ಪ್ರಥಮ ದರ್ಜೆ ಕ್ರಿಕೆಟ್ ಟಾಪ್ 10 ಪಟ್ಟಿಯಲ್ಲಿ ರಾಹುಲ್

Posted By:

ಬೆಂಗಳೂರು, ಜ.30: ಕರ್ನಾಟಕದ ಕ್ರಿಕೆಟ್ ಕಲಿ ಕೆಎಲ್ ರಾಹುಲ್ ಅವರು ಟೀಂ ಇಂಡಿಯಾ ಪರ ಶತಕ ಬಾರಿಸಿದ್ದು ಅಮೋಘ ದಾಖಲೆಯಾಯಿತು. ಈಗ ಪ್ರಥಮ ದರ್ಜೆಯಲ್ಲಿ ಪ್ರಥಮ ಬಾರಿಗೆ ತ್ರಿಶತಕ ದಾಖಲಿಸಿದ್ದು ಸಾರ್ವಕಾಲಿಕ ಟಾಪ್ 10 ಪಟ್ಟಿಗೆ ಅವರನ್ನು ಸೇರಿಸಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತರಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ತ್ರಿಶತಕ ದಾಖಲಿಸಿದ ಲೋಕೇಶ್ ರಾಹುಲ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಮುನ್ನೂರು ರನ್ ಗಡಿ ದಾಟಿದ ಪ್ರಪ್ರಥಮ ಕನ್ನಡಿಗ ಎಂಬ ಕೀರ್ತಿ ರಾಹುಲ್ ಗೆ ಸಲ್ಲುತ್ತದೆ. 11 ಗಂಟೆಗಳ ಸುದೀರ್ಘ ಇನ್ನಿಂಗ್ಸ್ ಆಡಿದ ರಾಹುಲ್ 337ರನ್ ಗಳಿಸಿ ಔಟಾದರು.

Highest first-class scores by Indian batsmen (Top 10)

ಇಡೀ ವಿಶ್ವದ ಪ್ರಥಮ ದರ್ಜೆ ಕ್ರಿಕೆಟ್ ದಿಗ್ಗಜರತ್ತ ಕಣ್ಣು ಹಾಯಿಸಿದರೆ ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ ಎಲ್ಲರಿಗಿಂತ ಮುಂದಿದ್ದಾರೆ. 1994ರಲ್ಲಿ ವಾರ್ವಿಕ್ ಷೈರ್ ಪರ ಆಡುತ್ತಾ ಅಜೇಯ 501 ರನ್ ಬಾರಿಸಿದ್ದರು. 400 ರನ್ ಗಡಿಯನ್ನು 9ಕ್ಕೂ ಅಧಿಕ ಮಂದಿ ದಾಟಿದ್ದಾರೆ. ಭಾರತದಲ್ಲಿ ಬಿಬಿ ನಿಂಬಾಳ್ಕರ್ ಅವರು ಮಾತ್ರ 400ರನ್ ಗಡಿ ದಾಟಿ 443ರನ್ ಬಾರಿಸಿ ಅಜೇಯರಾಗಿ ಉಳಿಸಿದ್ದರು.

ವಿಶ್ವದ ಅತಿ ಹೆಚ್ಚಿನ ವೈಯಕ್ತಿಕ ಸ್ಕೋರ್: 501*-ಬ್ರಿಯಾನ್ ಲಾರಾ (ವಾರ್ವಿಕ್ ಷೈರ್) ವಾರ್ವಿಕ್ ಷೈರ್ vs ಡರ್ಹಾಮ್, ಬರ್ಮಿಂಗ್ ಹ್ಯಾಂ 1994

ಪ್ರಥಮ ದರ್ಜೆಯಲ್ಲಿ ಭಾರತದ ಟಾಪ್ ವೈಯಕ್ತಿಕ ಸ್ಕೋರರ್ (ಟಾಪ್ 10)
* 443 (ಅಜೇಯ)- ಬಿಬಿ ನಿಂಬಾಳ್ಕರ್
* 377- ಸಂಜಯ್ ಮಂಜೇಕ್ರರ್
* 366- ಎಂವಿ ಶ್ರೀಧರ್
* 359 (ಅಜೇಯ) - ವಿಜಯ್ ಮರ್ಚೆಂಟ್
* 353- ವಿವಿಎಸ್ ಲಕ್ಷ್ಮಣ್
* 352- ಚೇತೇಶ್ವರ್ ಪೂಜಾರಾ
* 340- ಸುನಿಲ್ ಗವಾಸ್ಕರ್
* 337- ಕೆಎಲ್ ರಾಹುಲ್
* 331- ರವೀಂದ್ರ ಜಡೇಜ
* 327- ಕೇಧಾರ್ ಜಾಧವ್

ಒನ್ ಒಂಡಿಯಾ ಸುದ್ದಿ

Story first published: Friday, January 30, 2015, 19:33 [IST]
Other articles published on Jan 30, 2015
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ