ನಾಯಕ ವಿನಯ್ ಗೆ 100ನೇ ಪಂದ್ಯ, ಕರ್ನಾಟಕ ಉತ್ತಮ ಪ್ರದರ್ಶನ

ವಿದರ್ಭ, ನವೆಂಬರ್ 13: ನಾಯಕ ವಿನಯ್ ಕುಮಾರ್ ಅವರ 100ನೇ ರಣಜಿ ಪಂದ್ಯದಲ್ಲಿ ವಿದರ್ಭ ವಿರುದ್ಧ ಕರ್ನಾಟಕದ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ವಿದರ್ಭದ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 307 ಸ್ಕೋರಿಗೆ ಆಲೌಟ್ ಆಗಿದೆ.
ಆರಂಭಿಕ ಆಘಾತ ಅನುಭವಿಸಿದ ವಿದರ್ಭ 26 ಸ್ಕೋರಿಗೆ ನಾಯಕ ಫೈಯಾಜ್ ಫಜಲ್ (22) ಹಾಗೂ ಸಂಜಯ್ ರಾಮಸ್ವಾಮಿ (9) ವಿಕೆಟ್ ಕಳೆದುಕೊಂಡಿದು. ಅಭಿಮನ್ಯು ಮಿಥುನ್ ಈ ಎರಡು ವಿಕೆಟ್ ಅಲ್ಲದೆ ಮೂರು ವಿಕೆಟ್ ಕಿತ್ತರು.
ಕನ್ನಡಿಗರ ಪ್ರತಿರೋಧ: ಕರ್ನಾಟಕ ತೊರೆದು ವಿದರ್ಭ ಪರ ಆಡುತ್ತಿರುವ ಗಣೇಶ್ ಸತೀಶ್ ಅವರು 57ರನ್ ಗಳಿಸಿದ್ದಲ್ಲದೆ, ಅನುಭವಿ ಆಟಗಾರ ವಾಸೀಂ ಜಾಫರ್ (41) ಜತೆ ಉತ್ತಮ ಜೊತೆಯಾಟ ಪ್ರದರ್ಶಿಸಿದರು.
ಮಿಕ್ಕಂತೆ ವಿಕೆಟ್ ಕೀಪರ್ ವಾಡ್ಕರ್, ಶ್ರೀಕಾಂತ್ ವಾಘ್ 57 ಹಾಗೂ ವಾಘರೆ ಅವರು 35ರನ್ ಗಳಿಸಿ ತಂಡದ ಮೊತ್ತವನ್ನು 300ರನ್ ಗಡಿ ದಾಟಿಸಿದರು.
ಕರ್ನಾಟಕ ಪರ ನಾಯಕ ವಿನಯ್ ಕುಮಾರ್ 2, ಸ್ಪಿನ್ನರ್ ಜೆ ಸುಚಿತ್ 4 ಹಾಗೂ ಸ್ಟುವರ್ಟ್ ಬಿನ್ನಿ 1 ವಿಕೆಟ್ ಪಡೆದರು.
ಕರ್ನಾಟಕ್ಕೆ ಆರಂಭಿಕ ಆಘಾತ: ಆರ್ ಸಮರ್ಥ್ ಅವರು ಕೇವಲ 1 ರನ್ ಗಳಿಸಿ ಔಟಾಗಿದ್ದು, ನಿಶ್ಚಲ್ ಹಾಗೂ ಸಿದ್ದಾರ್ಥ್ ಕೆವಿ ಜೊತೆಯಾಟ ಪ್ರದರ್ಶಿಸಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications