For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಮನಸ್ಸು ಕೆಡಿಸಲು ರಾಖಿ ಪ್ಯಾರ್ ತಂತ್ರವೇ?

By Mahesh

ಮುಂಬೈ, ಮಾ.18: ಸದಾ ಕಾಲ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿ ಸುದ್ದಿಗ್ರಾಸವಾಗುತ್ತಿದ್ದ ಕಿರಿಕ್ ಕ್ವೀನ್ ರಾಖಿ ಸಾವಂತ್ ಈಗ ಮತ್ತೊಮ್ಮೆ ಕ್ರಿಕೆಟಿಗರ ಮೇಲೆ ಕಣ್ಣು ಹಾಕಿದ್ದಾರೆ. ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ತಯಾರಾಗುತ್ತಿರುವ ವಿರಾಟ್ ಕೊಹ್ಲಿ ಮೇಲೆ ನನಗೆ ಮನಸ್ಸಾಗಿದೆ ಎಂದು ಘೋಷಿಸಿದ್ದಾರೆ. ಇದರ ಹಿಂದೆ ಯಾವುದಾದರು ಷಡ್ಯಂತ್ರ ಇರಬಹುದೇ ಎಂಬ ಅನುಮಾನವೂ ಅಭಿಮಾನಿಗಳನ್ನು ಕಾಡುತ್ತಿದೆ.

ಬುಕ್ಕಿಗಳ ಫೇವರೀಟ್ ತಂಡವಾಗಿರುವ ಟೀಂ ಇಂಡಿಯಾ ಸುಲಭವಾಗಿ ಸೆಮಿಫೈನಲ್ ತಲುಪುವ ನಿರೀಕ್ಷೆ ಹೊಂದಲಾಗಿದೆ. ಅದರಲ್ಲೂ ವಿರಾಟ್ ಕೊಹ್ಲಿ ಸರಿಯಾದ ಸಮಯಕ್ಕೆ ಸಿಡಿದು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಾರೆ ಎಂಬ ನಂಬಿಕೆ ಇದೆ. [ಕೊಹ್ಲಿ ಸಿಟ್ಟಿಗೆದ್ದು ಪತ್ರಕರ್ತನಿಗೆ ಉಗಿದಿದ್ದೇಕೆ?]

ಅದರೆ, ಕೊಹ್ಲಿ ಮನಸ್ಸು ಕೆಡಿಸುವ ಘಟನಾವಳಿಗಳು ಈಗಾಗಲೇ ನಡೆದಿದೆ. ವಿರಾಟ್ ಕೊಹ್ಲಿ ಅವರು ಪತ್ರಕರ್ತನ ಮೇಲೆ ಎಗರಾಡಿದ್ದು ಗೊತ್ತೇ ಇದೆ. ಕೊಹ್ಲಿ ಅವರ ಕೋಪ ತಾರಕ್ಕೇರುವಂತೆ ಮಾಡುವ ಯೋಜನೆ ಕಾಣದ ಕೈಗಳಿಂದ ನಡೆದಿರುವ ಷಡ್ಯಂತ್ರ ಎಂದೇ ನಂಬಲಾಗಿದೆ. [ಸಚಿನ್ ಕಂಡ ಕನಸು ಈಡೇರಿಸಿದ ಕೊಹ್ಲಿ]

ಭಾರತ ಕ್ರಿಕೆಟ್‌ ತಂಡದ ಯುವ ಆಟಗಾರ ವಿರಾಟ್‌ ಕೊಹ್ಲಿಯನ್ನು ನಾನು ಪ್ರೀತಿಸುತ್ತಿದ್ದೇನೆ ಎಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಅನುಷ್ಕಾ ಶರ್ಮಾ ಕೂಡಾ ಕೊಹ್ಲಿಯನ್ನು ಪ್ರೀತಿಸುತ್ತಿದ್ದಾರಲ್ಲ. ಕೊಹ್ಲಿ ಕೂಡಾ ನಾನು ಅನುಷ್ಕಾ ಪ್ರೇಮಿ ಎಂದು ಟ್ವೀಟ್ ಮಾಡಿದ್ದಾರಂತೆ ಪರಿಸ್ಥಿತಿ ಹೀಗಿರುವಾಗ ನೀವು ಹೇಗೆ ಲವ್ ಮಾಡ್ತೀರಾ ಮೇಡಂ ಎಂದು ಪತ್ರಕರ್ತರು ಪ್ರಶ್ನೆಯ ಬಾಣ ಎಸೆದಿದ್ದಾರೆ.

Rakhi Sawant in love with Virat Kohli

ಇದಕ್ಕೆ ನಗುನಗುತ್ತಾ ಉತ್ತರಿಸಿದ ರಾಖಿ, ಅನುಷ್ಕಾ ಶರ್ಮಾ ಕೂಡಾ ಕೊಹ್ಲಿಯನ್ನು ಪ್ರೀತಿಸುತ್ತಿರಬಹುದು. ಆದರೆ, ನನ್ನ ಲವ್ ಇನ್ನೂ ಸ್ಟ್ರಾಂಗ್ ಆಗಿದೆ. ಪ್ರೀತಿ ಮುಚ್ಚಿಡುವುದರಲ್ಲಿ ಅರ್ಥವಿಲ್ಲ. ಆಕೆ ಇನ್ನೂ ನನ್ನಂತೆ ಬಹಿರಂಗವಾಗಿ ಹೇಳಿಕೊಂಡಿಲ್ಲ. ನಾನು ಹೇಳುತ್ತಿದ್ದೇನೆ ಎಂದಿದ್ದಾರೆ.[ಹನಿ ಟ್ರ್ಯಾಪ್ 'ಫಿಕ್ಸಿಂಗ್' ಭೀತಿ]

ಚೆಲ್ಲು ಚೆಲ್ಲಿನ ಹುಡುಗಿ ರಾಖಿ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಂಗು ರಂಗಿನ ಚಿತ್ರರಂಗಕ್ಕೆ ಕೆಲಕಾಲ ಗುಡ್ ಬೈ ಹೇಳಿ ರಾಜಕೀಯದಲ್ಲಿ ರಂಗೇರಿಸಲು ಬಂದಿದ್ದರು. ತಮ್ಮ ಬಳಿ ಬರೋಬ್ಬರಿ 14.69 ಕೋಟಿ ರೂಪಾಯಿ ಆಸ್ತಿಯಿದೆ ಎಂದು ಘೋಷಿಸಿದ್ದರು. ತಮ್ಮದೇ ಆದ "ರಾಷ್ಟ್ರೀಯ ಆಮ್‌ ಪಾರ್ಟಿ" ಸ್ಥಾಪಿಸಿಕೊಂಡು ಹಸಿರು ಮೆಣಸಿನಕಾಯಿ ಚಿಹ್ನೆಯಡಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. [ಸ್ಪಾಟ್ ಫಿಕ್ಸಿಂಗ್ ಎಂದರೇನು?]

ಅದರೆ, ಮುಂಬೈನ ಜನ ಆಕೆಯನ್ನು ರಾಜಕೀಯದಿಂದ ದೂರು ಇರು ಎಂದು ಹೇಳಿ ಸೋಲಿಸಿ ಮನೆಗೆ ಕಳಿಸಿದ್ದರು. ಈಗ ಅಗ್ಗದ ಪ್ರಚಾರಕ್ಕಾಗಿ ಕೊಹ್ಲಿ ಹಿಂದೆ ಬಿದ್ದಿರುವ ರಾಖಿ ಮಾತನ್ನು ಯಾರು ನಂಬಲು ತಯಾರಿಲ್ಲ (ಎಎನ್ ಐ)

Story first published: Wednesday, January 3, 2018, 10:02 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+