For Quick Alerts
ALLOW NOTIFICATIONS  
For Daily Alerts
 

ರಾಹುಲ್‌ ಬ್ಯಾಟಿಂಗ್‌ ಬಗ್ಗೆ ಕ್ರಿಸ್‌ ಗೇಲ್‌ ಈ ರೀತಿ ಹೇಳಿದ್ದಾರೆ

Rahul one of best openers Ive batted with: Gayle

ಮೊಹಾಲಿ, ಮೇ 06: ಐಪಿಎಲ್‌ನಲ್ಲಿ ದಾಖಲೆಗಳ ಶಿಖರವನ್ನೇ ನಿರ್ಮಿಸಿರುವ ದಿ ಯೂನಿವರ್ಸ್‌ ಬಾಸ್‌ ಖ್ಯಾತಿಯ ವೆಸ್ಟ್‌ ಇಂಡೀಸ್‌ನ ದೈತ್ಯ ಅಟಗಾರ ಕ್ರಿಸ್ಟೋಫರ್‌ ಹೆನ್ರಿ ಗೇಲ್‌,

ಕನ್ನಡಿಗ ಹಾಗೂ ಕಿಂಗ್ಸ್‌ ಇಲೆವೆನ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ ಅವರ ಬ್ಯಾಟಿಂಗ್‌ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಕರ್ನಾಟಕದ ಸ್ಟಾರ್‌ ಬ್ಯಾಟ್ಸ್‌ಮನ್‌ ರಾಹುಲ್‌ಗೆ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿರುವ 40 ವರ್ಷದ ಅನುಭವಿ ಆಟಗಾರ ಗೇಲ್‌, ತಮ್ಮ ವೃತ್ತಿ ಜೀವನದಲ್ಲಿ ತಾವು ಆಡಿದ ಎಲ್ಲಾ ಆರಂಭಿಕ ಬ್ಯಾಟ್ಸ್‌ಮನ್‌ಗಳ ಪೈಕಿ ಕೆ.ಎಲ್‌ ರಾಹುಲ್‌ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಗುಣಗಾನ ಮಾಡಿದ್ದಾರೆ.

ಭಾನುವಾರ ನಡೆದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಅಂತಿಮ ಲೀಗ್‌ ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್‌ ಪ್ರದರ್ಶಿಸಿದ ರಾಹುಲ್‌, 36 ಎಸೆತಗಳಲ್ಲಿ ಭರ್ಜರಿಯ 71 ರನ್‌ಗಳನ್ನು ಸಿಡಿಸಿ ಟೂರ್ನಿಯ ಬಲಿಷ್ಠ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಪಂಜಾಬ್‌ಗೆ 6 ವಿಕೆಟ್‌ಗಳ ಅದ್ಭುತ ಗೆಲುವು ತಂದುಕೊಟ್ಟರು.

RCB ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ!

171 ರನ್‌ಗಳ ಗುರಿ ಬೆನ್ನತ್ತಿದ ಕಿಂಗ್ಸ್‌ ಇಲೆವೆನ್‌ಗೆ ಕೆ.ಎಲ್‌ ರಾಹುಲ್‌ ಮತ್ತು ಕ್ರಿಸ್‌ ಗೇಲ್‌ ಮೊದಲ ವಿಕೆಟ್‌ಗೆ 108 ರನ್‌ಗಳ ಭರ್ಜರಿ ಜತೆಯಾಟ ತಂದುಕೊಟ್ಟರು. ಪರಿಣಾಮ ಕಿಂಗ್ಸ್‌ ಇಲೆವೆನ್‌ ತಂಡ ಇನ್ನು 2 ಓವರ್‌ಗಳು ಬಾಕಿ ಇರುವಾಗಲೇ ಜಯದ ದಡ ಮುಟ್ಟುವಲ್ಲಿ ಯಶಸ್ವಿಯಾಯಿತು.

ಪಂದ್ಯದ ಬಳಿಕ ಮಾತನಾಡಿದ ಗೇಲ್‌, "ನನ್ನೊಂದಿಗೆ ಈವರೆಗೆ ಆಡಿದ ಶ್ರೇಷ್ಠ ಆರಂಭಿಕ ಜತೆಗಾರ ನೀನು. ವಿಕೆಟ್‌ ಮಧ್ಯದಲ್ಲಿ ನಮ್ಮಿಬ್ಬರ ನಡುವಣ ಹೊಂದಾಣಿಕೆ ಅದ್ಭುತವಾದದ್ದು,'' ಎಂದು ರಾಹುಲ್‌ ಬಗ್ಗೆ ಹಾಡಿ ಹೊಗಳಿದರು.

ಇದಕ್ಕೆ ಕೂಡಲೇ ಉತ್ತರಿಸಿದ ರಾಹುಲ್‌, "ಆರ್‌ಸಿಬಿ ತಂಡದಲ್ಲಿ ನನ್ನ 21ನೇ ವಯಸ್ಸಿನಲ್ಲಿ ಆಡುವಾಗ ಗೇಲ್‌ ನನನ್ನು ನೋಡಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಗೇಲ್‌ ಅವರಿಂದ ಸಾಕಷ್ಟು ಪಾಠ ಕಲಿತಿದ್ದೇನೆ. ಅವರ ಜೊತೆಗೆ ಆಡುವುದನ್ನು ಆನಂದಿಸಿದ್ದೇನೆ,'' ಎಂದಿದ್ದಾರೆ.

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಪ್ರಸಕ್ತ ಐಪಿಎಲ್‌ನಲ್ಲಿ 14 ಪಂದ್ಯಗಳಿಂದ ಒಟ್ಟು 12 ಅಂಕಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿ, ಅಂಕಪಟ್ಟಿಯಲ್ಲಿ ನಿರಾಶಾದಾಯಕ 6ನೇ ಸ್ಥಾನದಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ.

ಇನ್ನು ಕಿಂಗ್ಸ್‌ ಪರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿರುವ ರಾಹುಲ್‌, 14 ಪಂದ್ಯಗಳಿಂದ ಒಟ್ಟು 593 ರನ್‌ಗಳನ್ನು ಚಚ್ಚಿದ್ದಾರೆ. ಇದರಲ್ಲಿ ಒಂದು ಆಕರ್ಷಕ ಶತಕವೂ ಸೇರಿದೆ. ಗೇಲ್‌ ಕೂಡ ಅಷ್ಟೇ ಅಬ್ಬರದ ಬ್ಯಾಟಿಂಗ್‌ ನಡೆಸಿದ್ದು, 13 ಪಂದ್ಯಗಳಿಂದ 490 ರನ್‌ಗಳನ್ನು ಸಿಡಿಸಿದ್ದಾರೆ. ಈ ಜೋಡಿ ಎರಡು ಬಾರಿ ಶತಕದ ಜತೆಯಾಟ ನಡೆಸಿದೆ.

Story first published: Monday, May 6, 2019, 16:49 [IST]
Other articles published on May 6, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+