ಪಿಸಿಬಿ ಅಧ್ಯಕ್ಷ ಸ್ಥಾನದಿಂದ ರಮೀಜ್ ರಾಜಾ ವಜಾಗೆ ಸಿದ್ಧತೆ: ಕಾರಣ ಏನು ಗೊತ್ತಾ?

ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಮತ್ತೊಮ್ಮೆ ಬದಲಾವಣೆಗಳು ನಡೆಯುವ ಸಾಧ್ಯತೆಗಳು ದಟ್ಟವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಅವರನ್ನೇ ಕೆಳಕ್ಕಿಳಿಸುವ ಕುರಿತಾಗಿ ಭಾರೀ ಬೆಳವಣಿಗೆಗಳು ನಡೆಯುತ್ತಿದ್ದು ಯಾವ ಕ್ಷಣದಲ್ಲಾದರೂ ರಮೀಜ್ ರಾಜಾ ಪಿಸಿಬಿ ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಯುವ ಸಾಧ್ಯತೆಯಿದೆ.
ರಮೀಜ್ ರಾಜಾ ಅವರ ರಾಜೀನಾಮೆಗೆ ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಅನುಭವಿಸಿರುವ ಸೋಲು ತಕ್ಷಣದ ಕಾರಣವಾಗಿದೆ. ಕಳೆದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ಸೋಲಿನ ನಂತರ ರಮೀಜ್ ರಾಜಾ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಇದು ಮುಂದುವರಿದಿದ್ದು ಸದ್ಯ ರಾಜೀನಾಮೆ ಕೊಡುವ ಹಂತಕ್ಕೆ ಬಂದು ನಿಂತಿದೆ ಎನ್ನಲಾಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕನೂ ಆಗಿರುವ ರಮೀಜ್ ರಾಜಾ ಕಳೆದ ವರ್ಷವಷ್ಟೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. 36ನೇ ಅಧ್ಯಕ್ಷರಾಗಿ ಆಯ್ಕಯಾದ ರಮೀಜ್ ರಾಜಾ ಗೆ 3 ವರ್ಷಗಳ ಅಧಿಕಾರಾವಧಿಯಿತ್ತು. ಆದರೆ ಒಂದು ವರ್ಷ ಮೂರು ತಿಂಗಳು ಕಳೆಯುತ್ತಿದ್ದಂತೆಯೇ ಸ್ಥಾನ ತೊರೆಯುವ ಸಾಧ್ಯತೆಗಳು ದಟ್ಟವಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅತೃಪ್ತ ಸದಸ್ಯರ ನೇತೃತ್ವದ ಲಾಬಿಯು ರಮಿಜ್ ರಾಜಾ ಅವರನ್ನು ಪಿಸಿಬಿ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವ ಅಭಿಯಾನವನ್ನು ಪ್ರಾರಂಭಿಸುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಪಿಸಿಬಿಯಲ್ಲಿ ಸಿಬ್ಬಂದಿ ಬದಲಾವಣೆಗಾಗಿ ಕಾನೂನು ಸಚಿವಾಲಯವು ಮಂಡಳಿಯ ಪೋಷಕರಾಗಿರುವ ಪ್ರಧಾನಿಗೆ ಸಾರಾಂಶವನ್ನು ಕಳುಹಿಸಿದೆ.
ಈ ಬಗ್ಗೆ ಪಿಸಿಬಿಯ ಮಾಜಿ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿದ್ದು "ಖಂಡಿತವಾಗಿಯೂ ಏನೋ ಬೆಳವಣಿಗೆಗಳು ನಡೆಯುತ್ತಿದೆ. ನಜಮ್ ಸೇಥಿ ರಮೀಜ್ ರಾಜಾ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ ಎಂಬ ಗಾಳಿಸುದ್ದಿ ಬಲಗೊಳ್ಳುತ್ತಿದೆ. ಸೇಥಿ ಅವರು ಇತ್ತೀಚೆಗೆ ಪ್ರಧಾನಿಯನ್ನು ಕೂಡ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ" ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications