ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 21 ವಿಕೆಟ್ ಪತನ
ಬೆಂಗಳೂರು, ಫೆ.25: ಪ್ರಸಕ್ತ ರಣಜಿ ಋತುವಿನಲ್ಲಿ ಅಜೇಯವಾಗಿ ಉಳಿದುಕೊಂಡು ಸೆಮಿಫೈನಲ್ ಹಂತ ತಲುಪಿದ್ದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಉಪಾಂತ್ಯದಲ್ಲಿ ಬಲಿಷ್ಠ ಮುಂಬೈ ತಂಡದ ವಿರುದ್ಧ ಮೊದಲ ಇನ್ನಿಂಗ್ಸ್ ಲೀಡ್ ಪಡೆದುಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ಸೆಮೀಸ್ ಪಂದ್ಯದಲ್ಲಿ ಒಂದೇ ದಿನ 21 ವಿಕೆಟ್ ಗಳು ಉದುರಿವೆ.
ಕರ್ನಾಟಕ 60.2 ಓವರ್ ಗಳಲ್ಲಿ 202 ಅಲ್ಪ ಸ್ಕೋರಿಗೆ ಆಲೌಟ್ ಆಯಿತು. 202 ಬೆನ್ನತ್ತಿದ ಮುಂಬೈ ತಂಡಕ್ಕೆ ಕರ್ನಾಟಕದ ನಾಯಕ ವಿನಯ್ ಕುಮಾರ್ ಮಾರಕವಾಗಿ ಪರಿಣಮಿಸಿದರು. [ಮುಂಬೈ ಮಣಿಸಿದ ಜೋಶಿ 'ಕಾಶ್ಮೀರಿ' ಹುಡುಗರು]
ವಿನಯ್ ಕುಮಾರ್ 8-1-20-6 ವಿಕೆಟ್ ಕಿತ್ತು ಮುಂಬೈ ತಂಡದ ಬ್ಯಾಟಿಂಗ್ ಶಕ್ತಿಯನ್ನು ಅಲುಗಾಡಿಸಿಬಿಟ್ಟರು.ಕೇವಲ 15.3 ಓವರ್ಸ್ 44 ಸ್ಕೋರಿಗೆ ಮುಂಬೈ ಸರ್ವಪತನ ಕಂಡಿದೆ. [ಪ್ರಥಮ ದರ್ಜೆ ಕ್ರಿಕೆಟ್ ಟಾಪ್ 10 ಪಟ್ಟಿಯಲ್ಲಿ ರಾಹುಲ್]

158ರನ್ ಮುನ್ನಡೆ ಪಡೆದುಕೊಂಡ ವಿನಯ್ ಪಡೆ ದಿನದ ಅಂತ್ಯಕ್ಕೆ 10 ರನ್ನಿಗೆ 2 ವಿಕೆಟ್ ಕಳೆದುಕೊಂಡಿದೆ. ಒಟ್ಟಾರೆ, ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಸೇರಿ 21ವಿಕೆಟ್ ಗಳು ಒಂದೇ ದಿನ ಉದುರಿವೆ. ಮುಂಬೈನ ಅಭಿಶೇಕ್ ನಾಯರ್ ಗಾಯಗೊಂಡಿದ್ದರಿಂದ ಕಣಕ್ಕಿಳಿಯಲಿಲ್ಲ.
ಸಂಕ್ಷಿಪ್ತ ಸ್ಕೋರ್
* ಟಾಸ್: ಕರ್ನಾಟಕ ಗೆದ್ದು, ಮೊದಲು ಬ್ಯಾಟಿಂಗ್ ಆಯ್ಕೆ
* ಮೈದಾನ: ಚಿನ್ನಸ್ವಾಮಿ ಕ್ರೀಡಾಂಗಣ, ಫೆಬ್ರವರಿ 25 (ಬುಧವಾರ) -ಮಾರ್ಚ್ 1
* ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರ ಪ್ರಸಾರ ಬೆಳಗ್ಗೆ 9.30ರಿಂದ
ಕರ್ನಾಟಕ : ಮೊದಲ ಇನ್ನಿಂಗ್ಸ್ 202 ಆಲೌಟ್ 60.2 ಓವರ್ಸ್
(ರಾಬಿನ್ ಉತ್ತಪ್ಪ 60, ಮನೀಷ್ ಪಾಂಡೆ 34, ಕರುಣ್ ನಾಯರ್ 49 ಅಜೇಯ, ಶಾರ್ದೂಲ್ 61ಕ್ಕೆ 4, ವಿಲ್ಕಿನ್ ಮೋಟಾ 18ಕ್ಕೆ 2)
ಎರಡನೇ ಇನ್ನಿಂಗ್ಸ್: 4 ಓವರ್ ಗಳಲ್ಲಿ 10/2 ಇನ್ನಿಂಗ್ಸ್ ಜಾರಿಯಲ್ಲಿದೆ
ಮುಂಬೈ ಮೊದಲ ಇನ್ನಿಂಗ್ಸ್
(ಶ್ರೇಯಸ್ ಐಯರ್ 15. ಸೂರ್ಯ ಕುಮಾರ್ ಯಾದವ್ 12, ವಿನಯ್ ಕುಮಾರ್ 20ಕ್ಕೆ6, ಎ ಶ್ರೀನಾಥ್ 1ಕ್ಕೆ 2, ಮಿಥುನ್ ಎ 23ಕ್ಕೆ 1)
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications