ಭಾರತಕ್ಕೆ ಪಾಕಿಸ್ತಾನ ತಂಡ ಕಳಿಸಲ್ಲ ಎಂದಿದ್ದ ರಮೀಝ್ ರಾಜಾಗೆ ಪಿಸಿಬಿ ಕಚೇರಿಗೆ 'ನೋ ಎಂಟ್ರಿ'

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿರುದ್ಧ ಮಾಜಿ ಅಧ್ಯಕ್ಷ ರಮೀಝ್ ರಾಜಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಮೀಝ್ ರಾಜಾರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಅವರ ಸ್ಥಾನಕ್ಕೆ ನಜಮ್ ಸೇಥಿಯವರನ್ನು ನೇಮಿಸಲಾಗಿದೆ. ಇದರಿಂದ ಸಿಟ್ಟಿಗೆದ್ದಿರುವ ಅವರು, ಇದು ರಾಜಕೀಯ ಪ್ರೇರಿತ ನಡೆ ಎಂದು ಟೀಕಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ನಜಮ್ ಸೇಥಿಗೆ ಸರಿಹೊಂದುವಂತೆ ಪಿಸಿಬಿ ಸಂವಿಧಾನವನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ. ಸೇಥಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ರಾಜಾ ಅವರಿಗೆ ಪಿಸಿಬಿ ಕಚೇರಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.
ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಅವರು ತಮಗೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಕೊಳ್ಳಲು ಪಿಸಿಬಿ ಕಚೇರಿಗೆ ತೆರಳಿದ್ದಾರೆ. ಆದರೆ, ಅಲ್ಲಿ ಅಧಿಕಾರಿಗಳು ತಮ್ಮನ್ನು ಕಚೇರಿ ಒಳಗೆ ಪ್ರವೇಶಿಸಲು ಬಿಡಲಿಲ್ಲ ಎಂದು ರಮೀಝ್ ರಾಜಾ ಆರೋಪ ಮಾಡಿದ್ದಾರೆ.
"ಒಬ್ಬ ವ್ಯಕ್ತಿಗೆ ಸರಿಹೊಂದುವಂತೆ ಪಿಸಿಬಿಯನ್ನು ಬದಲಾಯಿಸಲಾಗಿದೆ. ಜಗತ್ತಿನಲ್ಲಿ ಎಲ್ಲಿಯೂ ಈ ರೀತಿ ಮಾಡಿರುವುದನ್ನು ನಾನು ನೋಡಿಲ್ಲ, ವಿದೇಶಿ ತಂಡಗಳು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಈ ರೀತಿ ಮಾಡಲಾಗಿದೆ. ಅವರು ಟೆಸ್ಟ್ ಆಡಿದ್ದ ಪ್ರಮುಖ ಆಯ್ಕೆದಾರರನ್ನು ಬದಲಾಯಿಸಿದ್ದಾರೆ." ಎಂದು ರಮೀಝ್ ರಾಜಾ ಹೇಳಿದ್ದಾರೆ.

ನಜಮ್ ಸೇಥಿಗೆ ಕ್ರಿಕೆಟ್ ಜೊತೆ ಸಂಬಂಧವಿಲ್ಲ
"ಸೇಥಿ ಕ್ರಿಕೆಟ್ ಜೊತೆ ಯಾವುದೇ ಸಂಬಂಧ ಹೊಂದಿಲ್ಲ. ಅವರು ಇದುವರೆಗೂ ಬ್ಯಾಟ್ ಹಿಡಿದಿಲ್ಲ. ನನ್ನ ಅವಧಿ ಮುಗಿಯುವ ಮುನ್ನ ಬದಲಾಯಿಸಿದ್ದಾರೆ, ಹೊಸ ಕೋಚ್ ನೇಮಕ ಮಾಡಲು ಮುಂದಾಗಿದ್ದಾರೆ. ನಜಮ್ ಸೇಥಿ ಮುನ್ನಲೆಗೆ ಬರಲು ಏನು ಬೇಕಾದರೂ ಮಾಡುತ್ತಾರೆ. ಪ್ರಸ್ತುತ ಪಾಕಿಸ್ತಾನ ತಂಡದ ಕೋಚ್ ಆಗಿರುವ ಸಕ್ಲೇನ್ ಮುಷ್ತಾಕ್ ಅಧಿಕಾರಾವಧಿ ಜನವರಿಯಲ್ಲಿ ಕೊನೆಗೊಳ್ಳುತ್ತಿತ್ತು. ಅವರು 49 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಆದರೂ ಅವರನ್ನು ನಿರ್ಲಕ್ಷಿಸಿ ವಿದೇಶಿ ಕೋಚ್ ನೇಮಕಕ್ಕೆ ಮುಂದಾಗಿದ್ದಾರೆ" ಎಂದು ರಾಜಾ ಆರೋಪಿಸಿದ್ದಾರೆ.
ಮೂರು ವರ್ಷಗಳಿಗೆ ಪಿಸಿಬಿ ಅಧ್ಯಕ್ಷರಾಗಿರುವ ಒಪ್ಪಂದವನ್ನು ಹೊಂದಿದ್ದ ರಾಹಾ ಮೊದಲ 12 ತಿಂಗಳ ಮಧ್ಯಂತರದಲ್ಲಿಯೇ ಈಗ ಅಧ್ಯಕ್ಷ ಸ್ಥಾನದಿಂದ ವಜಾಮಾಡಲಾಗಿದೆ.
"ಮೂರು ವರ್ಷಗಳ ಅವಧಿಯನ್ನು ಹೊಂದಿದ್ದಾಗ 12 ತಿಂಗಳಲ್ಲೇ ನಿಮ್ಮನ್ನು ಹೊರಗುಳಿಯಿರಿ ಎಂದಾಗ ನೋವಾಗುತ್ತದೆ. ರಾಜಕೀಯ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಲು ನನ್ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ. ಇದು ಪಾಕಿಸ್ತಾನ ಕ್ರಿಕೆಟ್‌ಗೆ ಯಾವುದೇ ಸಹಾಯ ಮಾಡುವುದಿಲ್ಲ ಎಂದು ರಾಜಾ ಹೇಳಿದ್ದಾರೆ.
ನಜಮ್ ಸೇಥಿ ಮತ್ತು ಅವರ ಜನರು ಪಿಸಿಬಿ ಕಚೇರಿಗೆ ಬಂದಾಗ, ನನಗೆ ನನ್ನ ವಸ್ತುಗಳನ್ನು ತೆಗೆದುಕೊಳ್ಳಲು ಸಹ ಅನುಮತಿ ನೀಡಲಿಲ್ಲ ಎಂದು ರಮೀಜ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications