Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ ಸೆಮಿಫೈನಲ್‌: ಬೆಂಗಾಲ್ ಗೆಲುವಿಗೆ 254ರನ್ ಬಾಕಿ, ಮುಂಬೈಗೆ 662ರನ್ ಬೃಹತ್ ಮುನ್ನಡೆ

Yashasvi jaiswal

ಬೆಂಗಳೂರಿನ ಆಲೂರು ಗ್ರೌಂಡ್‌ನಲ್ಲಿ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಅಂತಿಮ ದಿನದಾಟದಲ್ಲಿ ಬೆಂಗಾಲ್ ಗೆಲುವಿಗೆ 254ರನ್ ಬಾಕಿ ಉಳಿದಿದೆ. ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ದಿನದಾಟದಂತ್ಯಕ್ಕೆ ಬೆಂಗಾಲ್ 4 ವಿಕೆಟ್ ಕಳೆದುಕೊಂಡು 96ರನ್ ಕಲೆಹಾಕಿದೆ.

ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಬೆಂಗಾಲ್ ತನ್ನ ಟಾಪ್ ಆರ್ಡರ್‌ನ ಪ್ರಮುಖ ನಾಲ್ಕು ವಿಕೆಟ್‌ಗಳನ್ನ ಕಳೆದುಕೊಂಡಿದ್ದು, ಗೆಲುವಿಗೆ ಇನ್ನೂ 254ರನ್ ದಾಖಲಿಸಬೇಕಿದೆ. ಬೆಂಗಾಲ್ ಪರ ನಾಯಕ ಅಭಿಮನ್ಯು ಈಶ್ವರನ್ ಅಜೇಯ 52ರನ್ ಕಲೆಹಾಕುವ ಮೂಲಕ ಅಂತಿಮ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದು, ಮಜುಂದಾರ್ 8ರನ್‌ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು ಬೆಂಗಾಲ್ ಪರ ಅಭಿಷೇಕ್ ರಾಮನ್ 0, ಸುದಿಪ್ ಕುಮಾರ್ 19, ಅಭಿಷೇಕ್ ಪೊರೆಲ್ 7, ಮನೋಜ್ ತಿವಾರಿ 7 ರನ್‌ ಕಲೆಹಾಕಿದ್ದಾರೆ. ಮಧ್ಯಪ್ರದೇಶ ಪರ ಕುಮಾರ್ ಕಾರ್ತಿಕೇಯ 3 ವಿಕೆಟ್ ಕಬಳಿಸಿದ್ದು, ಸರ್ನಾಶ್ ಜೈನ್ 1 ವಿಕೆಟ್ ಪಡೆದರು.

ಇನ್ನು ಬೆಂಗಳೂರಿನ ಜಸ್ಟ ಕ್ರಿಕೆಟ್ ಅಕಾಡೆಮಿ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಎರಡನೇ ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಮುಂಬೈ ಬೃಹತ್ 662ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ.

ಮುಂಬೈ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಪೃಥ್ವಿ ಶಾ 64, ಯಶಸ್ವಿ ಜೈಸ್ವಾಲ್ 181, ಅಮಾನ್ ಜಾಫರ್ 127, ಸುವೆದ್ ಪರ್ಕರ್ 22ರನ್‌ಗಳ ನೆರವಿನಿಂದ ಮುಂಬೈ ನಾಲ್ಕು ವಿಕೆಟ್ ನಷ್ಟಕ್ಕೆ 449ರನ್ ಕಲೆಹಾಕಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್‌ಗಳ ಮುನ್ನಡೆ ಪಡೆದ ಮುಂಬೈ ಮೂರನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿದ್ದು, 346ರನ್‌ಗಳ ಲೀಡ್ ಪಡೆದುಕೊಂಡಿತ್ತು. ನಾಲ್ಕನೇ ದಿನದಾಟದಲ್ಲೂ ಜೈಸ್ವಾಲ್ ಮತ್ತು ಅರ್ಮಾನ್ ಜಾಫರ್ ಶತಕ ಸಿಡಿಸುವ ಮೂಲಕ ತಂಡದ ಲೀಡ್ ಅನ್ನೂ 600ರ ಗಡಿ ದಾಟಿದ್ದಾರೆ. ಅಂತಿಮ ದಿನದಾಟದಲ್ಲಿ ಉತ್ತರ ಪ್ರದೇಶ ಬ್ಯಾಟಿಂಗ್ ಇಳಿದರೂ ಇಷ್ಟು ದೊಡ್ಡ ಮೊತ್ತವನ್ನ ಚೇಸ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇನ್ನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಪಡೆದಿರುವ ಮುಂಬೈ ಫೈನಲ್ ಎಂಟ್ರಿ ಬಹುತೇಕ ಖಚಿತಗೊಂಡಿದೆ.

ಪಾಕಿಸ್ತಾನ್ ಆಟಗಾರರಿಗೆ ಅವಕಾಶ ಸಿಗ್ತಿಲ್ಲ ! | *Cricket | OneIndia Kannada

Story first published: Saturday, June 18, 2022, 9:44 [IST]
Other articles published on Jun 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+