For Quick Alerts
ALLOW NOTIFICATIONS  
For Daily Alerts
 

ರಣಜಿ ಸೆಮಿಫೈನಲ್: ಚೇತೇಶ್ವರ ಪೂಜಾರ ದಾಖಲೆ ಸರಿಗಟ್ಟಿದ ಯಶಸ್ವಿ ಜೈಸ್ವಾಲ್

yashasvi jaiswal

ಬೆಂಗಳೂರಿನಲ್ಲಿ ನಡೆಯುತ್ತಿರುವ ರಣಜಿ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮುಂಬೈನ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮುಜುಗರಕ್ಕೊಳಗಾದ ದಾಖಲೆ ಮಾಡಿದ್ದಾರೆ. ಉತ್ತರ ಪ್ರದೇಶ ವಿರುದ್ಧ ಸೆಮಿಫೈನಲ್ ಪಂದ್ಯದ ಮೂರನೇ ದಿದನದಾಟದಲ್ಲಿ ಜೈಸ್ವಾಲ್ ಮೊದಲ ರನ್ ಕಲೆಹಾಕಲು 54 ಎಸೆತಗಳನ್ನು ತೆಗೆದುಕೊಂಡಿದ್ದಾರೆ.

114 ಎಸೆತಗಳಲ್ಲಿ ಅಜೇಯ 35 ರನ್ ಕಲೆಹಾಕಿರುವ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿದೆ. ಜೈಸ್ವಾಲ್‌ಗೆ ಸಾಥ್ ನೀಡಿರುವ ಅರ್ಮಾನ್ ಜಾಫರ್ ಅಜೇಯ 32 ರನ್ ಸಿಡಿಸಿದ್ದಾರೆ. ಪಂದ್ಯದಲ್ಲಿ ಬಹುತೇಕ ಮೇಲುಗೈ ಸಾಧಿಸಿರುವ ಮುಂಬೈ ತಂಡವು ಮತ್ತೊಂದು ಬಾರಿ ರಣಜಿ ಫೈನಲ್ ತಲುಪುವ ಹಾದಿಯಲ್ಲಿದೆ.

ಚೇತೇಶ್ವರ ಪೂಜಾರ ದಾಖಲೆ ಸರಿಗಟ್ಟಿದ ಜೈಸ್ವಾಲ್

ಚೇತೇಶ್ವರ ಪೂಜಾರ ದಾಖಲೆ ಸರಿಗಟ್ಟಿದ ಜೈಸ್ವಾಲ್

ಮುಂಬೈ ಪರ ನಾಯಕ ಪೃಥ್ವಿ ಶಾ 64 ರನ್‌ಗಳಿಸಿ ಔಟಾದ ಬಳಿಕ ತಾಳ್ಮೆಯ ಆಟವಾಡಿದ ಯಶಸ್ವಿ ಜೈಸ್ವಾಲ್ ಮೊದಲ ರನ್ ಕಲೆಹಾಕಲು ಸಾಕಷ್ಟು ಸಮಯವನ್ನೇ ತೆಗೆದುಕೊಂಡರು. 54 ಎಸೆತಗಳಲ್ಲಿ ಮೊದಲ ರನ್ ದಾಖಲಿಸುವ ಮೂಲಕ ಟೀಂ ಇಂಡಿಯಾ ಬ್ಯಾಟರ್ ಚೇತೇಶ್ವರ ಪೂಜಾರ ದಾಖಲೆಗೆ ಸಮನಾದ್ರು.

ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಈ ರೀತಿಯ ನಿಧಾನಗತಿಯ ಇನ್ನಿಂಗ್ಸ್ ಆಡುವುದರಲ್ಲಿ ಎತ್ತಿದ ಕೈ. ಆದ್ರೀಗ ಚೇತೇಶ್ವರ ಪೂಜಾರ ದಾಖಲೆಯನ್ನ ಸರಗಿಗಟ್ಟುವ ಮೂಲಕ ಜೈಸ್ವಾಲ್ ಹೊರಹೊಮ್ಮಿದ್ದಾರೆ. ಜೈಸ್ವಾಲ್ ಕಳೆದ ಎಂಟು ವರ್ಷಗಳಲ್ಲಿ ಪ್ರಥಮ ದರ್ಜೆ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲು 50ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಭಾರತದ ಪರ ಆಡುತ್ತಿರುವಾಗ ಪೂಜಾರ 54 ನೇ ಎಸೆತದಲ್ಲಿ ಮೊದಲ ರನ್ ದಾಖಲಿಸಿದ್ರು.

Ind vs Eng ಟೆಸ್ಟ್: ಯುಕೆಗೆ ಪ್ರಯಾಣ ಬೆಳೆಸಿದ ಭಾರತ ತಂಡದ ಜೊತೆ ರೋಹಿತ್ ಶರ್ಮಾ ಹೋಗಿಲ್ಲವೇಕೆ?

ಮೊದಲ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಿಡಿಸಿದ್ದ ಜೈಸ್ವಾಲ್

ಮೊದಲ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಿಡಿಸಿದ್ದ ಜೈಸ್ವಾಲ್

ಯಶಸ್ವಿ ಜೈಸ್ವಾಲ್ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 227 ಎಸೆತಗಳಲ್ಲಿ 100 ರನ್ ದಾಖಲಿಸಿದರು. ಇದು ಕೆಂಪು ಚೆಂಡಿನ ಪಂದ್ಯದಲ್ಲಿ ಮೊದಲ ಶತಕವಾಗಿದ್ದು, ಅದೂ ಕೂಡ ಕೇವಲ ಎರಡನೇ ಪ್ರಥಮ ದರ್ಜೆ ಪಂದ್ಯದಲ್ಲಿ ಹೊರಬಂದಿರುವುದು ವಿಶೇಷ.

ಇನ್ನು ಜೈಸ್ವಾಲ್ 98 ನಿಮಿಷಗಳಲ್ಲಿ ತನ್ನ ಮೊದಲ ರನ್ ಕಲೆಹಾಕುವ ಮೂಲಕವೇ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಎರಡನೇ ಸ್ಥಾನದಲ್ಲಿದ್ದರು. ಅವರು 2013 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 103 ನಿಮಿಷಗಳಲ್ಲಿ ತಮ್ಮ ಮೊದಲ ರನ್ ಗಳಿಸಿದರು. ಬರೋಡಾದ ಶೇಖರ್ ಜೋಶಿ ಅಗ್ರಸ್ಥಾನದಲ್ಲಿದ್ದಾರೆ. 2006 ರಲ್ಲಿ ಬಂಗಾಳ ವಿರುದ್ಧ ಅವರ ಮೊದಲ ರನ್ 120 ನಿಮಿಷಗಳಲ್ಲಿ ಬಂದಿತು.

Ind vs IRE: ಟಿ20 ಸರಣಿ ಬೆನ್ನಲ್ಲೇ ಮಾಜಿ ನಾಯಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ

ಐಪಿಎಲ್‌ನಲ್ಲಿ 19 ಎಸೆತಗಳಲ್ಲಿ ಅರ್ಧಶತಕ

ಐಪಿಎಲ್‌ನಲ್ಲಿ 19 ಎಸೆತಗಳಲ್ಲಿ ಅರ್ಧಶತಕ

ಪ್ರಥಮ ದರ್ಜೆ ಪಂದ್ಯಗಳಲ್ಲಿ, ರಣಜಿ ಟೂರ್ನಿಯಲ್ಲಿ ತಾಳ್ಮೆಯುತ ಬ್ಯಾಟಿಂಗ್ ಆಡುವ ಸಾಮರ್ಥ್ಯ ಹೊಂದಿರುವ ಯಶಸ್ವಿ ಜೈಸ್ವಾಲ್‌ಗೆ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಲು ಸಹ ಬರುತ್ತದೆ. ಇದಕ್ಕೆ ಐಪಿಎಲ್ 2021ರ ಸಿಎಸ್‌ಕೆ ವಿರುದ್ಧದ ಪಂದ್ಯವು ಸಾಕ್ಷಿಯಾಗಿದೆ.

ರಾಜಸ್ತಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿದಿದ್ದ ಜೈಸ್ವಾಲ್‌ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 19 ಎಸೆತಗಳಲ್ಲಿ ಅರ್ಧಶತಕ ದಾಖಲಿಸುವ ಮೂಲಕ ದಾಖಲೆ ಮಾಡಿದ್ದಾರೆ.

ಉತ್ತರ ಪ್ರದೇಶ ವಿರುದ್ಧ ಮೇಲುಗೈ ಸಾಧಿಸಿರುವ ಮುಂಬೈ

ಉತ್ತರ ಪ್ರದೇಶ ವಿರುದ್ಧ ಮೇಲುಗೈ ಸಾಧಿಸಿರುವ ಮುಂಬೈ

ಬೆಂಗಳೂರಿನ ಆಲೂರು ಗ್ರೌಂಡ್‌ನಲ್ಲಿ ನಡೆಯುತ್ತಿರುವ ರಣಜಿ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಮುಂಬೈ 346 ರನ್‌ಗಳ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 393 ರನ್‌ಗಳನ್ನ ಕಲೆಹಾಕಿದ್ದ ಮುಂಬೈ ತಂಡವು ಎದುರಾಳಿ ಉತ್ತರ ಪ್ರದೇಶ ತಂಡವನ್ನ 180ರನ್‌ಗಳಿಗೆ ಆಲೌಟ್ ಮಾಡಿತು. ಉತ್ತರ ಪ್ರದೇಶ ಪರ ಮಾಧವ್ ಕೌಶಿಕ್ 38, ಶಿವಂ ಮಾವಿ 48ರನ್‌ಗಳಿಸಿದ್ದೇ ಹೆಚ್ಚು. ಮುಂಬೈ ಪರ ಮೋಹಿತ್ ಅವಸ್ತಿ, ತನುಷ್ ಕೊಟಾಯನ್, ತುಷಾರ್ ದೇಶಪಾಂಡೆ ತಲಾ ಮೂರು ವಿಕೆಟ್ ಪಡೆದಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್‌ಗಳ ಮುನ್ನಡೆ ಪಡೆದ ಮುಂಬೈ ಮೂರನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿದ್ದು, 346ರನ್‌ಗಳ ಲೀಡ್ ಪಡೆದುಕೊಂಡಿದೆ. ಮುಂಬೈ ಪರ ನಾಯಕ ಪೃಥ್ವಿ ಶಾ 64 ರನ್‌ಗಳಿಸಿ ಔಟಾದ ಬಳಿಕ ತಾಳ್ಮೆಯ ಆಟವಾಡಿದ ಯಶಸ್ವಿ ಜೈಸ್ವಾಲ್ ಅಜೇಯ 35 ರನ್‌ ಕಲೆಹಾಕಿದ್ದು, ಅರ್ಮಾನ್ ಜಾಫರ್ ಅಜೇಯ 32 ರನ್ ಸಿಡಿಸಿದ್ದಾರೆ.

Story first published: Thursday, June 16, 2022, 22:18 [IST]
Other articles published on Jun 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+