For Quick Alerts
ALLOW NOTIFICATIONS  
For Daily Alerts
 

ರಣಜಿ ಸೆಮಿಫೈನಲ್‌: ಉತ್ತರ ಪ್ರದೇಶ ವಿರುದ್ಧ ಮುಂಬೈಗೆ ಮುನ್ನಡೆ, ಬೆಂಗಾಲ್ ವಿರುದ್ಧ ಮಧ್ಯಪ್ರದೇಶ ಮೇಲುಗೈ

Mumbai

ಬೆಂಗಳೂರಿನ ಆಲೂರು ಗ್ರೌಂಡ್‌ನಲ್ಲಿ ನಡೆಯುತ್ತಿರುವ ರಣಜಿ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಮುಂಬೈ 346 ರನ್‌ಗಳ ಮುನ್ನಡೆ ಸಾಧಿಸಿದೆ. ಮುಂಬೈ ಪರ ಅತ್ಯಂತ ತಾಳ್ಮೆಯುತ ಬ್ಯಾಟಿಂಗ್ ಆಡುತ್ತಿರುವ ಯಶಸ್ವಿ ಜೈಸ್ವಾಲ್ ಮತ್ತು ಅರ್ಮಾನ್ ಜಾಫರ್ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 393 ರನ್‌ಗಳನ್ನ ಕಲೆಹಾಕಿದ್ದ ಮುಂಬೈ ತಂಡವು ಎದುರಾಳಿ ಉತ್ತರ ಪ್ರದೇಶ ತಂಡವನ್ನ 180ರನ್‌ಗಳಿಗೆ ಆಲೌಟ್ ಮಾಡಿತು. ಉತ್ತರ ಪ್ರದೇಶ ಪರ ಮಾಧವ್ ಕೌಶಿಕ್ 38, ಶಿವಂ ಮಾವಿ 48ರನ್‌ಗಳಿಸಿದ್ದೇ ಹೆಚ್ಚು. ಮುಂಬೈ ಪರ ಮೋಹಿತ್ ಅವಸ್ತಿ, ತನುಷ್ ಕೊಟಾಯನ್, ತುಷಾರ್ ದೇಶಪಾಂಡೆ ತಲಾ ಮೂರು ವಿಕೆಟ್ ಪಡೆದಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್‌ಗಳ ಮುನ್ನಡೆ ಪಡೆದ ಮುಂಬೈ ಮೂರನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿದ್ದು, 346ರನ್‌ಗಳ ಲೀಡ್ ಪಡೆದುಕೊಂಡಿದೆ.

ಮುಂಬೈ ಪರ ನಾಯಕ ಪೃಥ್ವಿ ಶಾ 64 ರನ್‌ಗಳಿಸಿ ಔಟಾದ ಬಳಿಕ ತಾಳ್ಮೆಯ ಆಟವಾಡಿದ ಯಶಸ್ವಿ ಜೈಸ್ವಾಲ್ ಅಜೇಯ 35 ರನ್‌ ಕಲೆಹಾಕಿದ್ದು, ಅರ್ಮಾನ್ ಜಾಫರ್ ಅಜೇಯ 32 ರನ್ ಸಿಡಿಸಿದ್ದಾರೆ. ಪಂದ್ಯದಲ್ಲಿ ಬಹುತೇಕ ಮೇಲುಗೈ ಸಾಧಿಸಿರುವ ಮುಂಬೈ ತಂಡವು ಮತ್ತೊಂದು ಬಾರಿ ರಣಜಿ ಫೈನಲ್ ತಲುಪುವ ಹಾದಿಯಲ್ಲಿದೆ.

ಇನ್ನು ಆಲೂರು ಗ್ರೌಂಡ್‌ನಲ್ಲಿ ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಾಲ್ ವಿರುದ್ಧ ಮಧ್ಯಪ್ರದೇಶ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 341 ರನ್ ಕಲೆಹಾಕಿದ್ದ ಮಧ್ಯಪ್ರದೇಶ ಎದುರಾಳಿ ಬೆಂಗಾಲ್ ತಂಡವನ್ನ 273ರನ್‌ಗಳಿಗೆ ಆಲೌಟ್ ಮಾಡಿತು.

ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 68 ರನ್‌ಗಳ ಮುನ್ನಡೆ ಪಡೆದುಕೊಂಡಿರುವ ಮಧ್ಯಪ್ರದೇಶ ಮೂರನೇ ದಿನದಾಟದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 163ರನ್ ಕಲೆಹಾಕಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಮಿಂಚಿದ ರಜತ್ ಪಾಟೀದಾರ್ ಅಜೇಯ 63 ರನ್ ಕಲೆಹಾಕಿದ್ದು, ನಾಯಕ ಆದಿತ್ಯ ಶ್ರೀವಾಸ್ತವ ಅಜೇಯ 34 ರನ್ ಗಳಿಸಿದ್ದಾರೆ.

ಇದಕ್ಕೂ ಮೊದಲು ಆರಂಭಿಕ ಬ್ಯಾಟರ್‌ಗಳಾದ ಹಿಮಾಂಶು ಮಂತ್ರಿ 21, ಯಶ್ ದುಬೆ 12 ಗಳಿಸಿ ಔಟಾದ್ರೆ, ಶುಭಂ ಶರ್ಮಾ 22ರನ್‌ಗಳಿಸಿ ಗಾಯಗೊಂಡು ರಿಟೈರ್ಡ್ ನಾಟ್‌ ಔಟ್ ಆಗಿದ್ದಾರೆ. ಬೆಂಗಾಲ್ ಪರ ಮುಕೇಶ್ ಕುಮಾರ್ ಮತ್ತು ಪ್ರದೀಪ್ತ ತಲಾ ಒಂದು ವಿಕೆಟ್ ಪಡೆದರು. ಮಧ್ಯಪ್ರದೇಶ ಒಟ್ಟು 231 ರನ್‌ಗಳ ಮುನ್ನಡೆಯನ್ನ ಪಡೆದುಕೊಂಡಿದೆ.

Story first published: Friday, June 17, 2022, 9:48 [IST]
Other articles published on Jun 17, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+