ಕೌಂಟಿ ಕ್ರಿಕೆಟ್: ಹ್ಯಾಂಪ್‌ಶೈರ್ ಪರ ಆಡಲಿರುವ ಅಜಿಂಕ್ಯ ರಹಾನೆ

ಹೊಸದಿಲ್ಲಿ, ಏಪ್ರಿಲ್ 26: ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಮೇ, ಜೂನ್ ಮತ್ತು ಜುಲೈನಲ್ಲಿ ನಡೆಯಲಿರುವ ಕೌಂಟಿ ಚಾಂಪಿಯನ್‌ಷಿಪ್ ಕ್ರಿಕೆಟ್ ಟೂರ್ನಿಯಲ್ಲಿ ಹ್ಯಾಂಪ್‌ಶೈರ್ ತಂಡದ ಪರ ಆಡಲಿದ್ದಾರೆ. ಈ ಕುರಿತಾಗಿ ಹ್ಯಾಂಪ್‌ಶೈರ್ ತಂಡ ಗುರುವಾರ ಖಾತ್ರಿ ಪಡಿಸಿದೆ.
ಇದರೊಂದಿಗೆ ಹ್ಯಾಂಪ್‌ಶೈರ್ ಕೌಂಟಿ ಕ್ರಿಕೆಟ್ ತಂಡದ ಪರ ಆಡಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಅಜಿಂಕ್ಯ ಅವರಿಗೆ ಲಭ್ಯವಾಗಲಿದೆ. ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಏಡನ್ ಮಾಕ್ರರ್ಮ್ ಅವರ ಸ್ಥಾನದಲ್ಲಿ 30 ವರ್ಷದ ಬಲಗೈ ಬ್ಯಾಟ್ಸ್‌ಮನ್ ರಹಾನೆ ಹ್ಯಾಂಪ್‌ಶೈರ್ ಸೇರಿಕೊಳ್ಳಲಿದ್ದಾರೆ.
ಮಾಕ್ರರ್ಮ್, ಮುಂಬರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಆಡಲಿದ್ದಾರೆ. ಹೀಗಾಗಿ ಕೌಂಟಿ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ.
ಮತ್ತೊಂದೆಡೆ ವಿಶ್ವಕಪ್‌ಗೆ ಪ್ರಕಟಿಸಲಾದ ಟೀಮ್ ಇಂಡಿಯಾದಲ್ಲಿ ರಹಾನೆ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದು, ಮುಂದಿನ ಮೂರು ತಿಂಗಳ ಅವಧಿಯಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶ ಇಲ್ಲದೇ ಇರುವ ಕಾರಣ ಕೌಂಟಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಈ ಕುರಿತಾಗಿ ಇತ್ತೀಚೆಗಷ್ಟೇ ಬಿಸಿಸಿಐ ಬಳಿ ಕೌಂಟಿ ಕ್ರಿಕೆಟ್ ಆಡಲು ಅನುಮತಿ ಕೋಡಿದ್ದರು.
"ಹ್ಯಾಂಪ್‌ಶೈರ್ ಪರ ಆಡಿದ ಮೊದಲ ಭಾರತೀಯ ಆಟಗಾರ ಎಂದೆನಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ತಂಡದ ಪರ ಉತ್ತಮ ರನ್‌ಗಳಿಸಿ ಪಂದ್ಯಗಳನ್ನು ಗೆದ್ದುಕೊಡಲು ಪ್ರಯತ್ನಿಸಲಿದ್ದೇನೆ. ಕೌಂಟಿ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಅನುಮತಿಸಿದ ಬಿಸಿಸಿಐಗೆ ಧನ್ಯವಾದಗಳು,'' ಎಂದು ರಹಾನೆ ಹೇಳಿದ್ದಾರೆ.
"ಅಜಿಂಕ್ಯ ರಹಾನೆ ಅವರಂತಹ ಬ್ಯಾಟ್ಸ್‌ಮನ್ ನಮ್ಮತ್ತ ಆಕರ್ಷಿತರಾಗಿರುವುದಕ್ಕೆ ಸಂತಸವಿದೆ. ಏಡನ್ ಮತ್ತು ದಿಮುತ್ ಕರುಣಾರತ್ನೆ ವಿಶ್ವಕಪ್‌ನಲ್ಲಿ ಆಡುವ ಕಾರಣ ಆರಂಭಿಕ ಬ್ಯಾಟ್ಸ್‌ಮನ್ ಸಲುವಾಗಿ ಹುಡುಕಾಟ ನಡೆಸುತ್ತಿದ್ದೆವು. ಅಜಿಂಕ್ಯ ಇದಕ್ಕೆ ಆಸಕ್ತಿ ತೋರಿದರು,'' ಎಂದು ಹ್ಯಾಂಪ್‌ಶೈರ್ ತಂಡದ ಕ್ರಿಕೆಟ್ ನಿರ್ದೇಶಕ ಜೈಲ್ಸ್ ವೈಟ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 56 ಪಂದ್ಯಗಳನ್ನಾಡಿರುವ ಅಜಿಂಕ್ಯ ರಹಾನೆ, 40.55ರ ಸರಾಸರಿಯಲ್ಲಿ 9 ಶತಕ ಮತ್ತು 17 ಅರ್ಧಶತಕಗಳನ್ನು ಒಳಗೊಂಡಿರುವ 3,488 ರನ್‌ಗಳನ್ನು ಗಳಿಸಿದ್ದಾರೆ.
ಅಂದಹಾಗೆ ಕೌಂಟಿ ಕ್ರಿಕೆಟ್‌ನಲ್ಲಿ ಭಾರತದ 40ಕ್ಕೂ ಹೆಚ್ಚು ಆಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅದರಲ್ಲಿ ಕೆಲ ಪ್ರಮುಖ ಆಟಗಾರರ ವಿವರ ಇಲ್ಲಿದೆ.

ಸರ್ರೆ ಪರ ಕೊಹ್ಲಿ ಕಣಕ್ಕೆ
ಕಳೆದ ವರ್ಷ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಅಲ್ಲಿನ ಸ್ಥಿತಿಗತಿಗಳನ್ನು ರೂಢಿಸಿಕೊಳ್ಳುವ ಮುಂದಾಲೋಚನೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಸರ್ರೆ ತಂಡವನ್ನು ಪ್ರತಿನಿಧಿಸಿದ್ದರು.

ಯಾರ್ಕ್‌ಶೈರ್ ಪ್ರತಿನಿಧಿಸಿದ್ದ ಸಚಿನ್
ತಮ್ಮ ಕ್ರಿಕೆಟ್ ವೃತ್ತಿ ಬದುಕಿನ ಆರಂಭಿಕ ವರ್ಷಗಳಲ್ಲೇ ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಕೌಂಟಿ ಕ್ರಿಕೆಟ್‌ನಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಅನಾವರಣ ಪಡಿಸಿದ್ದರು. ಸಚಿನ್ 1992ರಲ್ಲಿ ಯಾರ್ಕ್‌ಶೈರ್ ಪರ 16 ಪಂದ್ಯಗಳನ್ನಾಡಿದ್ದರು.

ಡರ್ಬಿಶೈರ್ ಪರ ಅಜರ್ ಅಬ್ಬರ
ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕೂಡ ಕೌಂಟಿಯಲ್ಲಿ ಅಬ್ಬರಿಸಿದ್ದಾರೆ. 1991ರಿಂದ 1994ರವರೆಗೆ ಡರ್ಬಿಶೈರ್ ತಂಡದ ಪರ ಅಜರ್ 60 ಪಂದ್ಯಗಳನ್ನಾಡಿದ್ದಾರೆ.

ಗ್ಲಮೋರ್ಗನ್ ಪ್ರಿನಿಧಿಸಿದ್ದ ಶಾಸ್ತ್ರಿ
ಭಾರತ ತಂಡದ ಹಾಲಿ ಕೋಚ್ ಹಾಗೂ ಮಾಜಿ ಆಲ್‌ರೌಂಡರ್ ರವಿ ಶಾಸ್ತ್ರಿ, 1987ರಿಂದ 1991ರ ವರೆಗೆ ಗ್ಲಮೋರ್ಗನ್ ಕೌಂಟಿ ತಂಡದ ಪರ 60 ಪಂದ್ಯಗಳನ್ನಾಡಿದ್ದಾರೆ.

2 ತಂಡದ ಪರ ಆಡಿದ ಕಪಿಲ್
1983ರಲ್ಲಿ ಭಾರತಕ್ಕೆ ಚೊಚ್ಚಲ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಹರಿಯಾಣ ಹರಿಕೇನ್ ಖ್ಯಾತಿಯ ಆಲ್‌ರೌಂಡರ್ ಕಪಿಲ್ ದೇವ್ ಕೌಂಟಿಯಲ್ಲಿ ಎರಡು ತಂಡಗಳನ್ನು ಪ್ರತಿನಿಧಿಸಿದ್ದಾರೆ. 1981ರಿಂದ 1985ರವರೆಗೆ ಕಪಿಲ್ ನಾರ್ತ್‌ಹ್ಯಾಂಪ್ಟನ್ ಶೈರ್ ಮತ್ತು ವಾರ್ಸೆಸ್ಟರ್‌ಶೈರ್ ತಂಡಗಳ ಪರ ಒಟ್ಟಾರೆ 40 ಪಂದ್ಯಗಳನ್ನಾಡಿದ್ದಾರೆ.

ಮೂರು ತಂಡಗಳಲ್ಲಿ ಪೂಜಾರ
ಟೆಸ್ಟ್ ಸ್ಪೆಷಲಿಸ್ಟ್ ಆಟಗಾರ ಚೇತೇಶ್ವರ್ ಪೂಜಾರಾ ಕೌಂಟಿ ಕ್ರಿಕೆಟ್‌ನಲ್ಲಿ ಮೂರು ತಂಡಗಳ ಪರ ಆಡಿದ ಕೀರ್ತಿ ಹೊಂದಿದ್ದಾರೆ. 2013ರಲ್ಲಿ ಮೊದಲ ಬಾರಿ ಕೌಂಟಿಯಲ್ಲಿ ಪಾಲ್ಗೊಂಡ ಪೂಜಾರಾ, ಡರ್ಬಿಶೈರ್, ಯಾರ್ಕ್‌ಶೈರ್ ಮತ್ತು ನಾಟಿಂಗ್‌ಹ್ಯಾಮ್‌ಶೈರ್ ಪರ ಒಟ್ಟಾರೆ 14 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications