Ranji Trophy: ಗಾಯಗೊಂಡರು ಛಲ ಬಿಡದ ಹನುಮ ವಿಹಾರಿ: ಒಂದೇ ಕೈನಲ್ಲಿ ಬ್ಯಾಟಿಂಗ್!

ಹನುಮ ವಿಹಾರಿ ಕ್ರಿಕೆಟ್ ಮೇಲಿನ ತಮ್ಮ ಬದ್ಧತೆಗೆ ಮತ್ತೊಮ್ಮೆ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಬಲಗೈ ಆಟಗಾರ ಹನುಮ ವಿಹಾರಿ, ರಣಜಿ ಪಂದ್ಯದಲ್ಲಿ ಎಡಗೈ ಬ್ಯಾಟರ್ ಆಗಿ ಬದಲಾದರು, ಅದೂ ಒಂದೇ ಕೈನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಅಚ್ಚರಿ ಮೂಡಿಸಿದರು.
ಇಂದೋರ್ ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಂಧ್ರ ಮತ್ತು ಮಧ್ಯಪ್ರದೇಶದ ನಡುವಿನ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹನುಮ ವಿಹಾರಿ ಒಂದೇ ಕೈನಲ್ಲಿ ಬ್ಯಾಟಿಂಗ್ ಮಾಡಿ ಗಮನ ಸೆಳೆದರು.
ಆಂಧ್ರ ತಂಡದ ನಾಯಕನಾಗಿರುವ ಹನುಮ ವಿಹಾರಿ ಪಂದ್ಯದ ಮೊದಲನೇ ದಿನ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಗಾಯಗೊಂಡರು. ಮೊದಲನೇ ದಿನ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಮಧ್ಯಪ್ರದೇಶದ ವೇಗಿ ಆವೇಶ್ ಖಾನ್ ಬೌಲಿಂಗ್‌ನಲ್ಲಿ ಮಣಿಕಟ್ಟಿಗೆ ಗಾಯಮಾಡಿಕೊಂಡರು. ಸ್ಕ್ಯಾನಿಂಗ್‌ನಲ್ಲಿ ಅವರ ಬಲಗೈ ಮಣಿಕಟ್ಟು ಮುರಿದಿರುವುದು ತಿಳಿಯಿತು.
ಎರಡನೇ ದಿನ ಆಂಧ್ರ 9 ವಿಕೆಟ್ ಕಳೆದುಕೊಂಡಿದ್ದಾಗ ಹನುಮ ವಿಹಾರಿ ಮತ್ತೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಬಲಗೈ ಮಣಕಟ್ಟಿಗೆ ಗಾಯವಾಗಿದ್ದರಿಂದ ಎಡಗೈ ಬ್ಯಾಟರ್ ಆಗಿ ಬದಲಾದರು, ಅದೂ ಒಂದೇ ಕೈನಲ್ಲಿ ಬ್ಯಾಟಿಂಗ್ ಮಾಡಿದರು. ಆವೇಶ್ ಖಾನ್ ಎಸೆತದಲ್ಲಿ ಒಂದೇ ಕೈನಲ್ಲಿ ಬೌಂಡರಿ ಬಾರಿಸಿ ಗಮನ ಸೆಳೆದರು.
27 ರನ್ ಗಳಿಸಿದ ವಿಹಾರಿ
ಒಂದೇ ಕೈನಲ್ಲಿ ಆಡಿದರೂ ಹನುಮ ವಿಹಾರಿ ತಂಡಕ್ಕಾಗಿ ಅಮೂಲ್ಯ ರನ್‌ಗಳನ್ನು ಗಳಿಸಿದರು. 57 ಎಸೆತಗಳನ್ನು ಎದುರಿಸಿದ ಅವರು 5 ಬೌಂಡರಿ ಸಹಿತ 27 ರನ್ ಗಳಿಸಿದರು. ವೇಗದ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿದ ಅವರ ಆಟಕ್ಕೆ ಸಹ ಆಟಗಾರರು ಚಪ್ಪಾಳೆ ಹೊಡೆಯುವ ಮೂಲಕ ಗೌರವ ಸಲ್ಲಿಸಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಆಂಧ್ರ ಪ್ರದೇಶ 379 ರನ್‌ಗಳಿಗೆ ಆಲೌಟ್ ಆಯಿತು. ರಿಕಿ ಭುಯಿ 149 ಮತ್ತು ಕರಣ್ ಶಿಂಧೆ 110 ರನ್ ಗಳಿಸುವ ಮೂಲಕ ಉತ್ತಮ ಮೊತ್ತ ಕಲೆಹಾಕಲು ಕಾರಣವಾದರು.

ಮೆಚ್ಚುಗೆಯ ಮಹಾಪೂರ
ಹನುಮ ವಿಹಾರಿಗೆ ಇರುವ ಆಟದ ಮೇಲಿನ ಬದ್ಧತೆಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಹಲವು ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಅವರ ಆಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದಿನೇಶ್ ಕಾರ್ತಿಕ್ ಟ್ವೀಟ್ ಮಾಡಿ, ಬಲಗೈಗೆ ಗಾಯವಾಗಿದ್ದರೂ ಎಡಗೈನಲ್ಲಿ ಬ್ಯಾಟಿಂಗ್, ಅದೂ ಒಂದೇ ಕೈನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಧೈರ್ಯ ಮತ್ತೊಂದು ಹಂತವನ್ನು ತಲುಪಿದೆ ಎಂದು ಶ್ಲಾಘಿಸಿದ್ದಾರೆ.
ಹನುಮ ವಿಹಾರಿ ಒಬ್ಬ ಯೋಧ ಎಂದು ಮುಫಾದ್ದಲ್ ವೋಹ್ರಾ ಹೊಗಳಿದ್ದಾರೆ. ಅದೂ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಕೈನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಅದರಲ್ಲೂ ಒಂದು ಕೈ ಗಾಯಗೊಂಡಿದ್ದಾಗ ಇನ್ನೂ ಹೆಚ್ಚಿನ ಅಪಾಯ ಇರುತ್ತದೆ ಆದರೂ ತಂಡಕ್ಕಾಗಿ ಹನುಮ ವಿಹಾರಿ ಯೋಧನಂತೆ ಆಡಿದರು ಎಂದು ಹೊಗಳಿದ್ದಾರೆ.

ಟೀಂ ಇಂಡಿಯಾದಲ್ಲಿ ಇಲ್ಲ ಅವಕಾಶ
ಕಳೆದ ವರ್ಷದವರೆಗೂ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಹನುಮ ವಿಹಾರಿ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಬಂದ ನಂತರ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೂಡ ವಿಹಾರಿ ಏಟು ಬಿದ್ದರೂ ತಮ್ಮ ಆಟವನ್ನು ಮುಂದುವರೆಸಿದ್ದರು.
ಭಾರತಕ್ಕಾಗಿ 16 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 28 ಇನ್ನಿಂಗ್ಸ್‌ಗಳಲ್ಲಿ 33.56 ಸರಾಸರಿಯಲ್ಲಿ 839 ರನ್ ಗಳಿಸಿದ್ದಾರೆ. 1 ಶತಕ ಮತ್ತು 5 ಅರ್ಧಶತಕಗಳನ್ನು ಬಾರಿಸಿ ಗಮನ ಸೆಳೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications