪ ಕಷ್ಟವಾಗಿದ್ದರೂ, ರೋಹಿತ್ ತನ್ನ ಅದ್ಭುತ ಆಟವಾಡಿದ್ದಾರೆ.

''ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಆದರೆ ಅವರ ಬ್ಯಾಟಿಂಗ್ ಹೊರತಾಗಿ, ಅವರ ನಾಯಕತ್ವವೂ ಉತ್ತಮವಾಗಿದೆ ಎಂದು ನೋಡಲು ನನಗೆ ಸಂತೋಷವಾಗಿದೆ. ವಿಕೆಟ್ ಬ್ಯಾಟಿಂಗ್ ಮಾಡಲು ಕಠಿಣವಾಗಿತ್ತು ಮತ್ತು ಎರಡೂ ಕಡೆಯ ಆಟಗಾರರು ಪರಿಸ್ಥಿತಿಗೆ ಹೊಂದಿಕೊಳ್ಳಲು ಹೆಣಗಾಡಿದರು. ಆದರೆ ರೋಹಿತ್ ಸಂಪೂರ್ಣವಾಗಿ ವಿಭಿನ್ನ ವಿಕೆಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರಂತೆ ಕಾಣುತ್ತಿದ್ದರು'' ಎಂದು ಸಾಬಾ ಹೊಗಳಿದ್ದಾರೆ.

Story first published: Tuesday, August 2, 2022, 10:08 [IST]
Other articles published on Aug 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+