ರವಿಚಂದ್ರನ್ ಅಶ್ವಿನ್ ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪ್ರದಾನ
ಮುಂಬೈ, ಮೇ 25 : ಸಿಯೆಟ್ ಕ್ರಿಕೆಟ್ ರೇಟಿಂಗ್‌ನ ಅಂತಾರಾಷ್ಟ್ರೀಯ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾಜನರಾಗಿದ್ದಾರೆ.
ಇಲ್ಲಿನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಬುಧವಾರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಭಾರತ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಮತ್ತು ಆರ್.ಪಿ.ಜಿ ಎಂಟರ್‌ಪ್ರೈಸಸ್ ನ ಅಧ್ಯಕ್ಷ ಹರ್ಷ ಗೋಯೆಂಕಾ ಅವರು ಅಶ್ವಿನ್ ಗೆ ಪ್ರಶಸ್ತಿ ಪ್ರದಾನ ಮಾಡಿದರು.[ಡೇಲ್ ಸ್ಟೇನ್ ದಾಖಲೆ ಮುರಿದ ಆರ್ ಅಶ್ವಿನ್]

ನ್ಯೂಜಿಲ್ಯಾಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಒಟ್ಟು 13 ಟೆಸ್ಟ್ ಪಂದ್ಯಗಳ ಪೈಕಿ 10ರಲ್ಲಿ ಭಾರತ ಗೆಲುವು ಸಾಧಿಸಲು ಅಶ್ವಿನ್ ಅವರ ಪಾತ್ರ ಹೆಚ್ಚಿದೆ. ಟೆಸ್ಟ್ ನಲ್ಲಿ ಒಂದು ವರ್ಷದಲ್ಲಿ ಬರೋಬ್ಬರಿ ಅಶ್ವಿನ್ 99 ವಿಕೆಟ್ ಕಬಳಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅಶ್ವಿನ್, 'ಜೀವನದಲ್ಲಿ ನಾನು ಮೊದಲು ಆಟೊಗ್ರಾಫ್ ಪಡೆದದ್ದು ಗಾವಸ್ಕರ್ ಅವರಿಂದ. ಚೆಪಾಕ್ ಕ್ರೀಡಾಂಗಣದಲ್ಲಿ ಅವರ ಬಳಿ ಹೋದ ಸಂದರ್ಭ ಈಗಲೂ ನೆನಪಾಗುತ್ತಿದೆ' ಎಂದು ಹಳೆಯ ನೆನಪುಗಳನ್ನು ಮೆಲಕು ಹಾಕಿದರು.[ಮುತ್ತಯ್ಯ ದಾಖಲೆಯನ್ನು ಮುರಿದ ರವಿಚಂದ್ರನ್ ಅಶ್ವಿನ್]
ಐಪಿಎಲ್ ಟೂರ್ನಿಯಲ್ಲಿ ಗಮನ ಸೆಳೆದ ತಮಿಳುನಾಡಿನ ಯುವ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಶ್ವಿನ್ 'ವಿಜಯ್ ಹಜಾರೆ ಟೂರ್ನಿಯಲ್ಲೂ ವಾಷಿಂಗ್ಟನ್ ಸುಂದರ್ ಉತ್ತಮ ಬೌಲಿಂಗ್ ಮಾಡಿದ್ದಾರೆ ಎಂದು ಕೊಂಡಾಡಿದರು.
ಶುಭ್ ಮಾನ್ ಗಿಲ್ ಗೆ ಪ್ರಶಸ್ತಿ: ಯುವ ಬ್ಯಾಟ್ಸ್ ಮನ್ ಶುಭ್ ಮಾನ್ ಗಿಲ್ ಅವರಿಗೆ ವರ್ಷದ ಯುವ ಆಟಗಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications